‘ಬದುಕು ಬೆತ್ತಲಾದಾಗ’ ಲೇಖಕ ದೇವರಾಜು ಚನ್ನಸಂದ್ರ ಅವರ ಕಾದಂಬರಿ. ಪ್ರತಿಯೊಬ್ಬರ ಜೀವನದಲ್ಲೂ ಹಲವು ತಿರುವುಗಳಿರುತ್ತವೆ. ಆ ತಿರುವುಗಳು ಜೀವನದ ದಿಕ್ಕುದೆಸೆಗಳನ್ನೇ ಬದಲಿಸುತ್ತವೆ. ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಎಡವಿದರೆ ಜೀವನ ಎಷ್ಟು ದುಸ್ತರವಾಗಬಲ್ಲದು ಎಂಬುದನ್ನು ಈ ಕಾದಂಬರಿ ಮಾರ್ಮಿಕವಾಗಿ ತಿಳಿಸುತ್ತದೆ.
ಮಾನವೀಯ ಹಾಗೂ ಭಾವನಾತ್ಮಕ ಸಂಬಂಧಗಳನ್ನು ಅದ್ಭುತವಾಗಿ ಹೊಸೆದಿರುವ ಈ ಕಾದಂಬರಿ ಮನುಷ್ಯ ಬೆಳೆಯುತ್ತಿದ್ದಂತೆ ಬಣ್ಣದ ಕನಸುಗಳ ಲೋಕವು ತನ್ನ ಕರಾಳ ಸತ್ಯಗಳನ್ನು ಕಳಚಿ ಬದುಕಿನ ವಾಸ್ತವಾಂಶಗಳನ್ನು ಒಂದೊಂದಾಗಿ ತೆರೆದಿಡುತ್ತಾ ಹೋಗುತ್ತದೆ. ಜೀವನವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಹುಂಬತನ ಪ್ರದರ್ಶಿಸಿದರೆ ಹಾಗೂ ಬದಲಾವಣೆಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳದಿದ್ದರೆ ಏನಾಗುತ್ತದೆ ಎಂಬುದನ್ನು ಇಲ್ಲಿ ಅರ್ಥಪೂರ್ಣವಾಗಿ ವಿವರಿಸಲಾಗಿದೆ.
ದೇವರಾಜು ಚನ್ನಸಂದ್ರರವರು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಚನ್ನಸಂದ್ರ ಗ್ರಾಮದವರು. ತಂದೆ- ಈರೇಗೌಡ, ತಾಯಿ- ಮಹದೇವಮ್ಮ. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲಿ ಪಡೆದ ದೇವರಾಜು ಅವರು ಪ್ರೌಢ ಶಿಕ್ಷಣವನ್ನು ಕೋಡಿಹಳ್ಳಿಯ ಶ್ರೀಶಾರದಾ ಹೈಸ್ಕೂಲ್ ನಲ್ಲಿ ಪಡೆದುಕೊಂಡರು. ಕಾಲೇಜು ಶಿಕ್ಷಣವನ್ನು ಕನಕಪುರದ ವಿದ್ಯಾದಾನಿ ಮತ್ತು ಕರ್ಮಯೋಗಿ ಶ್ರೀ ಎಸ್. ಕರಿಯಪ್ಪನವರ ರೂರಲ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ ದೇವರಾಜು ಅವರು ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಹಲವಾರು ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿರುವ ದೇವರಾಜ್ ಆಪ್ತಸಮಾಲೋಚಕರಾಗಿ ಸುಮಾರು 5 ವರ್ಷ ಕಾರ್ಯ ನಿರ್ವಹಿಸಿ ಮತ್ತೈದು ವರ್ಷ ಜೀವನ ಕೌಶಲ್ಯ ...
READ MORE