ಈ ಕಾದಂಬರಿಯಲ್ಲಿನ ಒಬ್ಬ ಅಮಾಯಕ ಪಾತ್ರದ ನಿಸ್ಸಾಯಕ ಹೆಣ್ಣಿನ ಅನಿಸಿಕೆ ಹೀಗಿದೆ. “ತೀರಾ ಬಾಯಾರಿ ಬಳಲಿ ಸೋತು ಹೋದ ಮನುಷ್ಯ ಬದುಕಿಸಬಹುದಾದ ಒಂದೇ ಒಂದು ತೊಟ್ಟು ಜಲ ಸಿಕ್ಕಿದ್ರೂ ಬಾಯಿ ಹಾಕ್ತಾನೆ. ಆಗ ಅವನದೇ ಜೀವ ಅವ್ನಿಗೆ ಮುಖ್ಯವಾಗಿರುತ್ತೆ. ಬೇರೆಲ್ಲ ಗೌಣ. ನಂತರವೇ ಅದು ಕುಡಿಯಲು ಯೋಗ್ಯವೇ? ಅದರಿಂದ ತನಗೇನಾದರೂ ಹಾನಿಯೇ? ಇಲ್ಲ ಬೇರೆಯವರ ಸ್ವಾಸ್ತ್ಯ ಕೆಡುತ್ತದೆಯೇ? ಸಮಾಜದ ಕಟ್ಟುಪಾಡುಗಳನ್ನು ಅತಿಕ್ರಮಿಸಿದಂತಾಗುತ್ತದೆಯೇ? ಬೇರೆಯವರಿಗೆ ಇದರಿಂದ ಅನ್ಯಾಯವೇ? ತಾನು ಕುಡಿದ ಜಲ ಬೇರೆಯವರ ಸ್ವತ್ತಾ? ಇಷ್ಟೆಲ್ಲ ನಂತರದ ಯೋಚನೆ. ನನ್ನ ಸ್ಥಿತಿಯು ಹಾಗೆ ಇತ್ತು.”.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE