ಲೇವಡಿ ಟೈಪಿಸ್ಟ್‌

Author : ಬೀchi

Pages 160

₹ 100.00




Year of Publication: 2016
Published by: ಬೀchi ಪ್ರಕಾಶನ
Address: #34 ಇ ಬ್ಲಾಕ್‌ ಬಡಾವಣೆ, ಕೊಡಿಗೆಹಳ್ಳಿ ಗೇಟ್‌, ಸ್ವಾತಿ ಗಾರ್ಡನ್‌ ಹೋಟೆಲ್ ಹಿಂಭಾಗ, ಸಹಕಾರ ನಗರ, ಬೆಂಗಳೂರು-560092
Phone: 984009383/9916004649/7022162134

Synopsys

ಅಚಾನಕ್ಕಾಗಿ ಎದುರಾಗುವ ನಗರ ಬದುಕು ಸೃಷ್ಟಿಸುವ ತಲ್ಲಣಗಳನ್ನು ಹಿಡಿದಿಟ್ಟಿದ್ದಾರೆ ಬೀchi. ಇಲ್ಲಿ ಬರುವ ’ಚಂಚಲೆ’ ಒಂದು ಪಾತ್ರವೂ ಹೌದು ರೂಪಕವೂ ಹೌದು. ಹಾದರ- ಅದು ಸೃಷ್ಟಿಸುವ ಅನಾಹುತಗಳನ್ನು ಬಿಂಬಿಸುವ ದುರಂತ ಕತೆ ಇದು. 

ಚಂಚಲೆಯ ದೈಹಿಕ ವಾಂಛೆಗಳು ದುರಂತದ ಸರಮಾಲೆಯನ್ನೇ ತೆರೆಯುತ್ತವೆ. ಇತ್ತ ತಾಯಿಯನ್ನೂ ಅತ್ತ ಪ್ರಿಯತಮರನ್ನೂ ಕೊನೆಗೆ ತನ್ನ ಮಗುವನ್ನೂ ಕಳೆದುಕೊಳ್ಳುವ ಆಕೆಯ ಒಂಟಿತನ ಓದುಗರ ಮಾನಸ ಸರೋವರವನ್ನು ಚಂಚಲಗೊಳಿಸದೇ ಇರದು. 

About the Author

ಬೀchi
(23 April 1913 - 07 December 1980)

'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...

READ MORE

Related Books