ಲಾಂದ್ರ

Author : ಪಲ್ಲವಿ ಬೇಲೂರು

Pages 232

₹ 250.00




Year of Publication: 2022
Published by: ಯದುನಂದನ ಪ್ರಕಾಶನ
Address: 1, ನೆಲಮಹಡಿ, ಬಿ.ಹೊನ್ನೇನಹಳ್ಳಿ, ಓಬಳಾಪುರ ಅಂಚೆ, ಬಾಗೂರು ಹೋಬಳಿ, ಚನ್ನರಾಯಪಟ್ಟಣ ತಾಲೂಕು, ಹಾಸನ - 573111
Phone: 9108554099

Synopsys

ಲಾಂದ್ರ ಪಲ್ಲವಿ ಬೇಲೂರು ಅವರ ಕಾದಂಬರಿಯಾಗಿದೆ. ಮನದೊಳಗಣ ನಿರ್ಲಿಪ್ತತೆಗೆ ವೈರುಧ್ಯ ವಾತಾವರಣ. ಸೂಕ್ಷ್ಮ ಸಂಭ್ರಮವನ್ನೆಲ್ಲಾ ಮಾಸಿ ಮೇಲ್ಮೊಗ ಹೊತ್ತು ಹೊರಟ ಅದಾವುದೋ ಯಾನಕ್ಕೆ ಸಿಕ್ಕ ಒಂಟಿ ಚಿನ್ಹೆಯಂತೆ.. ಊರ್ಧ್ವ ನೋಟದಂತೆ.. ಘನಿಕಟ್ಟಿದ ನೆನಪಿನಂತೆ ತರಗೆಲೆಯಾಗಿ ಉದುರಿದ ಕನಸುಗಳನ್ನು ಮರುಕಳಿಸಲೆಂಬಂತೆ ಒಣಗಿದ ಛಲಕ್ಕೆ ತಂಪನರಸಲು ಬೇರುಗಳನ್ನು ಒಡಲಾಳಕ್ಕೆ ಅಟ್ಟಿ ಉಸಿರು ಬಿಗಿದು ನಿಂತ ಸಂಕಲ್ಪದಂತೆ ನಿಂತಿದ್ದ ಅದೇ ಆ ಮರ. ಬೋಳು ಮರ. ಆರಂಭದಲ್ಲಿ ಲಾಂದ್ರ ದ ಮಂದ ಬೆಳಕಿನಲ್ಲಿ ಗೋಚರಿಸಿದ ಈ ಸಾಲುಗಳು ಮ್ಲಾನ ಮನಬನದ ಬಣ್ಣನೆಯನ್ನು ಅದೆಷ್ಟು ಗಾಢವಾಗಿ, ಆಳವಾಗಿ ಅದುಮಿಟ್ಟ ಭಾವೋನ್ಮಿಡಿತಗಳನ್ನು ಕಟ್ಟಿಕೊಟ್ಟಿವೆ ಎಂದರೆ ಓದುಗರ ಎದೆಯಿಂದ ವಾವ್ಹ್ ಎಂಬ ಉದ್ಘಾರವೊಂದು ತನಗೆ ತಾನಾಗಿ ಹೊರಹೊಮ್ಮುವುದರಲ್ಲಿ ಸಂದೇಹವಿಲ್ಲ. ಓದಲು ಶುರುವಿಟ್ಟ ಆರಂಭದಲ್ಲಿ ವಿಪ್ಲವ ತರಂಗಗಳು ಮೂಡಿ ಕೌತುಕದ ಗಂಟನ್ನು ಬಿಡಿಸಿ ಬಯಲಾಗಿಸಲು ಸೋಜುಗದ ಮನ ಹವಣಿಸದಿರದು. ಮಹಾಮೌನಯಾಗಕ್ಕೆ ಸಿದ್ಧವಾಗಿ ಘನಬನದ ನಡುವಿನ ಧ್ಯಾನ ಮಂಟಪದ ಮೇಲಿರುವ ಯಜ್ಞಕುಂಡದೊಳಗಿನ ಭಾವೋತ್ಕರ್ಷಭರಿತ ಅಗ್ನಿಜ್ವಾಲೆಯಿಂದ ಸಿಡಿದ ಕಿಡಿಗಳು ಆರಿ ಹಸಿರಿನ ನಡುವಿನ ಪಸೆಯ ಸಿಂಚನಕ್ಕೆ ತಂಪಾಗಿ ಉರಿಯೊಡಲ ಕಾವಿಗೆ ಸೂತಕದ ಶಾಯಿಯಲ್ಲಿ ಚರಮಗೀತೆ ಬರೆದಂತೆ, ಏನಾಯಿತು ಈ ಮಿದು ಮನದ ಭಾವತರಂಗಿಣಿಗೆ...?? ಆಕೆಯ ಒಡಲಾಳದ ಈ ತೊಳಲಾಟದ ಮೂಲವೇನು..? ಎಂಬಿತ್ಯಾದಿ ಪ್ರಶ್ನೆಗಳನ್ನು ಹುಟ್ಟು ಹಾಕುವ ಬೋಳು ಮರದ ಗೋಳನ್ನಾದರೂ ಅರಿತವರಾರೋ.. ! ಕಥಾನಾಯಕಿಯ ಮನೋರಥದ ಗಾಲಿಗಳು ಕಡಗೀಲುಗಳಳಿದಂತೆ ಅನಿಶ್ಚಿತತೆಯ ಭಾವಾಂದೋಲನದಿಂದ ಆರಂಭವಾಗುವ ಕಾದಂಬರಿ ಲಾಂದ್ರದ ಕಥಾಹಂದರ ಮೊದಲೆರಡು ಪುಟ ದಿವ್ಯಮೌನದ ಅನುಭವ ನೀಡಿದರೂ ನಂತರ ದನಿಹುಟ್ಟಿ, ಮನಮುಟ್ಟಿ ಮುಂದೆ ಸಾಗುತ್ತ ಘನೀಗಟ್ಟಿದ ಮೌನದೊಳಗಿನ ಭಾವನೆಗಳಿಗೆ ಮಾತುಹುಟ್ಟಿ, ಮಿಡಿತಗಳಿಗೆ ಸ್ಪಂದನೆ ಸಿಕ್ಕಿ, ಪರಿಭಾವಗಳು ಪರಿಭಾಷೆಗಳ ರೂಪತಾಳುತ್ತಾ ಓದುಗರಲ್ಲಿ ವಿಶೇಷ ಆಸಕ್ತಿ ಕೆರಳಿಸುತ್ತಾ ಸಾಗುವುದು.

About the Author

ಪಲ್ಲವಿ ಬೇಲೂರು

ಪಲ್ಲವಿ ಬೇಲೂರು ಅವರು ಹಾಸನ ಜಿಲ್ಲೆಯ ಹೂವಿನಹಳ್ಳಿ ಕಾವಲ್ ಗ್ರಾಮದವರು. ತಂದೆ ಗುಂಡುರಾಜ್ ಮತ್ತು ತಾಯಿ ದಾಕ್ಷಾಯಿಣಿ. ಬೇಲೂರು ತಾಲ್ಲೂಕಿನ ದೊಡ್ಡಕೋಡಿಹಳ್ಳಿ ಗ್ರಾಮದ ಮಾರುತಿ.ಕೆ.ಬಿ ಯವರೊಂದಿಗೆ ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಬೇಲೂರು ತಾಲ್ಲೂಕಿನ ಸ.ಕಿ.ಪ್ರಾ.ಶಾಲೆ. ಮಂಚನಾಯಕನಹಳ್ಳಿ, ಸ.ಹಿ.ಪ್ರಾ.ಬಾಲಕಿಯರ ಶಾಲೆ ಬೇಲೂರು ಹಾಗೂ ಸ.ಕಿ.ಪ್ರಾ.ಶಾಲೆ ಮಲ್ಲನಹಳ್ಳಿ ಶಾಲೆಗಳಲ್ಲಿ 15 ವರ್ಷಗಳಿಂದ  ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನಿರಂತರ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಇವರು ಮುನ್ನೂರಕ್ಕೂ ಹೆಚ್ಚು ಕವನಗಳು ಮತ್ತು ಹಲವಾರು ಲೇಖನಗಳನ್ನು ...

READ MORE

Related Books