ನೀಲಿ ನಕ್ಷೆ

Author : ಅಮಿತಾ ಭಾಗವತ್

Pages 312

₹ 350.00




Year of Publication: 2023
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

'ನೀಲಿ ನಕ್ಷೆ’ ಅಮಿತಾ ಭಗವತ್‌ ಅವರ ರಚನೆಯ ಕಾದಂಬರಿಯಾಗಿದೆ. ಕಡಲ ಕಿನಾರೆಯಲ್ಲೆ ಹುಟ್ಟಿದ ನದಿಯಂಥ ಸರಯೂಳ, ಕಾಣದ ಕಡಲ ಕಡೆಗಿನ ತುಡಿತದ ಹೊಳಪಿನ ಕಥನ ಇದು. ಲವಲವಿಕೆಯ ಸಣ್ಣ ಊರಾದ ಕಾರವಾರದಿಂದ, ಹತ್ತನೇ ತರಗತಿಯ ನಂತರ, ಕೇವಲ ಸಿನೆಮಾದಲ್ಲಷ್ಟೆ ಕಂಡಿದ್ದ ಮುಂಬಯಿ ಶಹರಕ್ಕೆ ಬಂದ ಹುರುಪಿನ ಕಿಶೋರಿ ಸರಯೂ, ಆ ಮಹಾನಗರದ 'ಮಗಜಮಾರಿ'ಯ ಗೌಜಿಯಲ್ಲಿ ತನ್ನ ಹೆಜ್ಜೆ ದನಿಗಳನ್ನು ಹೊಸದಾಗಿ ಆಲಿಸುತ್ತ, 'ಕಿಟಕಿಯನ್ನು ಒದ್ದೆ ಬಟ್ಟೆಯಿಂದ ಒರೆಸುತ್ತ', ರೂಪುಗೊಂಡ ನಿಬಿಡ ಆವರಣ ಇದು. ಸಮಾಜ ಹೇರುವ ಅಯಾಚಿತ ಅಚ್ಚುಗಳಿಂದ, ಪಾತ್ರಗಳಿಂದ ಮುಕ್ತಗೊಳ್ಳುವುದು ನಿಜವಾದ 'ಗುರುತೆ'? ಅಥವಾ ಹೊಸದೊಂದು ಗುರುತಿಗಾಗಿ ಹವಣಿಸುವುದೇ? ಅಥವಾ ಯಾವುದೇ ಗುರುತಿನ ಹಂಗಿಲ್ಲದೆ ಪ್ರವಹಿಸುವುದೆ? - ಈ ಮೂರು ಎಳೆಗಳನ್ನು ಹಿಡಿದು ಕಟ್ಟಿದ ಜಡೆಯಂಥ ಈ ಕಾದಂಬರಿಯ ಹೆಣಿಗೆ ಘನವಾದದ್ದು. ನಿಡುಗಾಲದ ಮುಂಬಯಿವಾಸಿನಿ, ಹಿತಭಾಷಿಣಿ ಅಮಿತಾ ಭಾಗವತ್ ಅವರು ಯಾವ ತರಾತುರಿ ಇಲ್ಲದೆ ಬರೆದಿರುವ ಈ ಮೊದಲ ಕಾದಂಬರಿಯ ಶ್ರುತಿ, ಓಘ, ಸಂಯಮ, ಪಕ್ವತೆ ಅಚ್ಚರಿ ಹುಟ್ಟಿಸುವಂತಿದೆ. ಇಸ್ಪೀಟಿನ ಎಲೆಗಳನ್ನು ತಕ್ಷಣ ಅಲ್ಲಲ್ಲೇ ಕಲೆಸಿ ಹಂಚಿ ಮತ್ತೆ ಆಟ ಮುಂದುವರೆಸುವಂತೆ, ಇಲ್ಲಿಯ ಸನ್ನಿವೇಶ, ಪಾತ್ರ, ಆವರಣಗಳು ಒಂದರೊಳಗೊಂದು ಕಲೆಯುತ್ತ ಅಲ್ಲಲ್ಲೇ ಬೇರ್ಪಡುತ್ತ, ಮುಂದೆ ಚಲಿಸುವ ನಮೂನೆ ಚುರುಕಾಗಿದೆ, ಮುಂಬಯಿತನದ ಪ್ರತಿಫಲನವೂ ಆಗಿದೆ. ಕನ್ನಡ, ಕೊಂಕಣಿ, ಮರಾಠಿ, ಹಿಂದಿ, ಗುಜರಾತಿ.. ಎಲ್ಲ ಬೆರೆತ ಧಾಟಿಯೊಂದು ಇಲ್ಲಿಯ ಒಕ್ಕಣೆಗಿದೆ. ನಿತ್ಯ ಜೀವನದ ಅಗಣಿತ ಆರ್ದ್ರ ವಿವರಗಳಲ್ಲಿ ಮೈದಾಳಿರುವ ಈ ಕಾದಂಬರಿಯಲ್ಲಿ, ಬಿಡಿ ಮತ್ತು ಇಡಿ-ಗಳ ನಡುವೆ ಲೇಖಕಿ ಸಾಧಿಸಿರುವ ಹದ ಅಪರೂಪದ್ದಾಗಿದೆ. ಎಲ್ಲವೂ ಅಪರಿಚಿತದೆಡೆ ಮುಖ ಮಾಡಿದೆ.

About the Author

ಅಮಿತಾ ಭಾಗವತ್

ಅಮಿತಾ ಭಾಗವತ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕೊಂಕೇರಿ (ಕಡತೋಕಾ). ಅಮಿತಾರ ಬಾಲ್ಯ ಮತ್ತು ಕಾಲೇಜು ಶಿಕ್ಷಣ, ಕಡಲ ಕಿನಾರೆಯ ಕಾರವಾರದಲ್ಲಿ ಪೂರ್ಣಗೊಳಿಸಿದರು. ಮದುವೆಯ ನಂತರ ಮುಂಬಯಿಗೆ ಬಂದ ನಂತರ ಅವರು ಕಾನೂನು ಅಧ್ಯಯನ ಮಾಡಿ ಕಳೆದ ಮೂರು ದಶಕಗಳಿಂದ ನ್ಯಾಯವಾದಿಗಳಾಗಿದ್ದಾರೆ. ಕಳೆದ 15 ವರ್ಷಗಳಿಂದ ‘ಹವ್ಯಕ ಸಂದೇಶ’ ಎನ್ನುವ ಮುಂಬಯಿ ಕನ್ನಡ ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ. ಮುಂಬಯಿಯ ಕನ್ನಡ ಚಟುವಟಿಕೆಗಳಲ್ಲಿ ಆಸ್ಥೆಯಿಂದ ಪಾಲ್ಗೊಳ್ಳುತ್ತಾರೆ. ಆಗಾಗ ಕವಿತೆ, ಕಥೆ, ಪ್ರಬಂಧಗಳನ್ನು ಸದ್ದಿಲ್ಲದೆ ಬರೆಯುತ್ತಾ ಬಂದಿರುವ ಅವರ ಮೊದಲ ಕವನ ಸಂಕಲನ ‘ಕುಮುದಾಳ ಭಾನುವಾರ’ (2015), ‘ನೀಲಿ ನಕ್ಷೆ’ ಕಾದಂಬರಿಯು ...

READ MORE

Related Books