ಖ್ಯಾತ ಕಾದಂಬರಿಗಾತೀ ಗೀತಾ ನಾಗಭೂಷಣ ಅವರ ಕಾದಂಬರಿ-ವಾಸ್ತವ. ಸಮಕಾಲೀನ ಮಾನವರ ಬದುಕಿನ ಮತ್ತು ಪರಿಸರದ ಜ್ವಲಂತ ಘಟನೆಗಳನ್ನು ಅನಾಮತ್ತಾಗಿ ಇಲ್ಲಿ ಚಿತ್ರಿಸಲಾಗಿದೆ. ಕಲಬುರಗಿ ಜಿಲ್ಲೆಯ ಒಂದು ಹಳ್ಳಿಯಲ್ಲಿ ಬೇರು ಬಿಟ್ಟು ಈ ಕತೆ ಮಹಾರಾಷ್ಟ್ರದ ಮುಂಬಯಿಯವರೆಗೂ ಹಬ್ಬಿನಿಂತಿದೆ. ಕರ್ನಾಟಕದ ಜವಾರಿ ಕನ್ನಡ ಮತ್ತು ಮರಾಠಿ, ಹಿಂದಿ ಭಾಷೆಗಳ ಮಿಲಾವಟಗಳಿಂದ ಕೂಡಿದೆ. ಬೆವರು ಸುರಿಸಿ ಬದುಕು ಕಟ್ಟಿಕೊಳ್ಳುವ, ರಟ್ಟೆ ಮುರಿದು ಹೊಟ್ಟೆಗುಣ್ಣುವ, ದಿನ ನಿತ್ಯದ, ಬಡ ಕೂಲಿಕಾರನ ಬದುಕಿನ ಸುತ್ತಮುತ್ತ ಗಿರಕಿ ಹೊಡೆಯುವ ಘಟನೆಗಳೇ ಈ ಕಾದಂಬರಿಯ ಬೆನ್ನೆಲುಬು
ಕನ್ನಡದ ಲೇಖಕಿಯರಲ್ಲಿ ಒಬ್ಬರಾದ ಗೀತಾ ನಾಗಭೂಷಣ ಅವರು ತಮ್ಮ ಕಾದಂಬರಿ-ಕತೆಗಳ ಮೂಲಕ ಜನಪ್ರಿಯರಾದವರು. ಗುಲ್ಬರ್ಗದ ಬಡ ಕುಟುಂಬದಲ್ಲಿ 1942ರ ಮಾರ್ಚ್ 25ರಂದು ಜನಿಸಿದರು. ತಂದೆ ಶಾಂತಪ್ಪ-ತಾಯಿ ಶರಣಮ್ಮ. ಮೆಟ್ರಿಕ್ ಮುಗಿಸಿದ ಮೇಲೆ ಕೆಲವುಕಾಲ ಕಲೆಕ್ಟರ್ ಕಛೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಓದಿ ಪದವಿ ಪಡೆದು, ಸಂಜೆ ಕಾಲೇಜಿನಲ್ಲಿ ಓದಿ ಬಿಎಡ್ ಮತ್ತು ಎಂ.ಎ. ಪದವಿ ಗಳಿಸಿದರು. ಓದುವಾಗಲೇ ಉದ್ಯೋಗ ಮಾಡುತ್ತಿದ್ದ ಇವರು ಎಂ.ಎ. ಪದವಿ ಗಳಿಸಿದ ನಂತರ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ 30ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು. ...
READ MORE