ಶ್ರೀಲ ಪ್ರಭುಪಾದರ ಜೀವನಾಧಾರಿತ ಕಾದಂಬರಿ-ಮಹಾಸಾಧಕ. ಡಾ. ಬಾಬು ಕೃಷ್ಣಮೂರ್ತಿ ಅವರು ಕೃತಿಯ ನಿರ್ಮಾತೃ. ಪ್ರಾಪಂಚಿಕ ವ್ಯಸನದಲ್ಲಿ ಬಳಲುವವರ ಉದ್ಧಾರಕ್ಕಾಗಿ ಪೂರ್ವದಿಂದ ಪಶ್ಚಿಮಕ್ಕೆ ಪಯಣ ಹೊರಟ ಶ್ರೀಲ ಪ್ರಭುಪಾದರು ಕೃಷ್ಣಪ್ರಜ್ಞೆಯನ್ನು ಪ್ರಜ್ವಲಿಸಿದವರು. ವಿಶ್ವದೆಲ್ಲೆಡೆ 108 ಕೃಷ್ಣ ದೇವಸ್ಥಾನಗಳನ್ನು ನಿರ್ಮಿಸಿದ ಅವರು ಇಸ್ಕಾನ್ ಸಂಸ್ಥೆಯ ಮೂಲಕ ಕೃಷ್ಣ ಜ್ಞಾನದ ಪ್ರಸಾರ ಕೈಗೊಂಡರು. ಕೃಷ್ಣಪ್ರಜ್ಞೆ ಉತ್ತಮ ಫಸಲು ಬೆಳೆದ ‘ಮಹಾಸಾಧಕ’ರಿವರು. ಭಕ್ತಿಕ್ರಾಂತಿ, ನೈತಿಕ ಕ್ರಾಂತಿಗೆ ಪ್ರೇರಣೆ ನೀಡಿದವರು. ಇಂತಹ ಮಹಾನ್ ಚೇತನದ ಚರಿತ್ರೆಯನ್ನು ಅರಿತು ಕಾದಂಬರಿ ಮೂಲಕ ಅವರ ದಿವ್ಯ ಶಕ್ತಿಯನ್ನು ಅನಾವರಣಗೊಳಿಸಿದ್ದು ಈ ಕೃತಿಯ ವೈಶಿಷ್ಟ್ಯ.
ಸಾಹಿತ್ಯ, ಪತ್ರಿಕೋದ್ಯಮ ಎರಡು ಕ್ಷೇತ್ರಗಳಲ್ಲೂ ಚಿರಪರಿಚಿತರಾದ ಬಾಬು ಕೃಷ್ಣಮೂರ್ತಿ ಹುಟ್ಟಿದ್ದು ಬೆಂಗಳೂರು. ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಅತೀವ ಆಸಕ್ತಿ. ಅವರ ಸಂಪಾದಕತ್ವದಲ್ಲಿ ಬಾಲಮಂಗಳ (ಪಾಕ್ಷಿಕ), ಬಾಲಮಂಗಳ ಚಿತ್ರಕಥಾ (ಮಕ್ಕಳ ವ್ಯಂಗ್ಯ ಚಿತ್ರ ಪಾಕ್ಷಿಕ), ಗಿಳಿವಿಂಡು (ಶಿಶು ಪಾಕ್ಷಿಕ ಪತ್ರಿಕೆ) ಪ್ರಕಟವಾಗಿವೆ. ಇವರು ರಚಿಸಿದ ಸ್ವಾತಂತ್ರ್ಯವೀರ ಚಂದ್ರಶೇಖರ ಆಜಾದ್ ಕುರಿತು ಆರು ವರ್ಷ ಕಾಲ ಸಂಶೋಧನೆ, ಸ್ಥಳವೀಕ್ಷಣೆ ನಡೆಸಿ ರಚಿಸಿದ ಕೃತಿ ‘ಅಜೇಯ’. ಅವರ ಪ್ರಮುಖ ಕೃತಿಗಳು - ಅಜೇಯ (1974), ಸಿಡಿಮದ್ದು ನೆತ್ತರು ನೇಣುಗಂಬ (1984), ಅದಮ್ಯ (1984), ರುಧಿರಾಭಿಷೇಕ (2005), ಡಾ. ಸಿ.ಜಿ. ಶಾಸ್ತಿಒಂದು ಯಶೋಗಾಥೆ (2007), 1857-ಭಾರತದ ಸ್ವಾತಂತ್ರ್ಯ ಸಂಗ್ರಾಮ (2007), ...
READ MORE