ದಯವಿಟ್ಟು ನಂತರ ಪ್ರಯತ್ನಿಸಿ

Author : ವೆಂಕೋಬರಾವ್ ಎಂ.ಹೊಸಕೋಟೆ

Pages 100

₹ 100.00




Year of Publication: 2022
Published by: ವಂಶಿ ಪಬ್ಲಿಕೇಷನ್ಸ್
Address: ನೆಲಮಂಗಲ, ಬೆಂಗಳೂರು- 562123
Phone: 9916595916

Synopsys

ಡಾ. ವೆಂಕೋಬರಾವ್ ಎಂ. ಹೊಸಕೋಟೆ ಅವರು ರಚಿಸಿರುವ ರಾಜಕೀಯ ಕಾದಂಬರಿ ‘ದಯವಿಟ್ಟು ನಂತರ ಪ್ರಯತ್ನಿಸಿ’. ಆಧುನಿಕತೆಯಲ್ಲಿ ಇಂದಿನ ರಾಜಕೀಯ ರಂಗಿನಾಟಗಳ ಸ್ವಷ್ಟ ಚಿತ್ರಣವನ್ನು ಕೊಡಲು ಇಲ್ಲಿ ಪ್ರಯತ್ನಿಸಿರುವೆ ಎಂದಿದ್ದಾರೆ ಲೇಖಕ ವೆಂಕೋಬರಾವ್ ಎಂ. ಹೊಸಕೋಟೆ. ಜೊತೆಗೆ ಸಾಮಾಜಿಕವಾಗಿ ಹೆಣ್ಣು ಹೇಗೆ ಶೋಷಣೆಗೆ ಗುರಿಯಾಗುತ್ತಾಳೆ. ಹೆಣ್ಣು, ಹೆಣ್ಣಿಗೆ ಸಹಾಯ ಮಾಡಿದರೇ, ಆಕೆಯ ಬದುಕನ್ನು ಬದಲಿಸಬಹುದು ಎನ್ನುವುದಕ್ಕೆ ಈ ಕಾದಂಬರಿ ಸಾಕ್ಷಿಯಾಗುತ್ತದೆ. ಅಲ್ಲದೇ ಮನಸ್ಸು ಮಾಡಿದರೇ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ತನ್ನ ಗುರಿಯನ್ನು ಮುಟ್ಟಬಹುದು. ಕುಟುಂಬ, ಸಮುದಾಯ ಮತ್ತು ಸಮಾಜ ಹಾಗೂ ರಾಜಕೀಯದ, ಅಧಿಕಾರಿ ವರ್ಗದವರ ಸಹಾಯ ಸಿಕ್ಕಾಗ ಗುರಿಯನ್ನು ತಲುಪುವುದು ಸುಲಭವಾಗುತ್ತದೆ. ಸಮಾಜ ಘಾತುಕ ಶಕ್ತಿಗಳಲ್ಲಿ ತೊಡಗಿ, ಸಮಾಜದಲ್ಲಿ ಅಶಾಂತಿಯುಂಟು ಮಾಡುತ್ತಾರೆ ಎಂಬುದನ್ನು ಪ್ರಸ್ತುತ ವಾಸ್ತವ ಘಟನೆಗಳನ್ನಾಧರಿಸಿ, ಅವುಗಳನ್ನೇ ವಸ್ತುವನ್ನಾಗಿಸಿಕೊಂಡು ಕಾದಂಬರಿಯನ್ನು ಬರೆದಿರುವೆನು ಎಂದಿದ್ದಾರೆ.

About the Author

ವೆಂಕೋಬರಾವ್ ಎಂ.ಹೊಸಕೋಟೆ

ಲೇಖಕ ಡಾ.ವೆಂಕೋಬರಾವ್ ಎಂ.ಹೊಸಕೋಟೆ ಅವರು ಕನ್ನಡದಲ್ಲಿ ಎಂ.ಎ, ತತ್ವಶಾಸ್ತ್ರದಲ್ಲಿ ಎಂ.ಎ, ಎಂ.ಎಡ್. ಎಂ.ಫಿಲ್ ಶಿಕ್ಷಣ ಸೇರಿದಂತೆ ಕನ್ನಡ ಸಾಹಿತ್ಯದಲ್ಲಿ ಪಿಎಚ್.ಡಿಯನ್ನು ಪಡೆದಿದ್ದಾರೆ. ಸದ್ಯ  ರಾಜಾಜಿನಗರದ ಎಂ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ತಂದೆ- ಮುನಿದೇವರಾವ್ ಸಿ, ತಾಯಿ- ಅನುಸೂಯಬಾಯಿ ಎ. ವೃತ್ತಿಯೊಂದಿಗೆ ಸಾಹಿತ್ಯಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವ ಅವರು ತಲ್ಲಣ, ಒಡಲು, ಮತ್ತೆ ಆಮೇಲೆ ಇನ್ನೇನೂ, ಲಾಕ್ ಡೌನ್ ಋತುಮಾನ, ದಯವಿಟ್ಟು ನಂತರ ಪ್ರಯತ್ನಿಸಿ ಎಂಬ ಕಾದಂಬರಿಗಳು. ಮಿಂಚುಳ್ಳಿ, ಬೆಸುಗೆ, ಕಾಣದ ಕಡಲು, ಆಕಾಶದ ನೀಲಿಯಲ್ಲಿ, ಪ್ರೀತಿ ನೀನಿಲ್ಲದ ಮೇಲೆ ಎಂಬ ಕವನ ಸಂಕಲನಗಳು. ಅಂಚು, ಕಪ್ಪುನೆಲ, ಅಸ್ಮಿತೆಯ ...

READ MORE

Related Books