ಮಿರ್ಜಿ ಅಣ್ಣಾರಾಯ ಅವರ ಕಾದಂಬರಿ-ಹದಗೆಟ್ಟ ಹಳ್ಳಿ. ಭಾರತದ ಬಹುತೇಕ ಹಳ್ಳಿಗಳು ಸೌಕರ್ಯಗಳಿಂದ ಮಾತ್ರವಲ್ಲ; ಸಾಂಸ್ಕೃತಿಕವಾಗಿಯೂ ಹದಗೆಟ್ಟಿವೆ. ಇಲ್ಲಿ ವ್ಯಕ್ತಿಯ ವಿಶಿಷ್ಟ ಹೆಸರಿರದಿದ್ದರೂ ಸರಪಂಚ, ಶಿಕ್ಷಕ, ಸಹಾರಿ ಸಂಘದ ಅಧ್ಯಕ್ಷ, ಪಾಲಕಾರ, ಪೊಲೀಸ್ ಹೀಗೆ ಈ ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸುತ್ತಾರೆ. ಒಂದು ಹಳ್ಳಿಯ ವಿವಿಧ ಸ್ಥಳ-ಸನ್ನಿವೇಶಗಳಲ್ಲಿ, ಆಯಾ ವ್ಯಕ್ತಿಗಳು ಸೇರಿ ಪ್ರಸಂಗಗಳನ್ನು ರೂಪಿಸುತ್ತವೆ. ಒಂದು ಹಳ್ಳಿಯ ಮರ್ಯಾದಿತ ಕ್ಷೇತ್ರದಲ್ಲಿ, ಒಂದು ವಾರದ ಅವಧಿಯಲ್ಲಿ ನಡೆಯುವ ಘಟನೆಗಳಿಂದ ಕೂಡಿದ ಕಥಾನಕಗಳಿರುವುದು ಈ ಕಾದಂಬರಿಯ ವೈಶಿಷ್ಟ್ಯ. ಇಲ್ಲಿ ಶಿಕ್ಷಕನ ಪಾತ್ರವು ಕಾದಂಬರಿಯ ಪ್ರಮುಖವಾಗಿದೆ. ಸಾಮಾಜಿಕ ಜೀವನ ಚಿತ್ರಣವೇ ಇಲ್ಲಿ ಪ್ರಾಧಾನ್ಯತೆ ಪಡೆದಿದ್ದರೂ ಗೃಹ ಜೀವನಕ್ಕೂ ಆದ್ಯತೆ ನೀಡಿದೆ ಎಂದು ಲೇಖಕ ಮಿರ್ಜಿ ಅಣ್ಣಾರಾಯರು ಕಾದಂಬರಿ ಆರಂಭದ ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದ್ದಾರೆ.
ಪ್ರಸಿದ್ಧ ಸಾಹಿತಿಗಳು, ಸಮಾಜ ಸುಧಾರಕರೂ ಆದ ಮಿರ್ಜಿ ಅಣ್ಣಾರಾಯರು ಹುಟ್ಟಿದ್ದು (ಜನನ 25-03-1918, ಮರಣ: 11-12-1975) ಬೆಳಗಾವಿ ಜಿಲ್ಲೆಯ ಶೇಡಬಾಳದಲ್ಲಿ. ಕನ್ನಡ ಭಾಷೆಯ ಜೊತೆಗೆ ಮರಾಠಿ, ಹಿಂದಿ, ಇಂಗ್ಲಿಷ್, ಗುಜರಾತಿ ಭಾಷೆಗಳಲ್ಲಿ ಪ್ರಭುತ್ವ. ಪಡೆದಿದ್ದರು. ನಿಸರ್ಗ’ ಇವರು ಬರೆದ ಮೊದಲ ಕಾದಂಬರಿ. ಭಾಷೆಯ ಹೊಸತನ, ಸರಳ ನಿರೂಪಣೆಯಿಂದ ಕೂಡಿದ ಕಾದಂಬರಿ. ಚಾರಿತ್ರಿಕ ಕಾದಂಬರಿಗಳು: ಸಾಮ್ರಾಟ್ ಶ್ರೇಣಿಕ, ಚಾವುಂಡರಾಯ. ಪೌರಾಣಿಕ ಕಾದಂಬರಿ- ಋಷಭದೇವ. ಕಥಾಸಂಕಲನಗಳು-ಪ್ರಣಯ ಸಮಾ, ಅಮರ ಕಥೆಗಳು, ವಿಜಯಶ್ರೀ. ಶೈಕ್ಷಣಿಕ ಗ್ರಂಥಗಳು-ಭಾಷಾ ಶಿಕ್ಷಣ, ಲೇಖನ ಕಲೆ, ಮೂಲ ಶಿಕ್ಷಣದ ಮೌಲ್ಯಮಾಪನ. ವಿಮರ್ಶಾ ಕೃತಿಗಳು-ದತ್ತವಾಣಿ, ವಿಮರ್ಶೆಯ ಸ್ವರೂಪ, ಭರತೇಶನ ...
READ MORE