‘ಕಡೆಯ ಚಿರತೆ’ ಕೃತಿಯು ಶಶಿಧರ ವಿಶ್ವಾಮಿತ್ರ ಅವರ ಕಿರುಕಾದಂಬರಿಯಾಗಿದೆ. ‘ಕಡೆಯ ಚಿರತೆ’ ಕರ್ನಾಟಕ ಸಾಹಿತ್ಯ ಅಕಾಡೆಮಿ’ಯ ಮಾನವಿಕ ವಿಭಾಗದ 1986ನೆಯ ಸಾಲಿನ ಪುಸ್ತಕ ಬಹುಮಾನವನ್ನು ಪಡೆದುಕೊಂಡಿದೆ. ಲೇಖಕರೇ ಸೂಚಿಸಿರುವಂತೆ ಸಣ್ಣಕತೆಯಾಗಿ ಬರೆಯ ಹೊರಟ ‘ಕಡೆಯ ಚಿರತೆ’ ಸುಮಾರು ಒಂದು ವರ್ಷ ಹುದುಗಿನಲ್ಲಿದ್ದು 1984ರಲ್ಲಿ ನೀಳ್ಗತೆಯಾಗಿ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿತು. ಒಡನೆಯೇ ಜನತೆಯ ಆದರವನ್ನು ಪಡೆದುಕೊಂಡಿತು. ಒಂದೆರಡು ತಲೆಮಾರಿನ ಹಿಂದೆ ನಾವಿರುವ ಊರುಗಳ ನೆರೆಯಲ್ಲಿ ಅಳಿದುಳಿದ ಗುಡ್ಡಗಾಡಿನಲ್ಲಿ, ಕಿರುಗಾಡು, ಕುರುಚಲು ಕಾಡಿನಲ್ಲಿ ನೆಲೆ ಹಿಡಿದು ಬದುಕು ಮಾಡುತ್ತಿದ್ದ ಚಿರತೆ ಎಂಬ ರಮಣೀಯ ಪ್ರಾಣಿಗಳ ಬಹುಕಠಿಣ ಬಾಳು, ಬದುಕು, ವಿರಸ, ಸರಸಗಳು, ಕೂಡುವಳಿ/ಮರಿಗಳ ಪಾಲನ, ಪೋಷಣ, ಮನುಷ್ಯನ ಮಸಲತ್ತುಗಳ ಕುರಿತ ಈ ಕರುಳು ಹಿಂಡುವ ಕಿರುಕಾದಂಬರಿಯ ಯಾತನೆಯ ಬಿಳುಲುಗಳು ಯಾವುದೇ ಓದುಗನನ್ನು ಸುತ್ತುವರಿಯದೇ ಇರವು ಎಂದಿದೆ.
ಶಶಿಧರ ವಿಶ್ವಾಮಿತ್ರ ಅವರು ಬರಹಗಾರರು ಕೃತಿಗಳು: ಖಿಲ, ವಿಜ್ಞಾನಿಗಳ ಬೆಳಕು, ಬಯಲು (ಅನುವಾದ), ಸರಳ ಆರೋಗ್ಯ ವಿಜ್ಞಾನ, ಸಂಚಿ (ಆತ್ಮಕಥೆ), ಹಿಂದೂ ಧರ್ಮ ಭಾರತೀಯ ಪರಂಪರೆಯ ಬೆಳಕು, ಪದ ಕುಸಿಯೇ ನೆಲವಿಹುದು, ಸೃಷ್ಟಿಯ ರಂಗವಲ್ಲಿ. ...
READ MORE