ಹಳ್ಳಿ ಮನಸ್ಸುಗಳ ಬದುಕನ್ನು ಬಿತ್ತರಿಸುವ ಕಾದಂಬರಿ ಕಂದೀಲು. ಈ ಕೃತಿಯ ಕುರಿತು ಜೋಗಿ ಅವರು ಬರೆಯುತ್ತ, ’ಕತ್ತಲು ಇರುವಾಗ ಕಂದೀಲು ಬೇಕು. ಕಂದೀಲು ಇರುವಲ್ಲಿ ಕತ್ತಲು ಇರುವುದಿಲ್ಲ. ಈ ವಿಪರ್ಯಾಸವನ್ನು ಒಡಲಲ್ಲಿ ಇಟ್ಟುಕೊಂಡು ಹುಟ್ಟಿರುವ ಸೋಮು ರೆಡ್ಡಿಯವರ ಕಾದಂಬರಿ ಒಂದು ಹಳ್ಳಿಯ ಮನಸ್ಸನ್ನು ಬಿಚ್ಚಿಡುತ್ತಾ ಹೋಗುತ್ತದೆ. ಕುಸುಮಳ ಅಂತರಂಗದ ಕಂದೀಲಿನ ಬೆಳಕು, ಜ್ವಾಲೆಯಾಗಿ ಬದಲಾಗುವ ಕ್ಷಣ ನಮ್ಮನ್ನು ಬೆಚ್ಚಿ ಬೀಳಿಸುವ ಹಾಗೆಯೇ, ಆ ಬದಲಾವಣೆಯನ್ನು ಸಹಜವಾಗಿ ಸ್ವೀಕರಿಸುವ ಊರು ದಿಗ್ಭ್ರಮೆಗೊಳಿಸುತ್ತದೆ.
ಇದೆಲ್ಲ ಎಷ್ಟು ಚೆನ್ನಾಗಿದೆ ಎಂದು ಉದ್ಗರಿಸಲಿಕ್ಕೂ ಆಗದಂತೆ ಇಲ್ಲಿ ನಡೆಯುವ ಘಟನೆಗಳು ಒಮ್ಮೆ ಅಚ್ಚರಿಗೊಳಿಸುತ್ತಾ ಮತ್ತೊಮ್ಮೆ ಆಘಾತಗೊಳಿಸುತ್ತಾ ದೇವರೇ, ಇವೆಲ್ಲ ಸುಳ್ಳಾಗಿರಲಿ ಎಂದುಕೊಳ್ಳುವಂತೆ ಮಾಡುತ್ತಾ ನಮ್ಮ ಅರಿವು ಅನುಭವವನ್ನು ಕಂಗಾಲು ಮಾಡುತ್ತವೆ. ಇಲ್ಲಿಯ ಜಗತ್ತು ನನಗೆ ಹೊಸತು. ಆರಂಭದಲ್ಲಿ ಕುಂವೀ ಕತೆಗಳನ್ನು ಓದುತ್ತಾ ಬೆರಗಾದ ಹಾಗೆ ನಾನು ಈ ಪ್ರಸಂಗಗಳನ್ನು ಓದುವಾಗಲೂ ಬೆರಗಾದೆ. ಸೋಮು ರೆಡ್ಡಿಯವರ ಅನುಭವ, ಅದು ಕಾದಂಬರಿಯಾದ ರೀತಿ ಮತ್ತು ಅವರು ಅದನ್ನು ಹೊರಗೆ ನಿಂತು ನಿರೂಪಿಸುವ ಕ್ರಮ ಎಲ್ಲವೂ ಹೊಸತಾಗಿದೆ. ಗೊತ್ತಿಲ್ಲದ ಊರಲ್ಲಿ ಒಂದು ಬೆಳಗ್ಗೆ ಧುತ್ತೆಂದು ಇಳಿದವನಂತೆ ನಾನು ದಿಕ್ಕೆಟ್ಟಿದ್ದೇನೆ. ಈ ಕಾದಂಬರಿ ಅಷ್ಟರ ಮಟ್ಟಿಗೆ ಹೊಸ ಲೋಕವನ್ನು ತೋರಿಸುತ್ತದೆ’ ಎಂದಿದ್ದಾರೆ. ಇದು ಕೃತಿಯ ಕುರಿತು ಒಳನೋಟವನ್ನು ವಿವರಿಸುವಂತಿದೆ.
ಕಂದೀಲು’ ಕೃತಿ ಹುಟ್ಟಿದ ಬಗೆಯನ್ನು ಕಾದಂಬರಿಕಾರ ಸೋಮು ರೆಡ್ಡಿ ಅವರ ಅನುಭಾವದ ಮಾತು
ಈ ಕಾದಂಬರಿಯ ಬಗ್ಗೆ ಹಿರಿಯ ಪತ್ರಕರ್ತ-ಲೇಖಕ ಜೋಗಿ ಅವರ ಅಭಿಪ್ರಾಯ ಇಲ್ಲಿದೆ-
ಕತ್ತಲು ಇರುವಾಗ ಕಂದೀಲು ಬೇಕು. ಕಂದೀಲು ಇರುವಲ್ಲಿ ಕತ್ತಲು ಇರುವುದಿಲ್ಲ. ಈ ವಿಪರ್ಯಾಸವನ್ನು ಒಡಲಲ್ಲಿ ಇಟ್ಟುಕೊಂಡು ಹುಟ್ಟಿರುವ ಸೋಮು ರೆಡ್ಡಿಯವರ ಕಾದಂಬರಿ ಒಂದು ಹಳ್ಳಿಯ ಮನಸ್ಸನ್ನು ಬಿಚ್ಚಿಡುತ್ತಾ ಹೋಗುತ್ತದೆ. ಕುಸುಮಳ ಅಂತರಂಗದ ಕಂದೀಲಿನ ಬೆಳಕು, ಜ್ವಾಲೆಯಾಗಿ ಬದಲಾಗುವ ಕ್ಷಣ ನಮ್ಮನ್ನು ಬೆಚ್ಚಿ ಬೀಳಿಸುವ ಹಾಗೆಯೇ, ಆ ಬದಲಾವಣೆಯನ್ನು ಸಹಜವಾಗಿ ಸ್ವೀಕರಿಸುವ ಊರು ದಿಗ್ಭ್ರಮೆಗೊಳಿಸುತ್ತದೆ. ಇದೆಲ್ಲ ಎಷ್ಟು ಚೆನ್ನಾಗಿದೆ ಎಂದು ಉದ್ಗರಿಸಲಿಕ್ಕೂ ಆಗದಂತೆ ಇಲ್ಲಿ ನಡೆಯುವ ಘಟನೆಗಳು ಒಮ್ಮೆ ಅಚ್ಚರಿಗೊಳಿಸುತ್ತಾ ಮತ್ತೊಮ್ಮೆ ಆಘಾತಗೊಳಿಸುತ್ತಾ ದೇವರೇ, ಇವೆಲ್ಲ ಸುಳ್ಳಾಗಿರಲಿ ಎಂದುಕೊಳ್ಳುವಂತೆ ಮಾಡುತ್ತಾ ನಮ್ಮ ಅರಿವು ಅನುಭವವನ್ನು ಕಂಗಾಲು ಮಾಡುತ್ತವೆ.
ಇಲ್ಲಿಯ ಜಗತ್ತು ನನಗೆ ಹೊಸತು. ಆರಂಭದಲ್ಲಿ ಕುಂವೀ ಕತೆಗಳನ್ನು ಓದುತ್ತಾ ಬೆರಗಾದ ಹಾಗೆ ನಾನು ಈ ಪ್ರಸಂಗಗಳನ್ನು ಓದುವಾಗಲೂ ಬೆರಗಾದೆ. ಸೋಮು ರೆಡ್ಡಿಯವರ ಅನುಭವ, ಅದು ಕಾದಂಬರಿಯಾದ ರೀತಿ ಮತ್ತು ಅವರು ಅದನ್ನು ಹೊರಗೆ ನಿಂತು ನಿರೂಪಿಸುವ ಕ್ರಮ ಎಲ್ಲವೂ ಹೊಸತಾಗಿದೆ. ಗೊತ್ತಿಲ್ಲದ ಊರಲ್ಲಿ ಒಂದು ಬೆಳಗ್ಗೆ ಧುತ್ತೆಂದು ಇಳಿದವನಂತೆ ನಾನು ದಿಕ್ಕೆಟ್ಟಿದ್ದೇನೆ. ಈ ಕಾದಂಬರಿ ಅಷ್ಟರ ಮಟ್ಟಿಗೆ ಹೊಸ ಲೋಕವನ್ನು ತೋರಿಸುತ್ತದೆ.
..................................................................................................................................................................
ಸರಾಗ ನಿರೂಪಣೆಯ ಬೆಳಕಿನ ಕಂದೀಲು
ಗ್ರಾಮೀಣ ಭಾಗಗಳಲ್ಲಿ ಜಾತಿ ಪದ್ಧತಿ ಇಂದಿಗೂ ಜೀವಂತವಾಗಿದೆ. ಕೆಳವರ್ಗದ ಅದೆಷ್ಟೋ ಕುಟುಂಬಗಳು ಈಗಲೂ ನೆಮ್ಮದಿಯಿಂದ ಜೀವನ ಸಾಗಿಸಲು ಹೆಣಗಬೇಕಾಗಿದೆ. ಇದಕ್ಕೆ ಕಾರಣ ಮೇಲ್ಜಾತಿಯವರ ದಬ್ಬಾಳಿಕೆ, ದೌರ್ಜನ್ಯ, ಮೇಲ್ಜಾತಿಯವರ ಮತ್ಸರ, ಕಿರುಕುಳ, ಕೊಂಕು ಮಾತು, ನುಡಿದಂತೆ ನಡೆಯದ ಸಿರಿವಂತರು, ದೊಡ್ಡವರು ಎನಿಸಿಕೊಂಡ ಸಣ್ಣತನಗಳನ್ನು 'ಕಂದೀಲು' ಕಾದಂಬರಿಯಲ್ಲಿ ಸೋಮು ರೆಡ್ಡಿ ಅವರು ಕಣ್ಣಿಗೆ ಕಟ್ಟುವಂತೆ ಅಕ್ಷರ ರೂಪಕ್ಕೆ ಇಳಿಸಿದ್ದಾರೆ.
'ನಾನು ಅಷ್ಟೊತ್ತಿಂದ ಎಷ್ಟು ಮಾತಾಡಿದ್ರೂ ನೀನು ಮಾತಾಡಾಕತ್ತಿಲ್ಲ. ಹೋಗ ನೀನ ನನ್ನ ಜೊತಿ ಯಾವತ್ತೂ ಮಾತಾಡಬ್ಯಾಡ ಎಂದು ಕೌದಿ ಹೊದೆಯುತ್ತ ಮಲಗುವಾಗ ಕಂದೀಲು ಆರೀತು.' 'ಪುನಃ ಕಂದೀಲು ಹೊತ್ತಿಸಿದ, ಅರೆಘಳಿಗೆಯಲ್ಲಿ ಕಂದೀಲು ಮತ್ತೆ ಬೆಳಕು ಚೆಲ್ಲಲು ಸೋತಿತು....ಅದರ ಎಣ್ಣೆ ಮುಗಿದು ಹೋಗಿತ್ತು. ಲೊಚಗುಡುತ್ತ ಪ್ರಮೋದ ಕೌದಿ ಹೊದ್ದುಕೊಂಡು ಕುಸುಮಿಯ ಎದೆಯ ಮೇಲೆ ತಲೆಯಿಟ್ಟ. ಕುಸುಮಿಯ ಜೀವ ತಣ್ಣಗಾಗಿಬಿಟ್ಟಿತ್ತು!!!
ಕಾದಂಬರಿಕಾರ ಬದುಕಿನ ಹಸಿ ಹಸಿ ವಾಸ್ತವವನ್ನು ತೀರ ಸ್ನಿಗ್ಧವಾಗಿ ಬಿಚ್ಚಿಡುತ್ತಾರೆ. ಅಂದಾಜು ನೂರಮೂವತ್ತು ಮುಟ್ಟದ ಕ್ಯಾನ್ವಾಸ್‌ನಲ್ಲಿ ಕಾದಂಬರಿ ಹಳ್ಳಿಯ ಮನಸ್ಸನ್ನು ಬಿಚ್ಚಿಡುತ್ತದೆ. ಕುಸುಮಳ ಅಂತರಂಗದ ಕಂದೀಲಿನ ಬೆಳಕು, ಜ್ವಾಲೆಯಾಗಿ ಬದಲಾಗುವ ಕ್ಷಣ ನಮ್ಮನ್ನು ಬೆಚ್ಚಿ ಬೀಳಿಸಿದ ಹಾಗೆಯೇ, ಆ ಬದಲಾವಣೆಯನ್ನು ಸಹಜವಾಗಿ ಸ್ವೀಕರಿಸುವ ಊರು ಬೆಚ್ಚಿ ಬೀಳಿಸುತ್ತದೆ. ಸೋಮು ಅವರ ಅನುಭವ, ಅದು ಕಾದಂಬರಿಯಾದ ರೀತಿ, ಕಾದಂಬರಿಕಾರ ಹೊರಗಡೆಯಿಂದ ಅದನ್ನು ನಿರೂಪಿಸುವ ಕ್ರಮ ನವೀನವಾಗಿ ಮೆಚ್ಚುಗೆ ಗಳಿಸುತ್ತದೆ. - ದೊಡ್ಡವರ ಕುತಂತ್ರ, ದುರಾಲೋಚನೆಯಿಂದ ರಂಗಪ್ಪನ ಕುಟುಂಬ ಇನ್ನಿಲ್ಲದಂತೆ ಕೊನೆ ಕಾಣುವುದು ಮನಮಿಡಿಯುವಂತೆ ಮಾಡುತ್ತದೆ. ಪಾರಂಪರಿಕವಾಗಿ ಬಂದ ಕಂದೀಲು ಹಿಡಿಯುವ ಕಾಯಕವನ್ನು ಹೇಗಾದರೂ ಮಾಡಿ ಮುಂದುವರೆಸಿಕೊಂಡು ಹೋಗಲೇಬೇಕೆಂದು ಕುಸುಮಿ ಊರು ಬಿಟ್ಟು ಹೋಗಿ ಮೈ ಮಾರಿಕೊಂಡು ಗಂಡು ಮಗುವೊಂದನ್ನು ಹೆತ್ತು ಊರಿಗೆ ಮರಳಿ ಬಂದರೂ ತಾನಂದುಕೊಂಡದ್ದು ಪುಸ್ತಕದ ಆಗುತ್ತಿಲ್ಲ ಎಂಬ ಚಿಂತೆಯೆಂಬ ಚಿತೆಯಲ್ಲಿ ಬೇಯುತ್ತಾಳೆ. ಮಸ್ತಕ ಏತನ್ಮಧ್ಯೆ ಕುಸುಮಿಯ ಗಂಡ ರಂಗಪ್ಪನ ಸಾವಿಗೆ ಕಾರಣನಾಗಿ ಪಾಪ ಪ್ರಜ್ಞೆಯಿಂದ ಬಳಲುವ ಅನಂತ ದೇಸಾಯಿ ಪ್ರಾಯಶ್ಚಿತವಾಗಿ ಹಳ್ಳದ ದಂಡೆಯ ಸಲ ಜಮೀನು ಕೊಡುತ್ತೇನೆಂದು ಊರವರ ಎದುರಿಗೆ. ಮಾಡಿದ ವಾಗ್ದಾನವನ್ನು ಇನ್ನೂ ಕಾರ್ಯರೂಪಕ್ಕೆ ತರಲಾಗುತ್ತಿಲ್ಲ ಎಂಬ ನೋವು, ನಾನು ಸತ್ತರೆ ನನ್ನ ಮಗ ಬೀದಿಪಾಲಾಗಬಾರದೆಂಬ ಕುಸುಮಿಯ ಆತಂಕ ಕೊನೆಗೂ ನಿಜವಾಗಿ ಆಕೆ ಲೈಂಗಿಕ ರೋಗದಿಂದ ಬಳಲಿ ಸಾಯುವಲ್ಲಿಗೆ ಕಾದಂಬರಿ ಮುಗಿಯುತ್ತದೆ. ಕುಸುಮಿ, ಧೂರ್ತ ಅನಂತ ದೇಸಾಯಿ, ಕುಸುಮಿಗೆ ಬರಬೇಕಾದ ಜಮೀನು ಕೊಡಿಸುತ್ತೇನೆಂದು ನಂಬಿಸಿ ಕುಸುಮಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಕೊನೆಗೆ ಅಸಹಾಯಕತೆ ತೋರುವ ಅನಂತ ದೇಸಾಯಿ ಮಗಳ ಗಂಡ ಶ್ರೀಪಾದ ಇಂಥ ಹಲವಾರು ಪಾತ್ರಗಳು ಕಾದಂಬರಿ ಓದಿ ಮುಗಿಸಿದರೂ ಕಾಡುತ್ತವೆ. ಅಷ್ಟರಮಟ್ಟಿಗೆ ಸೋಮು ರೆಡ್ಡಿ ಕಾದಂಬರಿಯಲ್ಲಿ ಜೀವಂತಿಕೆ ಉಳಿಸಿದ್ದಾರೆ. - ಇಲ್ಲಿ ನಡೆಯುವ ಘಟನೆಗಳು ಬೆರಗಿನ ಆವರಣ ಹೊಂದಿ ಕಲಕುತ್ತವೆ. ಗೊತ್ತಿಲ್ಲದ ಊರಿನಲ್ಲಿ ಬೆಳಗ್ಗೆ ಧುತ್ತೆಂದು ಇಳಿದ ಹಾಗೆ ಇಲ್ಲಿಯ ಚಮತ್ಕಾರಿ ಘಟನೆಗಳು ಮುಖಾಮುಖಿಯಾಗುತ್ತವೆ, ಓದು-ಬರಹದ ಸಾಂತನ ಇಲ್ಲಿ ಹೊಸ ಲೋಕಕ್ಕೆ ತೆರೆಸುತ್ತದೆ. ವಿಹಲಗೊಂಡ ಮನಕ್ಕೆ ಮುಲಾಮು ತೀಡಿದಂತೆ ವ್ಯಾಮೋಹಿಯಾಗಿ ಲೇಖಕ ನಮ್ಮನ್ನು ಮತ್ತೆ ಮತ್ತೆ ವಾಸ್ತವ ಬದುಕಿನ ಸೆಳೆತದತ್ತ ನೂಕುತ್ತಾನೆ. ಸಂರ್ಕೀಣತೆಯತ್ತ ಎದುರಾಗಿಸುವ ಪಾತ್ರ ಪೋಷಣೆ ನಮ್ಮನ್ನು ಕಲ್ಪನೆಯಿಂದ ಬೆಳಕಿಗೆ ಸಾಗಿಸುತ್ತದೆ. ವೃತ್ತಿಯಲ್ಲಿ ಪೊಲೀಸ್ ಆಗಿದ್ದರೂ 'ಕಂದೀಲು' ಕಾದಂಬರಿಯ ನಿರೂಪಣೆ ಸರಾಗವಾಗಿದೆ.
- ತನುಜಾ ನಾಯಕ
ಕೃಪೆ : ಸಂಯುಕ್ತ ಕರ್ನಾಟಕ (2020 ಫೆಬ್ರವರಿ 23)
........................................................................................................
ಗ್ರಾಮಾಯಣದ ನೋವಿನ ಕತೆ ‘ಕಂದೀಲು’-ಶ್ರೀಶೈಲ ಮಗದುಮ್ಮ
©2024 Book Brahma Private Limited.