ಸಂಧ್ಯಾರಾಗ

Author : ದೇಹ (ದೇಸಾಯಿ ಹನುಮಂತರಾವ)

Pages 164

₹ 130.00




Year of Publication: 2019
Published by: ಭೂಮಿ ಪ್ರಕಾಶನ
Address: 1015, ಪ್ರೆಸ್ಟೀಜ ಮಿಸ್ಟೀ ವಾಟರ್ಸ್, ಕೆಂಪಾಪುರ, ಹೆಬ್ಭಾಳ, ಬೆಂಗಳೂರು – 560 024
Phone: 07022049043

Synopsys

What'saap chatting ಮೂಲಕ ಆರಂಭವಾಗುವ ಸ್ನೇಹ ಮತ್ತು ಪ್ರೇಮದ ಹಂದರ ಸಂಧ್ಯಾರಾಗದಲ್ಲಿ ಸೊಗಸಾಗಿ ಮೂಡಿ ಬಂದಿದೆ. ಇಲ್ಲಿ ಕಥಾನಾಯಕಿ ಪ್ರೇಮಿಯಾಗಿ ಹತ್ತಿರವಾಗಲು ಯತ್ನಿಸಿದರೆ, ನಾಯಕ ಸ್ನೇಹಿತನಾಗಿ ಹತ್ತಿರವಾಗುತ್ತಾನೆ. ಕಾದಂಬರಿಯುದ್ದಕ್ಕೂ ನಾಯಕ-ನಾಯಕಿಯರ ಮಧ್ಯದ ಸಂಬಂಧ ಸ್ನೇಹವೋ, ಪ್ರೇಮವೋ ಎಂಬಂತೆ ಓದುಗರನ್ನು ಕುತೂಹಲ ಭರಿತರನ್ನಾಗಿ ಮಾಡುತ್ತದೆ. ಪ್ರಮುಖ ಆಕರ್ಷಣೆ ಎಂದರೆ,  ಕಥಾನಾಯಕ ಮತ್ತು ಕಥಾನಾಯಕಿಯ ಮಧ್ಯ ಇರುವ ವಯಸ್ಸಿನ ಅಂತರ. ನಾಯಕನಿಗೆ 50 ಹಾಹಗೂ ನಾಯಕಿಗೆ 25. ಇದು ಹಿರಿಯ ವಯಸ್ಕರಿಗೆ ಮುದ ನೀಡಿದರೆ, ಯುವ ಪೀಳಿಗೆಯವರಿಗೆ ಹೊಟ್ಟೆಕಿಚ್ಚು ತರಿಸುತ್ತದೆ. ನಿಸರ್ಗದ ವರ್ಣನೆ ವಾಹ್! ಎನಿಸಿದರೆ, ನಾಯಕಿಯ ಸೌಂದರ್ಯದ ವರ್ಣನೆ ರಸಿಕತನದ ರಸದೌತಣ ನೀಡುತ್ತದೆ. ಸಂಧ್ಯಾರಾಗ.‌ ವಾಟ್ಸ್ಯಾಪ್ ಎಮೋಜಿಗಳನ್ನ ಉಪಯೋಗಿಸಿ ವಿಭಿನ್ನವಾಗಿ ಕಥೆಯನ್ನು ನಿರೂಪಿಸಲಾಗಿದೆ. 

About the Author

ದೇಹ (ದೇಸಾಯಿ ಹನುಮಂತರಾವ)

ಬಾಗಲಕೋಟೆ ಜಿಲ್ಲೆಯ, ಬೋಡನಾಯಕದಿನ್ನಿ ಗ್ರಾಮದಲ್ಲಿ ಜನಿಸಿದ 'ದೇಹ' ಕಾವ್ಯನಾಮದಿಂದ ಬರೆಯುವ ಹನುಮಂತರಾವ ದೇಸಾಯಿ ಅವರು ಈಗಿನ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಕಲಬುರಗಿ, ಆಳಂದದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮುಗಿಸಿ, ಕಲಬುರಗಿಯ ಸರಕಾರಿ ಪದವಿ ಕಾಲೇಜಿನಿಂದ ವಿಜ್ಞಾನದಲ್ಲಿ ಪದವಿ, ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯಿಂದ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, M.Phil ಹಾಗೂ ಡಾಕ್ಟರೇಟ ಪದವಿ ಪಡೆದರು.  ‘ದೇಹ’ ಅವರ ಇಂದಿನ ಪದವಿ ಮತ್ತು ಸದಸ್ಯತ್ವಗಳು M.Sc; MEE; M.Phil; PH.D; B'Ed; GFS; MEE; RQP; FMC. ಅಲ್ಟ್ರಾಟೆಕ್ ಸಿಮೆಂಟ ...

READ MORE

Reviews

ಪ್ರತಿಯೊಂದು ಸನ್ನಿವೇಶವು, ಪಾತ್ರವೂ, ಚಿರಪರಿಚಿತವೂ ಎಂಬಂತೆ  ಕಣ್ಮುಂದೇ ಘಟಿಸಿದಂತೆ,ನಾನಲ್ಲಿ ನಿಂತು ಅದನ್ನೆಲ್ಲಾ ವ್ಯಯಕ್ತಿಕವಾಗಿ ಕಂಡಂತೆ ಭಾಸವಾಯ್ತು.....  ನಾ ಕಂಡ ಲೇಖನದ ಸಾರಾಂಶ - ಪ್ರೀತಿಗೆ ಭಾಷೆ ಇಲ್ಲ, ವೇಷ ಇಲ್ಲ, ವಯಸ್ಸಿನ ಅಂತರವಿಲ್ಲ, ಮೇಲು ಕೇಳಿಲ್ಲ, ನಾನು ನೀನೆಂಬುದಿಲ್ಲ.  ಅರಿಯದೆ ಬರುವುದು, ಅರಿವನು ಮರೆವುದು, ಅರಸುತಲಿರುವುದೆ ಪ್ರೀತಿ. ಎಷ್ಟೋ ವರುಷಗಳ ನಂತರ ಮನಸಿಗೆ ಹಿತವೆನಿಸುವ ಲೇಖನ ದೊರೆಯಿತು, ಮತ್ತೆ ಓದಬೇಕೆನಿಸುವ ಚೈತನ್ಯ ಮೂಡಿತು ಅದು ನಿಮ್ಮಿಂದ. ನಿಮಗೊಂದು ತುಂಬು ಹೃದಯದ ಧನ್ಯವಾದಗಳು. ಇಂತಹ ಇನ್ನು ಹೆಚ್ಚು ಹೆಚ್ಚು ಕಥಾ ಹಂದರಗಳು ನಿಮ್ಮ ಕೈಯಿಂದ ಮೂಡಲಿ ಎಂದು ಆಶಿಸುತ್ತೇನೆ.  

-ನೇತ್ರಾ, ಬೆಂಗಳೂರು

I read the novel. First attempt is best one. End is painful. You have done good job. I enjoyed the story.  You have done good job.i felt like professional writer
- Meghana, Bangalore

`sandhyaraga' nicely written romantic story I felt myself as a character while reading good keep it up looking many more

- Shrinivas, Bangalore

'ಸಂಧ್ಯಾ ರಾಗ ' ಹೆಸರೇ ಹೇಳುವಂತೆ ಶ್ರೀಮಂತ ಮಧ್ಯ ವಯಸ್ಕ ವ್ಯಕ್ತಿಯ ಹಾಗೂ ಮುಗ್ಧ (?)ಮನಸ್ಸಿನ ಯುವತಿಯ ಮಾನಸಿಕ ತುಮುಲ ಗಳ ಚಿತ್ರಣ , ಸರಳ ಸುಂದರ,  ಓದಿಸಿಕೊಂಡು ಹೋಗುವ ಬರಹದ ಜಾಣ್ಮೆ ಲೇಖಕರ ಶಕ್ತಿ , ರಸಿಕತೆಯಲ್ಲಿ ಎಲ್ಲೂ ಕಮ್ಮಿ ಇಲ್ಲ ..ಸಂಧರ್ಬೋಚಿತ ವಾಟ್ಸ್ಯಾಪ್ ಎಮೋಜಿ ಗಳು ನಾಯಕ ನಾಯಕಿಯ ಭಾವನೆ ಗಳನ್ನೂ ಅವರ ಸಂಭಾಷಣೆ ಯಲ್ಲಿ ಕಳೆ ಕಟ್ಟಿಸಿವೆ ..ಅವರ ಮೀಟ್ ಅಪ್ ಗಳು , ಮಿಲನ , ತುಂಟತನ ದಲ್ಲಿ ಕೂಡಿವೆ ..ನಾಯಕನ ಫ್ಯಾಮಿಲಿ ಅವರ ಔದಾರ್ಯತೆ ಮೆಚ್ಚುವಂಥದು ..ಕತೆಯ ಕೊನೆಯಲ್ಲಿ ಗೊತ್ತಾಗೋದು ಇದು ಸ್ನೇಹವ , ಪ್ರೀತಿಯ , ಸೆಳೆತವ ? ಇನ್ನಷ್ಟು ಪಾತ್ರಗಳನ್ನು ತರಬಹುದಿತ್ತು ಅಂತ ಸ್ವಲ್ಪ ಅನಿಸೋದು , ಲೇಖಕರ (deha) ಚೊಚ್ಚಲ ಪ್ರಯತ್ನಕ್ಕೆ ಶುಭವಾಗಲಿ

-ಪ್ರಹ್ಲಾದ್ ದೇಸಾಯಿ, ಬೆಂಗಳೂರು

 

Related Books