ಡಾಕ್ಟರ್

Author : ಎಂ.ಕೆ. ಇಂದಿರಾ

₹ 75.00




Published by: ಇಂದಿರಾ ಪ್ರಕಾಶನ

Synopsys

ಲೇಖಕಿ ಎಂ.ಕೆ.ಇಂದಿರಾ ಅವರ ಕಾದಂಬರಿ ‘ಡಾಕ್ಟರ್’. ಖೃತಿಯ ಮುನ್ನುಡಿಯಲ್ಲಿ ಲೇಖಕಿಯೇ ಹೇಳಿಕೊಂಡಿರುವಂತೆ, “ಯಾವ ಬಗೆಯ ಡಾಕ್ಟರೂ ಅಲ್ಲದ ನಾನು ಈ ಡಾಕ್ಟರ್ ಕೃತಿಯನ್ನು ಬರೆದಿದ್ದೇನೆ, ಹಲವು ವರ್ಷಗಳ ಕಾಲ ನಾಡಿನ ಮೂಲೆ ಮೂಲೆಗಳಲ್ಲೂ ಸಂಚರಿಸಿ ಅನುಭವ ಪಡೆದ ಡಾಕ್ಟರ್ ಒಬ್ಬರಿಂದ ಕೇಳಿ ಬರೆಯಲಾಗಿದೆ. ಅವರು ಹೇಳಿದುದೆಲ್ಲವನ್ನೂ ಬರೆಯಲು ಸಾಧ್ಯವಾಗದು” ಎಂಬ ಮಾತುಗಳಿವೆ. ಡಾಕ್ಟರ್ ಅನುಭವದಲ್ಲಿ ರಮ್ಯವಿದೆ, ಸ್ವಾರಸ್ಯವಿದೆ, ರೋಮಾಂಚಕವಿದೆ,ಭೀಬತ್ಸ ಭೀಕರವಿದೆ.ಅನುಕಂಫ ಮೂಡಿಸುವ ಸನ್ನಿವೇಶಗಳಿವೆ, ಜಿಗುಪ್ಸೆ ತರಿಸುವ ಸಂಧರ್ಭಗಳಿವೆ,ವಿನೋದಮಯ ಘಟನೆಗಳಿವೆ.ಈ ನೂರಾರು ಬಗೆಯ ಗಣಗಳ ಕುಣಿತದ ನಡುವೆ ಕೇಂದ್ರಬಿಂದುವಾಗಿ ನಿಂತು ಎಲ್ಲಕ್ಕೂ ಶಾಂತಿ ಮಾಡುತ್ತಾ ಬದುಕನ್ನು ಕಳೆಯುವ ಡಾಕ್ಟರೇ ಈ ಕಾದಂಬರಿಯ ಕಥಾನಾಯಕ.

About the Author

ಎಂ.ಕೆ. ಇಂದಿರಾ
(05 January 1917 - 15 March 1994)

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು 05-01-1917 ರಂದು. ಊರು ಮಲೆನಾಡಿನ ತೀರ್ಥಹಳ್ಳಿ. ತಂದೆ ತರೀಕೆರೆ ಸೂರ್ಯನಾರಾಯಣ, ತಾಯಿ ಬನಶಂಕರಮ್ಮ. ಇಂದಿರಾ ಓದಿದ್ದು, ಕನ್ನಡ ಮಾಧ್ಯಮಿಕ ಶಾಲೆಯ  2ನೇಯ ತರಗತಿವರೆಗೆ ಮಾತ್ರ. ತಮ್ಮ 12 ವರ್ಷಕ್ಕೆ ಮದುವೆಯಾಯಿತು. ಅವರು ಬರೆಯಲು ಆರಂಭಿಸಿದ್ದು 1963ರಲ್ಲಿ. ತುಂಗಭದ್ರ ಅವರ ಮೊದಲ ಕೃತಿ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು.ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ"."ತುಂಗಭದ್ರೆ"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ...

READ MORE

Related Books