‘ಸಾಕು ಈ ಜನಮ’ ಕೃತಿಯು ಶ್ರೀದೇವಿ ಎಲ್ ರಾಠೋಡ ಅವರ ಕಾದಂಬರಿಯಾಗಿದೆ. ಹೆಣ್ಣಿನ ಮನದಾಳದ ದುಖಃವನ್ನು ಅರಿಯವವರು ಯಾರು ಇರುವುದಿಲ್ಲ. ಸಂಬಂಧಗಳು ಇದ್ದರು ಅವು ಕೇವಲ ಹೆಸರಿಗೆ ಇರುತ್ತವೆ. ತನ್ನ ಬದಿಕಿಗೆ ತಾನೆ ಹೊಣೆ, ಬೇರೆಯವರ ತಪ್ಪುಗಳಿಗೂ ತಾನೆ ಹೊಣೆ ಎಂಬ ಅಪವಾದಗಳು ತಲೆಗೆ ಕಟ್ಟಿ ಅವಳನ್ನು ಸಮಾಜದ ಕಟುಪುತಲಿಯಂತೆ ಮಾಡಿ ಎಲ್ಲಾ ದುರ್ಘಟನೆಗಳಿಗೆ ಹೆಣ್ಣನ್ನು ಅಪರಾಧಿಯನ್ನಾಗಿಸುವ ಸಮಾಜಿಕ ಸಿದ್ಧಮಾದರಿಯ ವ್ಯವಸ್ಥೆ ಕಾರಣವಾಗಿದೆ. ಇಲ್ಲಿ ಶಾರಿಬಾಯಿ ಎಲ್ಲರಂತೆ ತನ್ನ ಬದುಕನ್ನು ರೂಪಿಸಿಕೊಳ್ಳಲು ಹೋಗುತ್ತಾಳೆ. ಆದರೆ ಕೆಲವು ಅನಿರೀಕ್ಷಿತ ಘಟನೆಗಳು ಅವಳ ಜೀವನದಲ್ಲಿ ನಡೆದಾಗ ಅವಳ ಬದುಕು ನಶ್ವರ ಆಗಿಬಿಡುತ್ತದೆ. ಆದರೂ ತನ್ನ ಬದುಕನ್ನು ಮುನ್ನೆಡೆಸಲು ಪ್ರಯತ್ನಿಸಿದಾಗ ಅವಳಿಗೆ ಅವಮಾನ ಅಪಮಾನವಿಲ್ಲದೆ ಬೇರೆನು ಸಿಗುವುದಿಲ್ಲ ಎನ್ನುವುದನ್ನು ಇಲ್ಲಿ ಲೇಖಕಿ ಹೇಳುತ್ತಾರೆ.
ಡಾ. ಶ್ರೀದೇವಿ ಎಲ್ ರಾಠೋಡ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕನಕಪುರ ತಾಂಡಾದವರು. ತಂದೆ ಎಲ್ ಸೋಮಪ್ಪ, ತಾಯಿ ಪ್ರೇಮಬಾಯಿ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಎಂ. ಎ ಹಾಗೂ ಕುಂಚಿ ಕೊರವ ಮಹಿಳೆಯರ ಸಬಲೀಕರಣ ವಿಷಯವಾಗಿ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪಡೆದಿದ್ದಾರೆ. ಯು. ಜಿ. ಸಿ ಧನಸಹಾಯ ಆಯೋಗದಿಂದ ಪೋಸ್ಟ್ ಡಾಕ್ಟರಲ್ ಪದವಿಯನ್ನು ಗುಲಬಗಾ೯ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಸದಾ ಮಹಿಳಾ ಪರ ಕಾಳಜಿ ಮತ್ತು ಚಿಂತನೆಯಲ್ಲಿ ತೊಡಗಿದ್ದಾರೆ. ಸದ್ಯ, ಕಲಬುರಗಿ ಜಿಲ್ಲೆಯ ನಂದೂರು ಬಿ. ಅಂಚೆ ವ್ಯಾಪ್ತಿಯ ಬಾಪುನಾಯಕ ತಾಂಡದಲ್ಲಿ ವಾಸವಿದ್ದಾರೆ. ಲಂಬಾಣಿ ಸಮುದಾಯ ಅಹಾರ ಪದ್ಧತಿ, ಕಂಚಿ ಕೋರವರ ಆಹಾರ ಪದ್ಧತಿ, ಚಿಂದಿ ಆಯುವ ಮಹಿಳೆ ಮತ್ತು ...
READ MORE