‘ಪಲ್ಲಟ’ ಕೆ.ಎನ್. ಮಹಾಬಲ ಹಾಗೂ ಬೆಂ. ಶ್ರೀ ರವೀಂದ್ರ ಸಂಪಾದಕತ್ವದ ವಿಶಿಷ್ಟ, ವಿನೂತನ 27 ಲೇಖಕರ ಖೋ ಕಾದಂಬರಿಯಾಗಿದೆ. 27 ಅಧ್ಯಾಯಗಳಲ್ಲಿ ರಚಿತವಾಗಿರುವ ಈ ಕಾದಂಬರಿಯು ಹಲವಾರು ವಿಚಾರಗಳನ್ನು ಕಟ್ಟಿಕೊಡುತ್ತದೆ.
ಕೆ ಎನ್ ಮಹಾಬಲ ಅವರು ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ರಾಜ್ಯದ ಹಲವೆಡೆ ಸೇವೆ ಸಲ್ಲಿಸಿದರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಹಲವಾರು ಸಾಹಿತ್ಯ ವಿಮರ್ಶೆ ಆಂಡಯ್ಯನ ಅಚ್ಚಗನ್ನಡ ನಿಷ್ಠೆ ,ಲಲಿತ ಪ್ರಬಂಧಗಳು , ಟಿ ಎಸ್ ವೆಂಕಣ್ಣಯ್ಯ ,ಬಿ ಜಿ ಎಲ್ ಸ್ವಾಮಿ,ಸು ರಂ ಎಕ್ಕುಂಡಿ ,ಮುಂತಾದ ಲೇಖನಗಳು ಮತ್ತು ಇನ್ನೂ ಹಲವಾರು ಹಾಸ್ಯ ವಿಡಂಬನೆಗಳು ಬ್ಯಾಂಕ್ ಕನ್ನಡ ಸಂಘದ ಸಾಹಿತ್ಯ ಸಂಚಿಕೆ "ಮಂದಾರ "ದಲ್ಲಿ ಪ್ರಕಟವಾಗಿದೆ. ಕೃತಿಗಳು: ‘ಇಂದೂ ಇದ್ದಾರೆ’ ಕವನ ಸಂಕಲನ ‘ಹಾಸ್ಯಬಂಧ ಹಾಸ್ಯಲೇಖನ ಸಂಗ್ರಹ’ ,‘ಬೊಗಸೆ ತುಂಬ ಹೂವು’ ...
READ MORE