ಮನುಷ್ಯರಿಗೆ ಹುಟ್ಟು ಉಚಿತ, ಸಾವು ಖಚಿತ. ಸಾವು ಎಲ್ಲೊ ನಡೆದಾಗ ವೇದಾಂತದ ಮಾತನಾಡುತ್ತಿವಿ ,ಆದರೆ ಸತ್ತಿರುವವರೆ ಪುಣ್ಯವಂತರು ,ದೇವರಿಗೆ ಒಳ್ಳೆಯವರೆ ಬೇಕು ,ಅದಕ್ಕೆ ಕರೆದುಕೊಂಡಿದ್ದಾನೆ ಅಂತ,ದೂರದ ಬಂಧುಗಳ ಮನೆಯಲ್ಲಿ ಅಥವಾ ಅಕ್ಕ ಪಕ್ಕದಲ್ಲಿ ಸಾವು ನಡೆದಾಗ ಅವರಿಗೆ ಸಮಾಧಾನ ಮಾಡಲು ಮುಂದಾಗುತ್ತೀವಿ.ಆದರೆ ಅದು ನಮ್ಮ ಮನೆಯಲ್ಲಿ ನಮ್ಮ ತುಂಬಾ ಹತ್ತಿರದಲ್ಲಿ ನಡೆದಾಗ ಮಾತ್ರ ಅನಿಸುವುದು ,ಮರಣ ಅನ್ನುವುದು ಇರಬಾರದಿತ್ತು ಅಂತ . ಈ ಕಾದಂಬರಿಯ ಬರುವ ಪಾತ್ರದಲ್ಲಿ ಇದು ಕಾಣಸಿಗುತ್ತದೆ.ಈ ಕಾದಂಬರಿಯಲ್ಲಿ ಸಹ ವಿಶ್ವರಥನ ಪಾತ್ರ ತುಂಬಾ ಓದುಗರಿಗೆ ಇಷ್ಟ ವಾಗುತ್ತದೆ.ನೋಡದ ವಿಶ್ವರಥ ನಮಗೆ ತೀರಾ ಪರಿಚಿತ ಎಂಬ ಭಾಸವಾಗುತ್ತದೆ.ಅವನಿಗಾಗಿ ಕಣ್ಣೀರಿಡುವ ಕುಟುಂಬದ ಎಲ್ಲಾ ಪಾತ್ರ ಗಳನ್ನು ಮನ ಮಿಡಿಯುವ ಹಾಗೆ ಚಿತ್ರಿತವಾಗಿದೆ.ತನ್ನ ಕುಟುಂಬದವರ ಹಿತ ಬಯಸುವ ಅಪೇಕ್ಷ,ನೋಡದಿರುವ ವಿಶ್ವ ರಥನ ಬಗ್ಗೆ ಪುಸ್ತಕ ಬರೆಯುವ ಕವನ ಹಾಗೂ ವಿಶ್ವರಥನ ಗೆಳೆಯ ಸತ್ಯ ಇವರೆಲ್ಲರ ಪಾತ್ರವು ಈ ಕಾದಂಬರಿಯಲ್ಲಿ ಮೂಡಿಬಂದಿರುವುದರಿಂದ ಈ ಕಾದಂಬರಿಯು ಇನ್ನಷ್ಟು ಓದುಗರಿಗೆ ಹತ್ತಿರವಾಗುವಂತಿದೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE