ಹನ್ನೆರಡನೆಯ ಶತಮಾನದ ಪ್ರಮುಖ ವಚನಕಾರ್ತಿ ಅಕ್ಕ ಮಹಾದೇವಿ. ಅಕ್ಕನ ಬದುಕು ಹಾಗೂ ಸಾಧನೆಯನ್ನು ಕುರಿತ ಕಾದಂಬರಿ ’ಕದಳಿಯ ಕರ್ಪುರ’. ಕಮಹಾದೇವಿ ಕನ್ನಡನಾಡಿಗೆ ಮಾತ್ರವಲ್ಲ, ಮಹಿಳಾ ಸಾಧಕಿಯರಲ್ಲಿಯೇ ಅಗ್ರಗಣ್ಯಳು ಹಾಗೂ ಅಪೂರ್ವ ವ್ಯಕ್ತಿ; ಹೆಣ್ಣುತನದ ಪರಿಪೂರ್ಣ ಸ್ವರೂಪವನ್ನು ಉಜ್ವಲವಾಗಿ ಬೆಳಗಿದ ಮಹಾಶಕ್ತಿ. ಈ ಜಗತ್ತು ಎನ್ನುವ ಕದಳಿಯಲ್ಲಿ ಅದೊಂದು ಕರ್ಪುರದ ಪರಂಜ್ಯೋತಿ, ಅದಕ್ಕೆ ಸಂಕೇತವೋ ಎಂಬಂತೆ ಅವಳ ಜೀವನದ ಘಟನೆಗಳು ಬೆಳೆಯುತ್ತವೆ. ಅಕ್ಕನ ವೈರಾಗ್ಯದ ಪ್ರಭೆ ಹೊಳೆಯುತ್ತದೆ. ಕೊನೆಯಲ್ಲಿ ಆಕೆ, ಉರಿಯುವ ಕರ್ಪುರದಂತೆ ತನ್ನ ಭೌತದೇಹವನ್ನು ಮೀರಿ ಬಯಲಾಗುವುದು ಕೂಡ ಶ್ರೀಶೈಲದ ಕದಳಿಯ ವನದಲ್ಲಿ. ತಿಪ್ಪೇರುದ್ರಸ್ವಾಮಿಯವರು ಅಕ್ಕನ ಜೀವನದ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.
ಶರಣರನ್ನು ಕುರಿತು ಕಾದಂಬರಿ ರಚಿಸುವ ಮೂಲಕ ಜನಪ್ರಿಯರಾಗಿರುವ ಎಚ್. ತಿಪ್ಪೇರುದ್ರಸ್ವಾಮಿ ಅವರು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿದವರು. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯವರಾದ ತಿಪ್ಪೇರುದ್ರಸ್ವಾಮಿ ಜನಿಸಿದ್ದು 1928ರ ಫೆಬ್ರುವರಿ 3ರಂದು. ತಂದೆ ಚೆನ್ನಮಲ್ಲಯ್ಯ, ತಾಯಿ ಬಸಮ್ಮ. ಹೊನ್ನಾಳಿ, ಶಿರಾಳಕೊಪ್ಪ ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಆರಂಭಿಕ ಶಿಕ್ಷಣ ಪಡೆದ ತಿಪ್ಪೇರುದ್ರಸ್ವಾಮಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ (ಎಂ.ಎ.) ಪಡೆದರು. ಶರಣರ ಅನುಭಾವ ಪ್ರಪಂಚ ಮಹಾಪ್ರಬಂಧಕ್ಕೆ ಡಾಕ್ಟೊರೇಟ್ ಪದವಿ (1962) ಪಡೆದರು. ಹಾಸನದ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ತಿಪ್ಪೇರುದ್ರಸ್ವಾಮಿ ...
READ MORE