ಲೇಖಕರಾದ ಪಾರಂಪಳ್ಳಿ ವಿಷ್ಣುಮೂರ್ತಿ ಐತಾಳರು ರಚಿಸಿರುವ ಕಾದಂಬರಿ ’ಪಡುಕಡಲ ತಡಿಯಲ್ಲಿ’. ಈ ಕೃತಿಯು ಕೋಟ ಸೀಮೆಯ ರೈತಾಪಿ ಬ್ರಾಹ್ಮಣರ ಕಥನವನ್ನು ಒಳಗೊಂಡಿದೆ.
ಇಪ್ಪತ್ತೈದು ಪ್ರಸಂಗಗಳಲ್ಲಿ ನಿರೂಪಿತವಾಗಿರುವ ಈ ಕಾದಂಬರಿ ರಾಜ್ಯದ ಕರಾವಳಿ ತೀರದ ದಕ್ಷಿಣ ಕನ್ನಡ ಜಿಲ್ಲೆಯ ಪಾರಂಪಳ್ಳಿ ಗ್ರಾಮದ ಸಾಮಾನ್ಯ ಕುಟುಂಬವೊಂದರ ಕಥಾನಕವಾಗಿದೆ. ಕೋಟ 14 ಗ್ರಾಮಗಳಲ್ಲಿ ಕಂಡು ಬರುವ ’ಕೂಟ ಬ್ರಾಹ್ಮಣ’ ಸಮಾಜಕ್ಕೆ ಸೇರಿದ ಶ್ರಮಜೀವಿಗಳು, ಬುದ್ದಿವಂತರು, ಸ್ನೇಹಪರರು ಆದ ಸಂಸಾರದ ಮೂರು ತಲೆಮಾರುಗಳ ಒಂದು ಪಾರ್ಶ್ವನೋಟವನ್ನು ಈ ಬರವಣಿಗೆ ನೀಡುತ್ತದೆ.
ಕರಾವಳಿ ಪ್ರದೇಶದಲ್ಲಿ ಉಪಯೋಗಿಸುತ್ತಿದ್ದ ಸಾಮಾನು ಸಾಮಗ್ರಿಗಳ ವಿವರಗಳೊಂದಿಗೆ ಆರಂಭವಾಗುವ ಕೃತಿಯು ಕಡಲ ತೀರದ ಅಪರೂಪದ ತಿಂಡಿ, ತಿನಿಸುಗಳು, ವಿಶಿಷ್ಟ ಕಲೆಗಳು, ಸಂಪ್ರದಾಯಗಳ ಪರಿಚಯದೊಂದಿಗೆ ಮುಂದುವರೆಯುತ್ತದೆ. ಇಲ್ಲಿರುವ ಪಾತ್ರಗಳು ಕೋಟ ಕನ್ನಡ ಭಾಷೆಯೊಂದಿಗೆ ವ್ಯವಹರಿಸುತ್ತವೆ. ಒಟ್ಟಾರೆ ಕುಟುಂಬದ ಸಮುದಾಯದ ಚಿತ್ರಣವನ್ನು ಕಟ್ಟಿಕೊಡುತ್ತದೆ. ಮೂರು ತಲೆಮಾರುಗಳ ನಡಿಗೆಯಲ್ಲಿನ ಸಂಕ್ರಮಣ ಸ್ಥಿತಿಯನ್ನು ಈ ಕೃತಿ ತೆರೆದಿಡುತ್ತದೆ.
.ಡಾ. ಪಾರಂಪಳ್ಳಿ ವಿಷ್ಣುಮೂರ್ತಿ ಐತಾಳ್ ಅವರು ಲೇಖಕರು. ಕೃತಿಗಳು: ಪಡುಕಡಲ ತಡಿಯಲ್ಲಿ (ಕಾದಂಬರಿ) ...
READ MORE