ಕನಸುಗಳ ಬೆನ್ನೇರಿ ಪಯಣಿಸುವ ಯುವ ಜೋಡಿ ಜೀವಗಳ ಕಥನ ’ವಿಜಯಗಾನ’. ಕನಸಿನ ಆಶಾಗೋಪುರ ಕಣ್ಣೆದುರು ಕಳಚಿತ್ತಿದ್ದರೂ ತಮ್ಮ ಪ್ರತಿಷ್ಠೆಯೇ ಮುಖ್ಯವೆನ್ನಿಸುವ ಸಂದರ್ಭದಲ್ಲಿ ಅವರು ನಿರಾಶರಾಗದೆ ಎದುರಿಸುವ ಪರಿಯನ್ನು ಲೇಖಕಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಹೀಗೆ ನೀರಸ ಬದುಕು ಸಾಗುತ್ತಿರುವಾಗಲೆ ಒಮ್ಮೆ ತಾವು ಕಂಡ ಕನಸುಗಳು ಮತ್ತೊಬ್ಬರ ಕಣ್ಣಲ್ಲಿ ನರ್ತಿಸುವುದನ್ನು ಕಂಡುಕೊಳ್ಳುತ್ತಾರೆ. ಆ ಕನಸಿಗೆ ಗೆಜ್ಜೆ ಕಟ್ಟಿ ಕುಣಿಸುವ ಹೊಸ್ತಿಲಲ್ಲಿ ಅಡಗಿ ಕೂತಿದ್ದ ಆಶಾ ಹಕ್ಕಿಗೆ ರೆಕ್ಕೆಪುಕ್ಕ ಬಲಿಯುತ್ತದೆ. ಇದು ಎರಡು ದಿಟ್ಟ ಮನಸ್ಸುಗಳ ಹೋರಾಟದ ಯಾನ, ಆ ಹಾದಿಯಲ್ಲಿ ಬರುವ ಒಲವು -ಮುನಿಸು- ಅನುಮಾನ -ಸಂಬಂಧಗಳ ಭಾವ ಮಿಶ್ರಣವು ಇದೆ. ಬರುವ ಅಡೆ-ತಡೆಗಳೆಲ್ಲವ ಎದುರಿಸಿ ಪರಸ್ಪರ ಗೆಲುವನ್ನು ದಕ್ಕಿಸಿಕೊಳ್ಳುವುದೇ ಕಥೆಯ ಸಾರ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ವೈಜಕೂರು ಗ್ರಾಮದಲ್ಲಿ ಲೇಖಕಿ ಡಾ. ಶಾಲಿನಿ ವಿ.ಎಲ್. ಅವರು 11 ಏಪ್ರಿಲ್ 1991 ರಲ್ಲಿ ಜನಿಸಿದರು. ಆದರೆ, ಬೆಳೆದಿದ್ದು ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಹಳೇಬೀಡಿನಲ್ಲಿ. ಹಾಸನದಲ್ಲಿ ಎಂಬಿಬಿಎಸ್ ಪದವಿ ನಂತರ ಅನ್ನಾಮಲೈ ಯೂನಿವರ್ಸಿಟಿ, ಚಿದಂಬರಂನಿಂದ ಡಿಪಿಎಚ್ ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ ವೈದ್ಯರಾದರೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯ ಫಲವಾಗಿ ’ಸಹನಾ- ಆದರ್ಶಗಳೊಂದಿಗೆ ಜೀವನ’ ಹಾಗೂ ’ಅನರ್ಘ್ಯ ರತ್ನ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ, ಅವರ ಸಾಹಿತ್ಯ ಸೇವೆಗೆ 2019 ನೇ ಸಾಲಿನ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಬೇಲೂರು ತಾಲ್ಲೂಕು ಹಗರೆ ಪ್ರಾಥಮಿಕ ...
READ MORE