ಖ್ಯಾತ ಸಾಹಿತಿ ನಾ. ಕಸ್ತೂರಿ ಅವರು ಬರೆದ ಸಾಮಾಜಿಕ ಕಾದಂಬರಿ-ಗಾಳಿ ಗೋಪುರ. ಕಾದಂಬರಿಯ ಪ್ರಮುಖ ಪಾತ್ರ ಹನುಮಂತರಾಯ ಡಿಗ್ರಿಯಿಂದ ದೊಡ್ಡವನಾಗಲಾರದೇ, ಸರ್ಕಸ್ಸಿನಲ್ಲಿ ಕರಡಿಯಾಗಿ ಕುಣಿದು, ಕತ್ತೆಯಂತೆ ಕಿರುಚಿ, ಆಂಗ್ಲೋ-ಇಂಡಿಯನ್ ಹುಡುಗಿಯನ್ನು ಮದುವೆಯಾದನು ಎಂಬುದೊಂದು ಅಘಟಿತಘಟನೆಯು ಇಲ್ಲಿಯ ವಕ್ರ ಹಾಸ್ಯದ ವ್ಯಂಗ್ಯ ಸರಣಿಯನ್ನು ಸಾರಲು ಸಾಕಾಗಿದೆ. ಆದರೆ, ಅದರ ಪರಿಕರ ರೂಪವಾಗಿ ಬಂದ ಹಾಸ್ಯವು ಸಹಜ ರಮ್ಯವಾಗಿದೆ ಎಂದು ಕವಿ ದ.ರಾ. ಬೇಂದ್ರೆ ಅವರು ಕೃತಿಗೆ ಬರೆದ ತಮ್ಮ ಮುನ್ನುಡಿಯಲ್ಲಿ ಪ್ರಶಂಸಿಸಿದ್ದಾರೆ.
ಕೇರಳದ ತ್ರಿಪುನಿತ್ತೂರ್ ಗ್ರಾಮದಲ್ಲಿ ಜನಿಸಿದ ನಾ. ಕಸ್ತೂರಿ ಅವರು ಕೇರಳದ ಎರ್ನಾಕುಲಂ ಮಹಾರಾಜಾ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ತಂದೆ ನಾರಾಯಣ. ಇತಿಹಾಸದಲ್ಲಿ ಸ್ನಾತಕೋತ್ತರ (ಎಂ.ಎ.) ಪಡೆದ ನಂತರ ಬಿ.ಎಲ್. ಪದವಿ ಪಡೆದರು. ವಕೀಲಿ ವೃತ್ತಿಗೆ ಸೇರುವ ಬದಲು ಶಿಕ್ಷಕ ವೃತ್ತಿಯತ್ತ ಹೊರಳಿದರು. ಮೈಸೂರಿಗೆ ಬಂದ ಅವರು ಅಲ್ಲಿನ ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. ನಾಟಕ, ಪ್ರಹಸನ, ಕಥೆ, ಕಾದಂಬರಿ ಮುಂತಾದ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಗಗ್ಗಯ್ಯನ ಗಡಿಬಿಡಿ, ಕಾಡಾನೆ, ವರಪರೀಕ್ಷೆ, ರಾಮಕೃಷ್ಣಯ್ಯನ ದರ್ಬಾರು, ಹೋಳು-ಬಾಳು, ಬ್ಯಾಂಕಿನ ದಿವಾಳಿ ಮುಂತಾದುವು ಅವರ ನಾಟಕಗಳು. ಗಾಳಿಗೋಪುರ, ಶಂಖವಾದ್ಯ, ರಂಗನಾಯಕಿ, ಅಲ್ಲೋಲ, ಕಲ್ಲೋಲ, ಉಪಾಯ ವೇದಾಂತ ಮುಂತಾದ ಹಾಸ್ಯ ಸಂಕಲನಗಳನ್ನು ರಚಿಸಿರುವುದಲ್ಲಿ ಹಾಸ್ಯ ...
READ MORE