ವ್ಯಗ್ರ ಮತ್ತು ಇತರ ಕಾದಂಬರಿಗಳು

Author : ಕುಮಾರ ಬೇಂದ್ರೆ

Pages 152

₹ 180.00




Year of Publication: 2023
Published by: ವೀರಲೋಕ
Address: #207, 2ನೇ ಮಹಡಿ, 3ನೇ ಮೇನ್, ಚಾಮರಾಜಪೇಟೆ, ಬೆಂಗಳೂರು - 560018
Phone: 7022122121

Synopsys

‘ವ್ಯಗ್ರ ಮತ್ತು ಇತರ ಕಾದಂಬರಿಗಳು’ ಕುಮಾರ ಬೇಂದ್ರೆ ಅವರ ಮೂರು ಕಾದಂಬರಿಗಳ ಸಂಕಲನ. ಕಾದಂಬರಿಗಳಲ್ಲಿ ಏನೋ ಒಂದು ಸಮಸ್ಯೆ, ಸವಾಲು ಎದುರಿಸಲೇ ಬೇಕಾದ ಸಂದಿಗ್ಧ ಸ್ಥಿತಿಗೆ ಸಿಲುಕಿದ ಅಮಾಯಕ ಜೀವಗಳ ಒಡಲ ಸತ್ಯವನ್ನು ಅಂತಃಕರಣದಿಂದ ಕಂಡು ಹೇಳಲು ಹೊರಟ ಕಥನಗಳಿವು. ಕಥನವೆಂದರೆ ನನಗೆ ಆತ್ಮಾನುಸಂಧಾನಕ್ಕಾಗಿ ಧ್ಯಾನಕ್ಕಿಳಿಯುವಷ್ಟೇ ಸಂತೋಷ ತರುವ ಕ್ರಿಯೆ! ಹಾಗಾಗಿ ಅದನ್ನು ನಾನು ಪ್ರತಿಸಾರಿಯೂ ನನ್ನಿಂದ ಸಾಧ್ಯವಿರುವಷ್ಟು ಪ್ರಾಮಾಣಿಕವಾಗಿ, ನಿಷ್ಠೆಯಿಂದ ಮಾಡಲು ಪ್ರಯತ್ನಿಸುತ್ತಿರುತ್ತಿವೆ ಎನ್ನುತ್ತಾರೆ ಲೇಖಕ ಕುಮಾರ ಬೇಂದ್ರೆ.

About the Author

ಕುಮಾರ ಬೇಂದ್ರೆ
(24 October 1977)

ಕುಮಾರ ಬೇಂದ್ರೆ ಜನನ 24-10-1977, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಬೆಳ್ಳಟ್ಟಿಯಲ್ಲಿ ಪಡೆದರು. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. ಇವರು ಹುಬ್ಬಳ್ಳಿ ನಿವಾಸಿಯಾಗಿದ್ದು 'ಉದಯವಾಣಿ' ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿ, ಪತ್ನಿ ಅನುಪಮ, ಪುತ್ರರು ಚೇತನ, ಚಂದನ, ಎರಡು ದಶಕದಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಕುಮಾರ ಬೇಂದ್ರೆ ಅವರ ಪ್ರಕಟಿತ ಕೃತಿಗಳು ಮಾದಪ್ಪನ ಸಾವು (೨೦೦೫) ಅದೃಶ್ಯ ಲೋಕದ ಮಾಯೆ (೨೦೦೭) ನಿರ್ವಾಣ (೨೦೧೧) ಗಾಂಧಿ ವೃತ್ತದ ದಂಗೆ (೨೦೧೨) ...

READ MORE

Related Books