ಹೆಣ್ಣುಮಗಳು ಆತ್ಮವಿಶ್ವಾಸದಿಂದ ಗಟ್ಟಿಯಾಗಿ ನಿಂತಳೆಂದರೆ, ಅವಳನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಆದರೆ ಈ ಸಮಾಜಕ್ಕೆ ಹೇಣ್ಣೆಂದರೆ ಅಬಲೆ , "ಅಯ್ಯೋ ಅವಳೇನು ಮಾಡ್ತಾಳೆ, ಅವಳಿಂದೇನಾಗುತ್ತೆ" ಎಂದು ಮೂಗು ಮುರಿಯುವವರ, ಮೂದಲಿಸುವವರ ಸಂಖ್ಯೆಯೇ ಹೆಚ್ಚು.. ಈ ಮಾತುಗಳು ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿತ್ತು, ಈಗಲೂ ಇದೆ, ಮುಂದೆ ಕೂಡ ಇರಬಹುದೇನೋ..! ಹೆಣ್ಣಿಗೆ ದೈಹಿಕವಾಗಿ ಸ್ವಲ್ಪಮಟ್ಟಿನ ಶಕ್ತಿ ಕಡಿಮೆಎಂಬ ವಾದವಿದ್ದರೂ, ಅವಳ ಮನೋಬಲ, ಮಾನಸಿಕ ಆತ್ಮಸ್ಥೈರ್ಯ, ಛಲ ಇವುಗಳನ್ನು ಕಡೆಗಣಿಸುವಂತಿಲ್ಲ.. ಹೆಣ್ಣು ಯಾವತ್ತೂ ಅಬಲೆಯಲ್ಲ, ಅವಳು ಸಬಲೆ! ಸಮಾಜದ, ಕುಟುಂಬದ ಕಿಂಚಿತ್ ಬೆಂಬಲವಿಲ್ಲದಿದ್ದರೂ, ಒಂಟಿಯಾಗಿ ಹೋರಾಡುವಳು.. ನಮ್ಮ ಸುತ್ತಮುತ್ತಲೇ ಇಂತಹ ಹಲವಾರು ನಿದರ್ಶನಗಳಿವೆ. ಇದಕ್ಕೆ ಮತ್ತೊಂದು ನಿದರ್ಶನವೆಂಬತೆ ಇರುವವಳು ಈ ಕಾದಂಬರಿಯ ಕಥಾ ನಾಯಕಿ ನೀರಜಾ ಅನ್ನೊ ದಿಟ್ಟೆ, ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ ಜೀವನ ಹೇಗೆ ಪರೀಕ್ಷೆ ಒಡ್ಡುತ್ತೋ ಹಾಗೆಯೇ ಅವುಗಳನ್ನೆಲ್ಲ ಎದುರಿಸಿ ಮುನ್ನುಗುವ ಈ ಛಲಗಾರ್ತಿಯ ಕಥೆಯೆ ಈ ಕಾದಂಬರಿ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE