ಉದಯೋನ್ಮುಖ ಬರಹಗಾರ್ತಿ ಗೋದಾ ಅವರು ಸಾಹಿತ್ಯರಂಗ ಪ್ರವೇಶಿಸಲು ಯತ್ನಿಸಿ ಪಡುವ ಪಾಡು, ನಾನಾ ಬಗೆಯ ತೊಳಲಾಟಗಳು, ಅವಳ ಬವಣೆಗಳು ಕಾದಂಬರಿಯ ವಾಸ್ತವತೆಗಳು. ಇಂದಿನ ಸಾಹಿತ್ಯ ಪ್ರಪಂಚದ ಸೂಕ್ಷ್ಮ ಪರಿಚಯವೂ ಇಲ್ಲಿದೆ, ಆಕರ್ಷಕ ಕಥಾಭಾಗ ಓದುಗರನ್ನು ಆಕರ್ಷಿಸುವಲ್ಲಿ ‘ಆಕಾಶಕ್ಕಿಟ್ಟ ಏಣಿ' ಕಾದಂಬರಿ ಸಫಲವಾಗಿದೆ.
ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...
READ MOREhttps://drive.google.com/file/d/1-ONw2URR7seM9TlMbMqsNm262jNUGSF2/view