‘ಅವ್ವ ನನ್ನವ್ವ’ ಕೃತಿಯು ಗುರುರಾಜ ಮಾರ್ಪಳ್ಳಿ ಅವರ ಕಾದಂಬರಿಯಾಗಿದೆ. ಲೇಖಕರ ಅನುಭವ ಜೀವನದ ವಿಚಾರಗಳು ಇಲ್ಲಿ ಮೈದೆಳೆದಿವೆ. ಸಮಾಜದಲ್ಲಿ ಕಾಣುವಂತಹ ವಿಚಾರಗಳೇ ಅವರ ಕೃತಿಗಳ ಕಥಾವಸ್ತು. ‘ಅವ್ವ ನನ್ನವ್ವ’ ಬದುಕಿನ ಅನುಭವದಿಂದ ಬಂದಂತಹ ಅಗ್ನಿದಿವ್ಯ. ಅಧ್ಯಯನಕ್ಕಿಂತ ಅನುಭವ ಮುಖ್ಯವೆನ್ನುವುದನ್ನು ನಾವು ಇಲ್ಲಿ ಗಮನಿಸಬಹುದು. ಅಧ್ಯಯನ ಪ್ರಯತ್ನಪಟ್ಟು ಯಾರು ಮಾಡಬಹುದು. ಆದರೆ ಅನುಭವವನ್ನು ತನ್ನನ್ನು ತಾನು ನಿಕಷಕ್ಕೆ ಒಡ್ಡಿ ಪಡೆಯಬೇಕಾಗುತ್ತದೆ. ತನ್ನನ್ನು ತಾನೇ ಒರೆ ಹಚ್ಚಿ ಹೊಳಪನ್ನು ಪಡೆದುಕೊಳ್ಳುವುದು ಸಾಮಾನ್ಯರ ಸಂಗತಿಯಲ್ಲವೆಂಬುದನ್ನು ನಾವು ಇಲ್ಲಿ ಕಾಣಬಹುದು. ಒಟ್ಟಾರೆಯಾಗಿ ಈ ಕಾದಂಬರಿಯು ಮಾರ್ಪಳ್ಳಿ ಅವರ ಬಹುಮುಖದ ಪರಿಚಯವನ್ನು ಮಾಡಿಸುತ್ತದೆ.
ಹಿರಿಯ ಲೇಖಕ ಗುರುರಾಜ ಮಾರ್ಪಳ್ಳಿ ಅವರು ಮೂಲತಃ ಉಡುಪಿಯ ಕಾಪಿನವರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ. ಕೃತಿಗಳು: ಅವ್ವ ನನ್ನವ್ವ, ಕೊಳಲಿನ ಸ್ವರಗಳು ...
READ MORE