‘ಓಂ ಣಮೋ’ ಕೃತಿಯು ಶಾಂತಿನಾಥ ದೇಸಾಯಿಯವರ ಕಾದಂಬರಿಯಾಗಿದೆ. ಕೃತಿಯ ಬೆನ್ನುಡಿಯಲ್ಲಿ ವಿವೇಕ್ ಶಾನ್ ಭಾಗ ಅವರು, ‘ಮುಕ್ತಿ’ಯ ಮೂಲಕ ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಹೊಸ ಬಾಗಿಲುಗಳನ್ನು ತೆರೆದ ಶಾಂತಿನಾಥ ದೇಸಾಯಿಯವರು, ತಮ್ಮ ಈ ಕೊನೆಯ ಕೃತಿಯಲ್ಲಿ ಕಾದಂಬರಿ ಪ್ರಕಾರ ಎನ್ನಬಹುದಾದ ಮತ್ತೊಂದು ಮಹತ್ವದ ಘಟ್ಟವನ್ನು ಕಾಣಿಸಿದ್ದಾರೆ. ಧರ್ಮ, ಸಂಸ್ಕೃತಿ, ಸಮಾಜ, ಸಂಬಂಧಗಳ ತೊಡಕಿನಲ್ಲಿ ಸ್ವಂತಿಕೆಯನ್ನು ಹುಡುಕುವ ಮನುಷ್ಯನ ಪಾಡು ಈ ಕಾದಂಬರಿಯ ಕೇಂದ್ರದಲ್ಲಿದೆ. ಜೈನ ಧರ್ಮದ ಬಗೆಗಿನ ಆಳವಾದ ಚಿಂತನೆ, ಆಚರಣೆ ಮತ್ತು ತತ್ವಗಳ ಸಂಘರ್ಷ ವ್ಯಕ್ತಿಗತ ಸ್ವಾತಂತ್ಯ್ರದ ಅನಿವಾರ್ಯತೆ ಮತ್ತು ಇಂದಿನ ಸಮುದಾಯದ ಸಂದರ್ಭದಲ್ಲಿ ಅದರ ಮಿತಿಗಳು ಹೀಗೆ ಈ ಎಲ್ಲವೂ ಸಂಕೀರ್ಣ ಸನ್ನಿವೇಶಗಳ ಮೂಲಕ, ಜೀವೋನ್ಮುಖ ಪಾತ್ರಗಳ ಮೂಲಕ ಶೋಧನೆಗೊಳ್ಳಪಟ್ಟಿದೆ. ಬೇಸಾಯದ ಸಶಕ್ತ ಕಥನಕಲೆ, ವಿವರಗಳ ಮೂಲಕ ಅವರು ಕಟ್ಟುವ ರೂಪಕಗಳಲ್ಲಿ ವ್ಯಕ್ತವಾಗುವ ಜಾತ್ಯಕಶಕ್ತಿ ಗ್ರಹಿಕೆಯ ಅಸಾಧಾರಣ ಸೂಕ್ಷ್ಮತೆ ಕತೆಯ ಗತಿಯನ್ನು ಅವರು ಆಯೋಜಿಸಿರುವ ರೀತಿ ಯಾವುದನ್ನೂ ನಿರ್ವಹಿಸಬಲ್ಲ ಅವರ ಕತೆಗಾರಿಕೆ, ಎಲ್ಲವೂ ಇಲ್ಲಿ ಒಂದಕ್ಕೊಂದು ಪೂರಕವಾಗಿ ಕನ್ನಡದ ಶ್ರೇಷ್ಠ ಕಾದಂಬರಿಗಳ ಪಾಲಿಗೆ ಈ ಕೃತಿ ಸೇರುವಂತಾಗಿದೆ’ ಎಂದು ಪ್ರಶಂಸಿಸಿದ್ದಾರೆ.
ನವ್ಯಕಾದಂಬರಿಕಾರರು, ವಿಮರ್ಶಕರು, ಕಥೆಗಾರರೆಂದೇ ಪ್ರಸಿದ್ಧರಾಗಿದ್ದ ಶಾಂತಿನಾಥ ದೇಸಾಯಿಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ. ಪ್ರಾಥಮಿಕ ಮತ್ತು ಮೆಟ್ರಿಕ್ ವಿದ್ಯಾಭ್ಯಾಸವನ್ನು ಧಾರವಾಡದಲ್ಲಿ ಮುಗಿಸಿದರು. ಮುಂದೆ ಮುಂಬಯಿಯ ವಿಲ್ಸನ್ ಕಾಲೇಜಿನಿಂದ ಬಿ.ಎ. ಹಾಗೂ ಎಂ.ಎ. ಪದವಿ ಪಡೆದರು. ಆನಂತರ ಬ್ರಿಟಿಷ್ ಸ್ಕಾಲರ್‌ಷಿಪ್ ಪಡೆದು ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಅಧ್ಯಯನ ಮಾಡಿದರು.ಅಲ್ಲಿಂದ ಹಿಂದಿರುಗಿ ಬಂದನಂತರ ಕರ್ನಾಟಕ ವಿಶ್ವವಿದ್ಯಾಲಯ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಉಪ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ನಂತರ 1988ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸಲ್ಲಿಸಿದ ಸೇವೆಸಲ್ಲಿಸಿದರು. ಕರ್ನಾಟಕ ಮತ್ತು ಕೇಂದ್ರ ಸಾಹಿತ್ಯ ಅಕಾಡಮಿ ಮತ್ತು ಜ್ಞಾನಪೀಠ ...
READ MORE