ಹಳ್ಳ ಬಂತು ಹಳ್ಳ

Author : ಶ್ರೀನಿವಾಸ ವೈದ್ಯ

Pages 310

₹ 250.00




Year of Publication: 2017
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮಿಭವನ, ಸುಭಾಷ್ ರಸ್ತೆ, ಧಾರವಾಡ - 580001.
Phone: 0836-2441822

Synopsys

‘ಹಳ್ಳ ಬಂತು ಹಳ್ಳ’ ಹಿರಿಯ ಲೇಖಕ ಶ್ರೀನಿವಾಸ ವೈದ್ಯ ಅವರ ಜನಪ್ರಿಯ ಕಾದಂಬರಿ ಈ ಕೃತಿಗೆ ‘ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ’ ಲಭಿಸಿದೆ.  ಓದು ಒಂದು ತ್ರಾಸದಾಯಕ ಅನುಭವೆನ್ನಿಸುವ ಇತ್ತೀಚಿನ ದಿನಗಳಲ್ಲಿ ಶ್ರೀನಿವಾಸ ವೈದ್ಯರ ಈ ಕಾದಂಬರಿ ಭಿನ್ನವಾಗಿದ್ದು, ಉಲ್ಲಾಸಕರ ಓದಿನ ಅನುಭವ ನೀಡುತ್ತದೆ ಎನ್ನುತ್ತಾರೆ ಹಿರಿಯ ಸಾಹಿತಿ ಮತ್ತು ವಿಮರ್ಶಕರಾದ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ. 

ವೈದ್ಯರು ಸೊಗಸಾದ ಕಥೆ ಹೇಳುತ್ತಾರೆ. ಅವರ ಕಥನಶಕ್ತಿ ವಾಸ್ತವವಾದಿ ಪರಂಪರೆಯ ಉತ್ತಮ ಕೃತಿಗಳನ್ನು ನೆನಪಿಗೆ ತರುತ್ತವೆ. ‘ಹಳ್ಳ ಬಂತು ಹಳ್ಳ’ ಕಮಲಾಚಾರ್ಯರ ಕುಟುಂಬರ ಕತೆ ಹೇಳಿದರೂ ಈ ಕುಟುಂಬದ ಕತೆಯ ಜೊತೆ ದೇಶದ ಕತೆಯೂ ಸೇರಿಕೊಳ್ಳುತ್ತದೆ. ಇದು ಸಾಮಾಜಿಕ ಪಲ್ಲಟದ ಸಂಕಲನವೂ ಆಗುವುದರ ಮೂಲಕ ಕಾದಂಬರಿ ಬಹುಮುಖಿ ಆಯಾಮ ಪಡೆದುಕೊಳ್ಳುತ್ತದೆ. ಸಂಪ್ರದಾಯದ ಪ್ರಧಾನ ಧಾಟಿಯ ಬದುಕು ದುರ್ಬಲಗೊಂಡು ನಂತರದ ಬದುಕಿನ ಸಾಧ್ಯತೆಗಳನ್ನು ಅನ್ವೇಷಿಸುವ ಕಾದಂಬರಿ ಸಾರ್ಥಕ ಬದುಕಿನ ಸಾಧ್ಯತೆಗಳನ್ನು ಅನ್ವೇಷಿಸುವ ಕಾದಂಬರಿ ಸಾರ್ಥಕ ಬದುಕಿನ ಧಾರಣ ಶಕ್ತಿಯನ್ನು ಕುರಿತಂತೆ ನಮ್ಮನ್ನು ಗಂಭೀರ ಚಿಂತನೆಗೆ ಹಚ್ಚುತ್ತದೆ. 

About the Author

ಶ್ರೀನಿವಾಸ ವೈದ್ಯ
(04 April 1936 - 21 April 2023)

ನಗೆಬರಹ, ಹಾಸ್ಯಪ್ರಧಾನ ಸಾಹಿತ್ಯ ಹಾಗೂ ಲಲಿತ ಪ್ರಬಂಧ ಮುಂತಾದ ಪ್ರಕಾರಗಳಿಂದ ಒಮ್ಮೆಲೆ ಗಂಭೀರ ಸಾಹಿತ್ಯದೆಡೆಗೆ ಜೀಕಿಕೊಂಡ ಶ್ರೀನಿವಾಸ ವೈದ್ಯರು ಹುಟ್ಟಿದ್ದು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ. ತಂದೆ ಬಿ.ಜಿ. ವೈದ್ಯ, ಸುಪ್ರಸಿದ್ಧ ವಕೀಲರು. ತಾಯಿ ಸ್ವಾತಂತ್ರ್ಯ ಹೋರಾಟಗಾರರ ಮನೆತನದಿಂದ ಬಂದ ಸುಂದರಾಬಾಯಿ. ಪ್ರಾರಂಭಿಕ ಶಿಕ್ಷಣದಿಂದ ಹಿಡಿದು ಎಂ.ಎ.ವರೆಗೂ ಧಾರವಾಡದಲ್ಲೇ ಶಿಕ್ಷಣ ಪೂರ್ಣ ಗೊಳಿಸಿದರು. 1959ರಲ್ಲಿ ಅರ್ಥಶಾಸ್ತ್ರ-ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದ ಅವರು ಬ್ಯಾಂಕಿಂಗ್ ಪರೀಕ್ಷೆಯಾದ ಸಿ.ಎ.ಐ.ಐ.ಬಿ ಮತ್ತು ಭಾರತೀಯ ವಿದ್ಯಾಭವನದಿಂದ ಪಡೆದ ಪತ್ರಿಕೋದ್ಯಮ ಡಿಪ್ಲೊಮಾವನ್ನು ಪೂರೈಸಿದರು. ಮನೆಯಲ್ಲಿದ್ದುದು ಸಾಹಿತ್ಯಕ, ಸಾಂಸ್ಕೃತಿಕ ವಾತಾವರಣ. ಬಿಡುವಿನ ವೇಳೆಯಲ್ಲೆಲ್ಲಾ ಕೈಯಲ್ಲೊಂದು ಕಾದಂಬರಿ ಹಿಡಿದು ...

READ MORE

Awards & Recognitions

Related Books