ನಾಟ್ಯ ಸರಸ್ವತಿ ಶಾಂತಲಾ

Author : ರಾಜೇಶ್ವರಿ ಕೆ.ವಿ.

Pages 275

₹ 225.00




Year of Publication: 2020
Published by: ಸಪ್ನ ಬುಕ್ ಹೌಸ್
Address: ಆರ್ ಒ#11, 3ನೆ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು - 560 009
Phone: 080-40114455

Synopsys

ಶಾಂತಲೆಯ ಜೀವನದಲ್ಲಿ ಎದುರಾಗುವ ಅಂತಹ ಭೀಕರ ದುರಂತಗಳಾದರೂ ಯಾವುವು? ದಿಟ್ಟಳಾದ ಶಾಂತಲೆ ಅಷ್ಟೇಕೆ ಬಲಹೀನಳಾಗಿ ಬಿಡುತ್ತಾಳೆ ಅಖಂಡ ಹೊಯ್ಸಳ ಸಾಮ್ರಾಜ್ಯದ ಮಹಾರಾಣಿಗೆ ಒದಗುವ ಸಂಕಷ್ಟವನ್ನು ಹೇಗೆ ತೆಗೆದುಕೊಳ್ಳುತ್ತಾಳೆ? ವಿಷ್ಣುವರ್ಧನ ತನ್ನ ಪತ್ನಿಯ ನಿರ್ಧಾರವನ್ನು ಸಮರ್ಥಿಸುತ್ತಾನೆಯೇ ಎಂಬೆಲ್ಲಾ ಪ್ರಶ್ನೆಗಳಿಗೆ ಈ ಕಾದಂಬರಿ ಉತ್ತರವನ್ನು ನೀಡುತ್ತದೆ. ವಿಧಿಯ ಆಟಕ್ಕೆ ಧೀಮಂತ ನಾಯಕಿಯೊಬ್ಬಳ ಬದುಕು ಅಂತ್ಯವಾಗುತ್ತದೆ. ಸಕಲ ಸದ್ಗುಣಗಳಿಂದ ಕೂಡಿದ ಶಾಂತಲೆಯ ವ್ಯಕ್ತಿತ್ವ ಈ ಕೃತಿಯಲ್ಲಿ ಮಹೋನ್ನತವಾಗಿ ಮೂಡಿ ಬಂದಿದೆ.ಅಂತಹ ಮಹಾನ್ ಮಹಿಳೆಯರು ಜನಿಸಿದ ನಾಡಿನಲ್ಲಿ ನಾವೂ ಹುಟ್ಟಿದ್ದೇವೆ ಎನ್ನುವುದೇ ಹೆಮ್ಮೆಯ ವಿಷಯ. ಹೊಯ್ಸಳ ರಾಜ್ಯದ ದೇಗುಲಗಳಿಗೆ ತನ್ನ ನೃತ್ಯದ ಭಾವ ಭಂಗಿಗಳಿಂದ ಸ್ಪೂರ್ತಿಯಾದ ನಾಟ್ಯ ಸರಸ್ವತಿ ಶಾಂತಲಾ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗುತ್ತಾಳೆ. ಲೇಖಕಿಯವರ ಬರಹ ಶೈಲಿ ಆಕರ್ಷಕವಾಗಿ.. ಸರಳವಾಗಿ ಓದಿಸಿಕೊಂಡು ಹೋಗುತ್ತದೆ.ಎಷ್ಟು ಬೇಕೋ ಅಷ್ಟೇ ಮಾಹಿತಿ ನೀಡಿ ಅನಗತ್ಯ ವಿವರಗಳನ್ನು ತಡೆದಿದ್ದಾರೆ. ಶಾಂತಲೆಯ ಜೀವನ ಕಣ್ಣಿಗೆ ಕಟ್ಟಿದಂತೆ ಚಿತ್ರಿಸಲಾಗಿದೆ.ಆ ಶೀಲವತಿ ಎದುರಿಸಿದ ಸಂದಿಗ್ಧಗಳನ್ನು ಬಹಳ‌ ಸಮರ್ಥವಾಗಿ ತಮ್ಮ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

About the Author

ರಾಜೇಶ್ವರಿ ಕೆ.ವಿ.

ಕಾದಂಬರಿಗಾರ್ತಿ ರಾಜೇಶ್ವರಿ ಕೆ. ವಿ.  ಅವರು  ಕನ್ನಡದ ಜನಪ್ರಿಯ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಅಂಚೆ ಕಛೇರಿಯಲ್ಲಿ ವೃತ್ತಿ ಆರಂಭಿಸಿದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ವೆಂಕಟಪತಿ, ತಾಯಿ ಸಾವಿತ್ರಮ್ಮ.  ‘ಬಾಳೆಂಬ ದೋಣಿ, ವಂಶೋದ್ದಾರಕ, ಮಧೂಲಿಕ, ಚಿಗುರಿದ ಕುಡಿ, ಪಂಜರದ ಗಿಳಿ, ಸೌಂದರ್ಯ, ಮೊದಲ ಮೆಟ್ಟಿಲು, ಸೂತ್ರಧಾರ, ಹೊಸ ಬದುಕು, ಹರ್ಷದ ಹೊನಲು, ಹೊನ್ನ ಹರಿಗೋಲು’ ಕಾದಂಬರಿಗಳನ್ನು ರಚಿಸಿದ್ದಾರೆ. ಅವರು ಕಾದಂಬರಿಗಳಲ್ಲದೆ ವಾಸ್ತುಶಿಲ್ಪ, ವಿಜ್ಞಾನ, ಹೊಲಿಗೆ, ಪಾಕಶಾಸ್ತ್ರ, ಹಾಸ್ಯ, ಕಾವ್ಯ, ಕಂಪ್ಯೂಟರ್ ಮೊದಲಾಗಿ ವಿಷಯ ವಸ್ತುಗಳಿಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ.  ...

READ MORE

Related Books