ಹವನ

Author : ಮಲ್ಲಿಕಾರ್ಜುನ ಹಿರೇಮಠ

₹ 150.00




Year of Publication: 2019
Published by: ಸಂಗಾತ ಪುಸ್ತಕ
Address: ಸಂಗಾತ ಪುಸ್ತಕ , ಗಜೇಂದ್ರಗಡ್ ತಾಲ್ಲೂಕು, ಗದಗ್ ಜಿಲ್ಲೆ, ಪೋಸ್ಟ್ ರಾಜೂರ್ – 582114.
Phone: 9341757653

Synopsys

ಮಲ್ಲಿಕಾರ್ಜುನ ಹಿರೇಮಠ ಅವರು ಬರೆದಿರುವ 'ಹವನ', ಸಾಂಸ್ಕೃತಿಕ ಅಧ್ಯಯನ ದೃಷ್ಟಿಯಿಂದ ಉತ್ತಮ ಕಾದಂಬರಿ. ಶೋಷಣೆಗೊಳಗಾದ ಲಂಬಾಣಿ ಜನಾಂಗದ ಆಚಾರ ವಿಚಾರ ಸಂಸ್ಕೃತಿ ಮತ್ತು ಆಧುನಿಕತೆಗೆ ಸಿಲುಕಿ ಈ ಜನಾಂಗವು ಅನುಭವಿಸುವ ಸಾಂಸ್ಕೃತಿಕ ಪಲ್ಲಟಗಳನ್ನು ದಿಟ್ಟವಾಗಿ ನಿರೂಪಿಸುತ್ತದೆ. ಲಂಬಾಣಿ ಜನಾಂಗದ ಬಗ್ಗೆಯೇ ಬರೆದಂಥ ಕತೆ ಕಾದಂಬರಿಗಳು ವಿರಳ. ಅದರಲ್ಲಿ ಹಿರೇಮಠ ಅವರ ಪ್ರಯತ್ನ ಪ್ರಶಂಸನೀಯ. ಕಾದಂಬರಿ ಓದುತ್ತ ಹೋದಂತೆ ಲಂಬಾಣಿ ಜನಾಂಗದ ಇತಿಹಾಸ, ಅವರ ಮೂಲ ಪುರುಷ ಸೇವಾಲಾಲ, ಅವರ ವಲಸೆ, ವಲಸೆಯಿಂದುಂಟಾದ ಕಷ್ಟಗಳನ್ನು ಎದುರಿಸುವ ರೀತಿ, ಏನೇ ಆಳುಮಟ್ಟದ ಕೆಲಸ ಮಾಡಿದರೂ ತಂತಮ್ಮ ಸಂಸ್ಕೃತಿ ಆಚರಣೆಗಳನ್ನು ಅಪ್ಪಿಕೊಂಡು ಆಚರಿಸುವ ರೀತಿ ಹೀಗೆ ಸಾಕಷ್ಟು ವಿಚಾರಗಳು ಓದಲು, ಅವನ್ನು ದರ್ಶಿಸಲು ಸಿಕ್ಕವು. ಇಲ್ಲಿ ಮುಖ್ಯವಾಗಿ ಭಾಷೆ ಮತ್ತು ನಿರೂಪಣಾ ಕ್ರಮ ನನಗೆ ತುಂಬಾ ಪ್ರಾಮಾಣಿಕವೆನಿಸಿತು. ಎಲ್ಲಿಯೂ ಸಿನಿಕತನವಿಲ್ಲ, ಮಾಂತ್ರಿಕ ಎನುವಂಥ ಭಾಷೆಯಿಂದ ಓದುಗನನ್ನು ಚಕಿತಗೊಳಿಸುವ ಅನಗತ್ಯ ಪಾಂಡಿತ್ಯ ಪ್ರದರ್ಶನವಿಲ್ಲ. ತಮ್ಮ ಅನುಭವದ ಹಿನ್ನೆಲೆಯಲ್ಲಿ ತಮಗೆ ದಕ್ಕಿದ ಸಂಗತಿಗಳನ್ನು ಕತೆಗೊಳಪಡಿಸಿ, ಅದನ್ನು ಶಾಂತವಾಗಿ ಹರಿವ ನೀರಿನಂತೆ ನಿರೂಪಿಸುತ್ತ ಹೋಗುತ್ತಾರೆ. ಕಾದಂಬರಿಯಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗ ಲೇಖಕರು ಉತ್ತಮ ಪುರುಷ ನಿರೂಪಣೆಯಲ್ಲಿ ಬರೆದಿರುವುದು, ಎರಡನೆಯ ಭಾಗ ಕತೆಯ ಕೆಲ ಮುಖ್ಯ ಪಾತ್ರಗಳು ತಾವಾಗೇ ತಮ್ಮ ನೆಲೆಯಲ್ಲಿ ಕಂಡಿದ್ದನ್ನು ಹೇಳುವುದು. ಕತೆಯ ಮೊದಲಲ್ಲಿ ಲೇಖಕರು ತಾವೇ ಬಂದು ಮಾತಾಡಿ ಹೋಗುತ್ತಾರೆ, ಆಮೇಲೆ ಉಳಿದ ಪಾತ್ರಗಳ ಕೈಲಿ ಮಾತಾಡಿಸುತ್ತಾರೆ. ನಿರೂಪಣೆ ದೃಷ್ಟಿಯಿಂದ ಇದೊಂದು ಒಳ್ಳೆಯ ಪ್ರಯೋಗ. ಇದರ ಮೂಲಕ ಅವರು ಲೇಖಕರು ತಮ್ಮ ವಿಚಾರಗಳನ್ನು ಕತೆಗಳ ಮಧ್ಯೆ ತೂರಿಸುವುದರಿಂದ ಬಚಾವಾಗುತ್ತಾರೆ. ಸಾಮಾನ್ಯವಾಗಿ ಕಾದಂಬರಿಗಳೆಂದರೆ ಅಲ್ಲಿ ವರ್ಣನೆ, ವಿವರಣೆ ಸಹಜ. ಅದರಲ್ಲೂ ಕವಿ ಕಾದಂಬರಿಕಾರನಾಗಿದ್ದರೆ ಅಲ್ಲಿ ಸಾಕಷ್ಟು ಕವಿತೆ ರೂಪದ ಸಾಲುಗಳು ಸಿಕ್ಕುತ್ತವೆ, ವರ್ಣನೆಯಲ್ಲಿ ರುಚಿ ತುಸು ಹೆಚ್ಚೇ ಇರುತ್ತದೆ. ಅದು ಕತೆಗೆ ತಕ್ಕಷ್ಟು ಇದ್ದರೆ ಅನುರೂಪವಾಗಿರುತ್ತದೆ, ಮತ್ತು ಓದುಗರಿಗೆ ಅದೊಂದು ಮುದನೀಡುವ ವಿಷಯವೂ ಹೌದು. ಆ ಮೂಲಕ ಓದುಗನಿಗೆ ಆ ಸನ್ನಿವೇಶದ ಪರಿಸರ ಇನ್ನೂ ಚೆನ್ನಾಗಿ ವಿದಿತವಾಗುತ್ತದೆ. ಈ ಕಾದಂಬರಿಯಲ್ಲಿ ಲೇಖಕರಿಗೆ ಕತೆ ಹೇಳುವುದು ಮುಖ್ಯವಾಗಿರುವುದರಿಂದ ಅಂತಹ ಅನಗತ್ಯ ವಿವರಣೆ ವರ್ಣನೆಗಳ ಗೋಜಿಗೆ ಹೋಗುವುದಿಲ್ಲ. ಅದರ ಇಲ್ಲದಿರುವಿಕೆಯೂ ಒಂದು ರೀತಿಯ ಸಮಾಧಾನ ಮತ್ತು ನಿರಾಳತೆ. ಅದು ಕತೆಯ ಓಟಕ್ಕೆ ಭಂಗ ಬರುವುದಿಲ್ಲ. ಓದುಗನೂ ಕತೆಯಲ್ಲಿ ತಲ್ಲೀನನಾಗುವುದರಿಂದ ಅಂತಹ ವಿವರಣೆಗಳೂ ಬೇಕೆನಿಸುವುದಿಲ್ಲ. ಆದರೆ ಲಂಬಾಣಿ ಜನಾಂಗದ ಸಂಸ್ಕೃತಿಯನ್ನು ಬಿಂಬಿಸುವಂತಹ ಸಾಕಷ್ಟು ವಿಚಾರಗಳನ್ನು, ಅವರ ಕೆಲ ಆಚರಣೆಗಳಲ್ಲಿ ಅವರು ಹಾಡುವ ಹಾಡುಗಳನ್ನು ಅವರದೇ ಭಾಷೆಯಲ್ಲೇ ದಾಖಲಿಸುತ್ತಾರೆ. ಇಂಥ ವಿವರಗಳು ಕತೆಗೆ ಪೂರಕವಾಗಿವೆ.

About the Author

ಮಲ್ಲಿಕಾರ್ಜುನ ಹಿರೇಮಠ
(06 June 1946)

ಲೇಖಕ ಮಲ್ಲಿಕಾರ್ಜುನ ಹಿರೇಮಠ ಅವರದ್ದು ವಿವೇಚನಾಪೂರ್ಣ ಸಾಹಿತ್ಯ ಮತ್ತು ವ್ಯಕ್ತಿತ್ವ. ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ 1946 ಜೂನ್ 05ರಂದು. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸದ್ಯ ನಿವೃತ್ತರಾಗಿದ್ದಾರೆ. 'ಆಕ್ವೇರಿಯಂ ಮೀನು' ಅವರ ಮೊದಲ ಕವನ ಸಂಕಲನ 1974ರಲ್ಲಿ ಪ್ರಕಟವಾಯಿತು.  ‘ಅಮೀನಪುರದ ಸಂತೆ,  ಜ್ಞಾನೇಶ್ವರನ ನಾಡಿನಲ್ಲಿ (ಪ್ರವಾಸ ಕಥನ), ಅಂತರ್ಗತ (ವಿಮರ್ಶೆ), ಅಭಿಮುಖ (ವಿಮರ್ಶೆ), ಹವನ (ಕಾದಂಬರಿ), 'ಮೊಲೆವಾಲು ನಂಜಾಗಿ' (ಕತಾ ಸಂಕಲನ), ಮೂರುಸಂಜೆ ಮುಂದ ಧಾರವಾಡ (ಲಲಿತ ಪ್ರಬಂಧಗಳು), ಗಿರಡ್ಡಿ ಗೋವಿಂದರಾಜ : ವ್ಯಕ್ತಿ-ಆಭಿವ್ಯಕ್ತಿ (ವಿಮರ್ಶೆ)’ ಅವರ ಪ್ರಮುಖ ಕೃತಿಗಳು.  ಅವರ ಸಾಹಿತ್ಯ ಸೇವೆಗೆ ‘ಕನಾಟಕ ...

READ MORE

Related Books