ಸ್ನಾನ , ರಥ , ಕ್ಷೇತ್ರ ಎನ್ನುವ ಮೂರು ಕಿರು ಕಾದಂಬರಿಗಳ ಒಳಗೊಂಡ ಪುಟ್ಟ ಪುಸ್ತಕ ‘ಸ್ನಾನ ‘. ಪ್ರತಿ ವಾಕ್ಯದಲ್ಲೂ ಅತೀ ಸೂಕ್ಷ್ಮ ತಲ್ಲಣಗಳ, ಸಂವೇದನೆಗಳ ಕಟ್ಟಿ ಕೊಡುವ ಈ ಪುಸ್ತಕದಲ್ಲಿ, ನೀವು ಇದುವರೆಗೆ ಓದಿರದ, ಭಾವಿಸಿರದ ರಂಗವನ್ನು ನಿಮ್ಮೆದುರು ತರುತ್ತವೆ. ದುರ್ಗಾಪುರ, ಶಂಕರಿ ನದಿ, ಹಗಲು, ರಾತ್ರಿ, ಗಂಡು, ಹೆಣ್ಣು ಇವಿಷ್ಟು ಇಟ್ಟು 300ಕ್ಕೂ ಹೆಚ್ಚು ಕತೆಗಳ ಕಟ್ಟಿ ಕೊಟ್ಟ ವ್ಯಾಸರ ಓದಲು ಆರಂಭಿಸುವವರಿಗೆ ಶ್ರೀಕಾರವಾಗಬಲ್ಲ ಪುಸ್ತಕ ಸ್ನಾನ. ಸ್ವಗತದ ಮೂಲಕ ಹೆಣ್ಣಿನ ಬಯಕೆ, ತುಮಲಗಳನ್ನು ತೆರೆದು ಓದುಗರನ್ನು ಹೊಸದೊಂದು ಹೊಳಹಿನೆಡೆಗೆ ತರುವ ಪುಸ್ತಕ ಇದಾಗಿದ್ದು ವ್ಯಾಸರೇ ಹೇಳಿಕೊಂಡಂತೆ ಇದು ಅವರ ಜೀವಮಾನದ ಶ್ರೇಷ್ಠ ರಚನೆಯ ಸಾಲಿಗೆ ನಿಲ್ಲುತ್ತದೆ.
ಕನ್ನಡ ಸಾರಸ್ವತ ಲೋಕದ ಖ್ಯಾತ ಸಣ್ಣ ಕಥೆಗಾರ ಎಂ. ವ್ಯಾಸ ಅವರ ಊರು ಕಾಸರಗೋಡು. ಸಭೆ, ಸಮಾರಂಭ ಎಂದರೆ ಮಾರು ದೂರ ನಿಲ್ಲುತ್ತಿದ್ದ ವ್ಯಾಸರು ಸಣ್ಣ ಕಥಾಲೋಕದಲ್ಲಿ ಆಗಾಧ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಹೆಚ್ಚಾಗಿ ಪ್ರಚಾರಕ್ಕೆ ಬಾರದ ಆದರೆ ಕನ್ನಡ ಲೋಕದ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾದ ಕಥೆಗಳನ್ನು ನೀಡಿದ ವ್ಯಾಸ ಅವರು ಅನೇಕರ ದೃಷ್ಟಿಯಲ್ಲಿ ವಿಕ್ಷಿಪ್ತರಾಗಿದ್ದರು. ಕಂಬನಿ ಅವರ ಮೊದಲ ಕಥಾ ಸಂಕಲನ. ಸುಳಿ ಮೊದಲ ಕವನ ಸಂಕಲನ. ’ಕ್ಷೇತ್ರ ಮತ್ತು ಜನಪಥ’ ಅವರ ವೈಚಾರಿಕ ಕೃತಿಗಳು ಮತ್ತು ’ಸ್ನಾನ’ ಎಂಬ ಮೂರು ಕಿರು ಕಾದಂಬರಿಗಳ ಸಂಕಲನವನ್ನೂ ಪ್ರಕಟಿಸಿದ್ದರು. 'ಅಜಂತಾ’ ಎಂಬ ಮಾಸಪತ್ರಿಕೆಯನ್ನು ಒಂದು ...
READ MORE