ಎರಡು ದೃಷ್ಯಗಳನ್ನೊಳಗೊಂಡಂತಹ ನಾಟಕ ಜಲಗಾರ. ರಾಷ್ಟ್ರಕವಿ ಬಿರುದಾಂಕಿತ ಕುವೆಂಪು ಅವರಿಂದ ರಚಿತವಾದಂತಹ ಈ ನಾಟಕ ಸಾಮಾಜಿಕ ಸಮಸ್ಯೆಗಳನ್ನು ವಿಶ್ಲೇಷಿಸಿ ರಚಿಸಿದಂತಹ ನಾಟಕ. 1931ರಲ್ಲಿ ಮೊದಲ ಮುದ್ರಣವನ್ನು ಕಂಡಂತಹ ಈ ನಾಟಕ ಆಗಿನ ಸಮಯದಲ್ಲಿ ಇದ್ದಂತಹ ಸಾಮಾಜಿಕ ಪಿಡುಗುಗಳ ಕುರಿತಾದಂತಹ ವಿವರಣೆಯನ್ನು ನೀಡುತ್ತದೆ. ಜನರ ಪರದಾಟ, ಕೆಳವರ್ಗದ ಜನ ಪಡುತ್ತಿದ್ದಂತಹ ಕಷ್ಟಗಳು, ಹೀಗೆ ಹಲವು ವಿಷಯಗಳ ಕುರಿತು ಈ ನಾಟಕ ಬರೆಯಲಾಗಿದೆ. ಅಸ್ಪೃಷ್ಯತೆ,ಯಂಥ ಸಾಮಾಜಿಕ ಸಮಸ್ಯೆಗಳ ವಿಭಿನ್ನ ದೃಷ್ಟಿಕೋನವನ್ನು ಈ ಪುಸ್ತಕದಲ್ಲಿ ಕಾಣಬಹುದು. ಪುರೋಹಿತಶಾಹಿ ವರ್ಗದ ದಬ್ಬಾಳಿಯನ್ನು ಈ ಪುಸ್ತಕದಲ್ಲಿ ಪ್ರಶ್ನಿಸಲಾಗಿದೆ. ಪುರೋಹಿತಶಾಹಿ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಪ್ರಜ್ಞಾಪೂರ್ವಕ ಪ್ರಶ್ನೆಗಳನ್ನು ಈ ಪುಸ್ತಕದಲ್ಲಿ ಕೇಳಲಾಗಿದೆ. ಪ್ರಸ್ತುತ ಸಾಮಾಜಿಕ ಕಾಲಘಟ್ಟದಲ್ಲಿ ಅಸ್ಪೃಷ್ಯತೆಯಂತಹ ಸಾಮಾಜಿಕ ಪಿಡುಗುಗಳು ಸಮಾಜದಿಂದ ನಿಧಾನವಾಗಿ ಮರೆಯಾಗುತ್ತಿಯಾದರೂ, ಅಸ್ಪೃಷ್ಯತೆಯೆಂಬುದು ತನ್ನ ಶಿಖರದಲ್ಲಿದ್ದಾಗಿನ ಪರಿಸ್ಥಿತಿಯನ್ನು ಈ ಪುಸ್ತಕದಲ್ಲಿ ಕಾಣಬಹುದು. ರೈತ, ಜಲಗಾರ ಮತ್ತು ಶಿವನ ಪಾತ್ರಗಳ ಸಹಾಯದಿಂದ ಕುವೆಂಪು ಅವರು ಈ ನಾಟಕದಲ್ಲಿ ತಮ್ಮ ಆಲೋಚನೆ ಹಾಗೂ ಧೋರಣೇಗಳನ್ನು ನಿರೂಪಿಸಿದ್ದಾರೆ.
ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...
READ MORE