ಖ್ಯಾತ ಕಾದಂಬರಿಕಾರ ತ.ರಾ.ಸು. ಅವರ ಐತಿಹಾಸಿಕ ಕಾದಂಬರಿ-ಕಸ್ತೂರಿ ಕಂಕಣ. ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಿಸಿದ ಐತಿಹಾಸಿಕ ಕಾದಂಬರಿ. ಸರ್ಜೆನಾಯಕರ ತಂದೆ ಕಸ್ತೂರಿ ರಂಗಪ್ಪ ನವರ ಕಾಲಘಟ್ಟದಲ್ಲಿ ನಡೆದ ಕಥೆ ಇದು. ಚಿತ್ರದುರ್ಗದವರನ್ನು ಬಗ್ಗುಬಡಿಯಬೇಕೆಂದು ಸಿರ್ಯ ಹಾಗೂ ತರೀಕೆರೆಯವರು ಸೇರಿ ತಂತ್ರ ರೂಪಿಸುತ್ತಾರೆ. ಅದರನ್ವಯ, ಸಿರ್ಯದ ರಂಗಪ್ಪ ನಾಯಕನ ಮಗ ಕೃಷ್ಣಪ್ಪನಾಯಕನ ಜೊತೆ ಕಸ್ತೂರಿ ರಂಗಪ್ಪನ ಮಗಳ ಮದುವೆ ನಡೆಯುತ್ತದೆ. ಹಿರಿಯೂರಿನ ಕೆಂಚಣ್ಣ ನಾಯಕನಿಗೆ ಸಿರ್ಯದವರ ಮೇಲೆ ಸಂಶಯ ಬರುತ್ತದೆ. ಬೇಹುಗಾರರಿಂದ ಮಾಹಿತಿ ಪಡೆಯುತ್ತಾನೆ. ಸಿರ್ಯದವರು ಸುಳಿವು ಕೊಡದೆ ಹಿರಿಯೂರಿನ ಮೇಲೆ ದಾಳಿ ಮಾಡುತ್ತಾರೆ, ದುರ್ಗದ ಸೈನ್ಯ ಇತ್ತ ಬಂದಾಗ, ತರೀಕೆರಿಯವರಿಂದ ದುರ್ಗದ ಮೇಲೆ ದಾಳಿ ನಡೆಸುವ ಯೋಜನೆ ಆದು. ಸಿರ್ಯದವರು ದಾಳಿ ಮಾಡಿದಾಗ ಕಸ್ತೂರಿ ರಂಗಪ್ಪ ತಮ್ಮ ಸೈನ್ಯದೊಂದಿಗೆ ಹಿರಿಯೂರಿನ ಕಡೆಗೆ ಹೊರಡುತ್ತಾರೆ. ಹೀಗೆ, ಇತಿಹಾಸದ ಸಂಗತಿಗಳನ್ನು ಒಳಗೊಂಡ ಕಾದಂಬರಿ ಇದು.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE