`ತೂಗುದೀಪ' ಅನುಬೆಳ್ಳೆ ಅವರ ಕಾದಂಬರಿಯಾಗಿದೆ. “ಬಾಸ್, ಆ ಮುಗ್ಧ ಹುಡುಗಿ ಇಂಪನಾ ಇದ್ದಾಳಲ್ಲಾ ನೋಡೋದಿಕ್ಕೂ ಚೆಲುವೆ. ನಮ್ಮ ಈ ಯೋಜನೆಗೆ ಅವಳೇ ಸರಿಯಾದ ಆಯ್ಕೆ” “ಸಲ, ಹಾಗಾದ್ರೆ ಇವತ್ತು ಸಂಜೆ ಅವಳನ್ನು ಭೇಟಿಯಾಗು” ಅವನು ಒಪ್ಪಿಗೆಯಿತ್ತ. ಇಂಪನಾ ಕೆಲಸಕ್ಕೆ ಹೊರಡುವ ಆತುರದಲ್ಲಿ ಬೆಳಗ್ಗೆ ಒಬ್ಬಳೇ ನಿರ್ಜನ ರಸ್ತೆಯಲ್ಲಿ ಬರುತ್ತಿರುವಾಗ ಗಕ್ಕನೆ ಕಾರೊಂದು ಬಂದು ಅವಳ ಹತ್ತಿರವೇ ನಿಂತಿತು. “ಮೇಡಂ, ಬನ್ನಿ, ನಿಮಗೆ ಇನ್ನು ಬಸ್ಸು ಸಿಗೊಲ್ಲ. ನಾನೇ ನಿಮ್ಮನ್ನು ಡ್ರಾಪ್ ಮಾಡ್ತೀನಿ” ಪರಿಚಿತ ಧ್ವನಿ ಕರೆದಂತಾಯಿತು. ಅವಳು ಹಿಂದೆ ಮುಂದೆ ಆಲೋಚಿಸದೆ ತೆರೆದ ಕಾರಿನ ಬಾಗಿಲೊಳಗೆ ತೂರಿಕೊಂಡಳು. ಬಾಗಿಲು ಮುಚ್ಚಿಕೊಂಡಿತು. ಕಾರು ರೊಯ್ಯನೆ ಮುಂದಕ್ಕೋಡಿತು. ಅವನು ಪಕ್ಕದಲ್ಲಿ ಕುಳಿತ ಅವಳತ್ತ ವಿಚಿತ್ರ ನೋಟ ಹರಿಸಿದ.
ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಅನು ಬೆಳ್ಳೆ ಅವರು ಮೂಲತಃ ಉಡುಪಿ ಜಿಲ್ಲೆಯ ಬೆಳ್ಳೆಯವರಾಗಿದ್ದು ಹುಟ್ಟಿದ್ದು ತಮಿಳುನಾಡಿನ ಮಧುರೈನಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಪಡುಬೆಳ್ಳೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಇನ್ನಂಜೆಯ ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜ್ ನಲ್ಲಿ ಮುಗಿಸಿದ್ದರು. ಶಿರ್ವದ ಮೂಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನಲ್ಲಿ ಪದವಿಯನ್ನು ಪಡೆದು, ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ. ಸ್ನಾತಕೋತ್ತರ ಪದವಿಯನ್ನು ಮತ್ತು ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎ. ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. ಕನ್ನಡದ ಬಹುತೇಕ ಪತ್ರಿಕಗಳಲ್ಲಿ ಇವರ ಕಥೆ, ಕಾದಂಬರಿಗಳು ಪ್ರಕಟಗೊಂಡಿವೆ. ಈವರೆಗೆ ಐವತ್ತು ಕೃತಿಗಳನ್ನು ...
READ MORE