‘ವೃಂದಾವನ’ ಎಂಬುದು ಹಿರಿಯ ಕಾದಂಬರಿಕಾರ ರಾವಬಹಾದ್ದೂರ ಅವರ ಬೃಹತ್ ಕಾದಂಬರಿ. ವೃಂದಾವನದ ಸುತ್ತ ಕಥೆ ಬೆಳೆಯುತ್ತಾ ಹೋಗುತ್ತದೆ. ಮೇಲ್ನೋಟಕ್ಕೆ ಈ ಕಾದಂಬರಿಯು ಭಕ್ತಿ ಪ್ರಧಾನವಾಗಿ ಕಂಡರೂ ಪ್ರತಿಷ್ಠಿತ ಮನೆತನದ ಕಥೆಯೂ ಆಗಿದೆ. ಬಯಲುಸೀಮೆಯ ಕಥೆ ಇದು. ರೈತರ ಬವಣೆಗಳು ಇಲ್ಲಿಯ ಕಥಾ ವಸ್ತು. ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಮತ್ತು ಸಮಾಜ ಜೀವನದಲ್ಲಿ ಬದಲಾಗುತ್ತಿರುವ ಮೌಲ್ಯಗಳ ನೈತಿಕ ಅಧಃಪತನನದ ಚಿತ್ರಣ ಹಾಗೂ ಶ್ರೀಮಂತರದ್ದೇ ಅಧಿಕಾರ-ರಾಜ್ಯವಾಗುವ ಸ್ಥಿತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.
ರಾವ ಬಹಾದ್ದೂರ ಎಂದೇ ಖ್ಯಾತಿಯ ರಾಮಚಂದ್ರ ರಾವ್ ಕುಲಕರ್ಣಿ ಅವರು ಮೂಲತಃ ವಿಜಯಪುರ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೆಪಡಸಲಗಿಯಲ್ಲಿ 24-09-1910ರಲ್ಲಿ ಜನಿಸಿದರು. ತಂದೆ ಭೀಮರಾವ್, ತಾಯಿ ಸುಭದ್ರಾಬಾಯಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ (1935) ಬಿ.ಎ. ಪದವಿ ಪಡೆದರು. ಸ್ವಾತಂತ್ಯ್ರ ಯೋಧ ಕೌಜಲಗಿ ಹಣಮಂತರಾಯ ಜೊತೆಗೂಡಿ ‘ಚರಕ ಸಂಘ ಸೇರಿ ಅದರ ವ್ಯವಸ್ಥಾಪಕರೂ ಆದರು. ಸಂಯುಕ್ತ ಕರ್ನಾಟಕ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಿದರು.ಬಾಂಗ್ಲಾದೇಶ ರಚನೆಯಾದಾಗ ಅವರು ಬಾಂಗ್ಲಾಕ್ಕೆ ತೆರಳಿ ‘ನಾ ಕಂಡ ಬಾಂಗ್ಲಾದೇಶ’ ಎಂಬ ಗ್ರಂಥ ಬರೆದರು. ಕೃತಿಗಳು: ಅಸುರಾಯಣ, ಸಾಮ್ಯವಾದ, ಇತಿಹಾಸ ಭೂತ, ವೃಂದಾವನ, ಕಾಂಚನಮೃಗ, ಧೂಮಕೇತು, ಬಾಳು ...
READ MORE