ಅಮರಶಿಲ್ಪಿ ಜಕ್ಕಣ್ಣ ಮತ್ತು ದೇಶಾಭಿಮಾನಿ ರಾಯಣ್ಣ

Author : ಬಸವರಾಜ ನಾಯ್ಕರ

Pages 208

₹ 210.00




Year of Publication: 2021
Published by: ಚಿಂತನ ಚಿತ್ತಾರ
Address: # 2, ಮೈಸೂರು ಮಹಾನಗರ ಪಾಲಿಕೆ ಸಂಕೀರ್ಣ, ರಾಮಕೃಷ್ಣ ನಗರ, ನ್ಯೂ ಆಂದೋಲನ ವೃತ್ತ, ಮೈಸೂರು-570022
Phone: 9945668082

Synopsys

‘ಅಮರಶಿಲ್ಪಿ ಜಕ್ಕಣ್ಣ ಹಾಗೂ ದೇಶಾಭಿಮಾನಿ ರಾಯಣ್ಣ’ ಹೀಗೆ ಎರಡು ಪ್ರತ್ಯೇಕ ಕಿರು ಕಾದಂಬರಿಗಳನ್ನುಸೇರಿಸಿ ಖ್ಯಾತ ಲೇಖಕ ಪ್ರೊ. ಬಸವರಾಜ ನಾಯ್ಕರ್ ಅವರು ಬರೆದ ಕೃತಿ ಇದು. ಶಿಲ್ಪ ಹಾಗೂ ವಾಸ್ತು ಶಿಲ್ಪಗಳ ಕ್ಷೇತ್ರದಲ್ಲಿ ಎಂದೂ ಮರೆಯದ ಹೆಸರು ಜಕ್ಕಣ್ಣ. ಅಮರ ಶಿಲ್ಪಿ ಎಂಬುದು ಅವರಿಗೆ ಅನ್ವಯರ್ಥಕ ನಾಮ ಮಾತ್ರವಲ್ಲ, ಹಗಲಿರುಳು ಸಹ ಅಳಿಸದ ಪ್ರತಿಭೆಯ ಸಂಕೇತವಾಗಿ ಉಳಿದಿದೆ. ಶಿಲ್ಪ ಕಲಾ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಎನ್ನುವುದಕ್ಕಿಂತ ಅವರ ಹೆಸರೇ, ವಿಶೇಷವಾಗಿ ಕರ್ನಾಟಕ ಶಿಲ್ಪಕಲಾ ವಲಯವನ್ನು ವೈವಿಧ್ಯಮಯವಾಗಿ ಅರಳಿಸುವ ಚೇತನವೇ ಆಗಿದೆ. 

ಅದೇ ರೀತಿ, ಕಿತ್ತೂರು ಸಂಸ್ಥಾನ ಇತಿಹಾಸ ಮಾತ್ರವಲ್ಲ; ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾಮಿನಿಷ್ಠೆ ತೋರಿದ ಅಸಾಧಾರಣ ವ್ಯಕ್ತಿತ್ವದಿಂದ ಛಾಪು ಮೂಡಿಸಿದ ಸಂಗೊಳ್ಳಿ ರಾಯಣ್ಣರ ವ್ಯಕ್ತಿತ್ವ ಮಾದರಿಯಾಗಿದೆ. ಹೀಗೆ ಇಬ್ಬರು ದಿಗ್ಗಜರ ಬದುಕು-ಸಾಹಸ ಕುರಿತು ಪರಿಣಾಮಕಾರಿ ವಿವರಣೆಯ ಕಾದಂಬರಿಗಳಿವು.  ಒಂದು ಕಾದಂಬರಿಯು ಕಲಾನಿಷ್ಠೆಯ ದ್ಯೋತಕವೆನಿಸಿದರೆ, ಮತ್ತೊಂದು ದೇಶಾಭಿಮಾನದ ಕಿರೀಟದಂತೆ ಕಂಗೊಳಿಸುತ್ತದೆ.  ಎರಡೂ ಕಿರು ಕಾದಂಬರಿಗಳಾದರೂ, ಅಲ್ಲಿಯ ವಸ್ತುವಿನ ಹರವು ಗಮನಿಸಿದರೆ, ಲೇಖಕರ ಇತಿಹಾಸ ಅಧ್ಯಯನದ ಆಳ-ವಿಸ್ತಾರಗಳ ಅನುಭವವೂ ಆಗುತ್ತದೆ. ಹೀಗಾಗಿ, ಈ ಕಾದಂಬರಿಗಳು, ಕನ್ನಡ ಸಾಹಿತ್ಯದಲ್ಲಿ ಉತ್ತಮ ಕೃತಿಗಳಾಗಿ ಸೇರ್ಪಡೆಯಾಗುತ್ತವೆ. 

About the Author

ಬಸವರಾಜ ನಾಯ್ಕರ
(01 August 1949)

ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್)  ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು.  ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್‍ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು.  ಅನುವಾದಿತ ಕೃತಿಗಳು:   ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...

READ MORE

Related Books