ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಾದಂಬರಿ”ತೇರು’ ರಾಘವೇಂದ್ರ ಪಾಟೀಲ ಅವರ ರಚನೆ. 2003ರಲ್ಲಿ ಮೊದಲ ಮುದ್ರಣ ಕಂಡಿತ್ತು. ಇವರ”ದೇಸಗತಿ’ ಕಾದಂಬರಿಯು ಮಧ್ಯಕಾಲೀನ ಭಾರತದಲ್ಲಿ ವ್ಯಕ್ತಿಯೊಬ್ಬನ ಸಾಹಸ, ಆಕಸ್ಮಿಕಗಳು, ಇಂತಹ ಕಾರಣಗಳಿಂದಾಗಿ ಅನೇಕಾನೇಕ ದೇಸಗತಿಗಳು, ಪಾಳೆಯ ಪಟ್ಟುಗಳು ಹಾಗೂ ಚಿಕ್ಕಪುಟ್ಟ ರಾಜ್ಯಗಳು ಹೇಗೆ ಅಸ್ತಿತ್ವಕ್ಕೆ ಬಂದವು ಎಂಬುದನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.
ಇದೇ’ ದೇಸಗತಿ” ಕಥಾವಸ್ತುವೇ ಕೇಂದ್ರವಾಗಿಸಿಕೊಂಡ ಮತ್ತೊಂದು ’ತೇರು’ ಕಾದಂಬರಿ ಸೃಷ್ಟಿಯಾಗಿದೆ. ದೇವಾಲಯ ನಿರ್ಮಿಸಿ, ಗೋಪುರಕ್ಕೊಂದು ಕಳಸ ಇಡಿಸಿ, ಬೃಹತ್ ಕಲ್ಲುಚಕ್ರಗಳ ತೇರು ನಿರ್ಮಿಸುವುದು ಇತ್ಯಾದಿ ದೇಸಗತಿಯ ಮನೋಭಾವವನ್ನೇ ಸಾಂಕೇತಿಸುತ್ತದೆ. ಜಾತ್ರೆಯಲ್ಲಿ ತೇರು ಮುಂದೆ ಚಲಿಸದೇ ಇದ್ದಾಗ ಶಾಸ್ತ್ರವು ”ನರಬಲಿ’ ಅನಿವಾರ್ಯತೆಯನ್ನು ಬೇಡುತ್ತದೆ. ಅದನ್ನೂ ಪೂರೈಸಲು ಕೆಳಜಾತಿಯ ದ್ಯಾವಪ್ಪನ ಮಗನನ್ನು ಬಲಿ ಕೊಡಲಾಗುತ್ತದೆ. ಪ್ರತಿಯಾಗಿ ದ್ಯಾವಪ್ಪನಿಗೆ ಎಂಟೆಕರೆ ಜಮೀನು ಇನಾಮಾಗಿ ನೀಡಲಾಗುತ್ತದೆ. ಅಂದಿನಿಂದ ದ್ಯಾವಪ್ಪನ ವಂಶಸ್ಥರು ತೇರು ಎಳೆಯುವ ಸಂದರ್ಭ ಚಕ್ರಗಳಿಗೆ ಹಣೆ ಹೊಡೆದುಕೊಂಡು ರಕ್ತದ ತಿಲಕದ ಸೇವೆ ಸಲ್ಲಿಸುತ್ತಾ ಬರುತ್ತಾರೆ.
ಬದಲಾಗುವ ಕಾಲಘಟ್ಟದಲ್ಲಿ ದ್ಯಾವಪ್ಪನ ವಂಶಸ್ಥರು ರಕ್ತತಿಲಕ ಸೇವೆ ನಿಲ್ಲಿಸಿ, ಜೆ.ಪಿ.ಚಳವಳಿಯಲ್ಲಿ ಭಾಗವಹಿಸಿ, ಜೈಲು ಸೇರುತ್ತಾರೆ. ದೇಸಗತಿಯಿಂದ (ಧಾರ್ಮಿಕ ಸಂಕಥನ) ಆಗುವ ಅನಾಹುತಗಳು ಬಲವಾದ ಸಾಂಪ್ರದಾಯಿಕ ಸ್ವರೂಪ ಪಡೆಯುವ, ಕಾಲಕ್ರಮೇಣ ದೇಸಗತಿಯ ಸೌಧ ಕುಸಿಯುವ ...ಹೀಗೆ ಕಾಲಘ ಟ್ಟದಲ್ಲಿ ನಡೆಯುವ ಎಲ್ಲ ಪ್ರಕ್ರಿಯೆಗಳನ್ನು”ತೇರು’ ಒಳಗೊಂಡಿದೆ.
ಪ್ರಭುತ್ವ ಕೇಂದ್ರಿತ ವ್ಯವಸ್ಥೆ ಕಾಲಕಾಲಕ್ಕೆ ಬೇರೆ ಬೇರೆ ಸ್ವರೂಪ ಪಡೆಯಬಹುದು. ಆದರೆ, ಅದರ ಮೂಲ ಆಶಯ ನಶಿಸದು. ಇಂತಹ ಕ್ರೂರ ವ್ಯವಸ್ಥೆ ಬದಲಾಗಬೇಕು ಎಂಬುದು ’ತೇರು” ಕಾದಂಬರಿಯ ಆಶಯ.
ಕನ್ನಡದ ಸೃಜನಶೀಲ ಬರಹಗಾರ ರಾಘವೇಂದ್ರ ಪಾಟೀಲರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನವರು. ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಅಧ್ಯಾಪಕ, ಪ್ರಾಂಶುಪಾಲರಾಗಿಯೂ ದುಡಿದವರು. ಬಾಲ್ಯದಿಂದಲೂ ಬರೆಹದ ತುಡಿತವಿದ್ದ ಅವರು ಕಥಾರಚನೆಯಿಂದ ಕಾದಂಬರಿ, ಪ್ರವಾಸಸಾಹಿತ್ಯ, ವಿಮರ್ಶೆ ಇನ್ನಿತರ ಪ್ರಕಾರಗಳತ್ತ ವಿಸ್ತಾರಗೊಂಡು ಹಲವು ಕೃತಿಗಳನ್ನು ರಚಿಸಿದ್ದಾರೆ. ‘ಒಡಪುಗಳು, ಪ್ರತಿಮೆಗಳು, ಮಾಯಿಯ ಮುಖಗಳು, ದೇಸಗತಿ’ ಅವರ ಕತಾ ಸಂಕಲನಗಳಾದರೆ ‘ಬಾಳವ್ವನ ಕನಸುಗಳು, ತೇರು’ ಕಾದಂಬರಿಗಳು. ಜೊತೆಗೆ ಆನಂದಕಂದರ ಬದುಕು-ಬರಹ, ವಾಗ್ವಾದ ಅವರ ವಿಮರ್ಶಾಕೃತಿಗಳು. ಕಥೆಯ ಹುಚ್ಚಿನ ಕರಿಟೊಪಿಗಿಯರಾಯ, ತುದಿಯೆಂಬ ತುದಿಯಿಲ್ಲ ಪಾಟೀಲರ ನಾಟಕಗಳು, ಇವರ ತೇರು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ...
READ MORE