ದೇವರಾಗಲು ಮೂರೇ ಗೇಣು

Author : ಶಾಂತಲ

Pages 277

₹ 300.00




Year of Publication: 2023
Published by: ಹರಿವು ಬುಕ್ಸ್
Address: #67, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿ.ವಿ.ಜಿ ರಸ್ತೆ, ನಾಗಸಂದ್ರ ಸರ್ಕಲ್ ಹತ್ತಿರ, ಬಸವನಗುಡಿ, ಬೆಂಗಳೂರು - 560004
Phone: 8088822171

Synopsys

ಸಾಮಾಜಿಕ, ರೋಚಕ, ಐತಿಹಾಸಿಕ ಕಾದಂಬರಿಗಳು ಕನ್ನಡಕ್ಕೆ ಹೊಸತಲ್ಲ. ಈ ಬಗೆಯ ಕಾದಂಬರಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಪರಿ ಮೆಚ್ಚುವಂಥದ್ದು, ಇದೀಗ ವೈಜ್ಞಾನಿಕ ಕಾದಂಬರಿಗಳು ಕನ್ನಡದಲ್ಲಿ ಅಲ್ಲಲ್ಲಿ ಸದ್ದು ಮಾಡುತ್ತಿರುವುದು ಕೂಡ ಸ್ವಾಗತಾರ್ಹ. ಈ ಬಗೆಯ ಕಾದಂಬರಿಗಳು ಕನ್ನಡದಲ್ಲಿ ಹೇರಳವಾಗಿ ಬಂದಷ್ಟು ಹೊಸ ತಲೆಮಾರಿನವರನ್ನು ಓದಿನತ್ತ ಸೆಳೆಯಬಹುದು. ಸದ್ಯಕ್ಕೆ ಈ ಬಗೆಯ ಪುಸ್ತಕಗಳು ಅಪರೂಪದಲ್ಲಿ ಅಪರೂಪ ಎಂಬಂತೆ ಇವೆ. ಆದರೆ ಈ ಕೊರತೆಯನ್ನು ನೀಗಿಸುವ ಒಂದು ಪ್ರಯತ್ನವನ್ನು ಡಾ. ಶಾಂತಲ ಅವರು ಮಾಡಿದ್ದಾರೆ. `ದೇವರಾಗಲು ಮೂರೇ ಗೇಣು' ಒಂದು ಅಪರೂಪದ ವೈಜ್ಞಾನಿಕ ಕಾದಂಬರಿ, ಸುಲಭವಾಗಿ ಓದಿಸಿಕೊಂಡು ಹೋಗುವ, ಕುತೂಹಲವನ್ನು ಕಾಯ್ದುಕೊಳ್ಳುವ, ವಿಜ್ಞಾನದ ಹಿನ್ನೆಲೆ ಇರದ ಸಾಮಾನ್ಯ ಓದುಗನೂ ಸರಳವಾಗಿ ಓದಬಹುದಾದ ಅದ್ಭುತ ಕಾದಂಬರಿ ಇದಾಗಿದೆ. ವಿಷಯವನ್ನಿಟ್ಟುಕೊಂಡು, ಇಷ್ಟೊಂದು ಸರಳವಾಗಿ ಪುಸ್ತಕವೊಂದನ್ನು ಬರೆಯಬಲ್ಲ ಡಾ. ಶಾಂತಲ ಅವರ ಪ್ರತಿಭೆಯನ್ನು ಮೆಚ್ಚಲೇ ಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಐವಿಎಫ್ ತಂತ್ರಜ್ಞಾನವು ಅಗಾಧವಾದ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಈ ಐವಿಎಫ್ ತಂತ್ರಜ್ಞಾನದ ಎಳೆಯನ್ನು ಇಟ್ಟುಕೊಂಡು ಡಾ. ಶಾಂತಲ ಅವರು ಸೊಗಸಾದ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ. ಕನ್ನಡದಲ್ಲಿ ಹೊಸ ಬಗೆಯ ಕಾದಂಬರಿ ಒಂದನ್ನು ನೀವು ಓದಲು ಬಯಸಿದ್ದರೆ ಹಾಗೂ ಮೊಟ್ಟ ಮೊದಲಬಾರಿಗೆ ಒಂದು ಪುಸ್ತಕವನ್ನು ಓದಬೇಕು ಎಂದು ಮನಸ್ಸು ಮಾಡಿದ್ದರು ದೇವರಾಗಲು ಮೂರೇ ಗೇಣು ನಿಮಗೆ ಹೇಳಿಮಾಡಿಸಿದ ಪುಸ್ತಕವಾಗಿದೆ ಎನ್ನುತ್ತಾರೆ ಕಾಮಿನಿ. ಎ. ರಾವ್.

About the Author

ಶಾಂತಲ

ಡಾ. ಶಾಂತಲ ಅವರು ಬೆಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಹಾಗೂ ದೆಹಲಿಯ ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯಕೀಯ ವಿಷಯಗಳ ಕುರಿತು ಅಂಕಣಗಳನ್ನು ಬರೆಯುತ್ತಾರೆ. ಸೈನ್ಸ್ ಫಿಕ್ಶನ್ ಪ್ರಕಾರವನ್ನು ಹೆಚ್ಚಾಗಿ ಇಷ್ಟಪಡುವ ಶಾಂತಲ ಅವರು ಕಥೆ ಕಾದಂಬರಿಗಳನ್ನು ಬರೆದಿದ್ದಾರೆ. 3019 A.D.-ಎಂಬುದು ಇವರ ಫಿಕ್ಶನ್ ಕಾದಂಬರಿ. . .   ...

READ MORE

Related Books