ʼಬಡವನ ಮನೆಯ ಮಾಣಿಕ್ಯʼ ಕಾದಂಬರಿಯನ್ನು ಲೇಖಕ ಸುದರ್ಶನ ದೇಸಾಯಿಯವರು ರಚಿಸಿದ್ದಾರೆ. ಕನ್ನಡದ ವಾರಪತ್ರಿಕೆ ಚಂದನದಲ್ಲಿ ಪ್ರಕಟವಾದ ಜನಪ್ರಿಯ ಕಾದಂಬರಿ ಕಪ್ಪುಗಂಟೆ ಹೆಸರು ಬದಲಾವಣೆಗೊಂಡು ಬಡವನ ಮನೆಯ ಮಾಣಿಕ್ಯ ಹೆಸರಿನಿಂದ ಈ ಕಾದಂಬರಿಯು ಹೊರಬಂದಿದೆ. ಕೃತಿಯ ಬೆನ್ನುಡಿಯಲ್ಲಿ ಬಡ ಕುಟುಂಬದಲ್ಲಿ ಹುಟ್ಟಿದ ಆ ಹೆಣ್ಣು ಮಹಾ ರೂಪವತಿ.ಅವಳ ರೂಪವು ಒಂದು ಬಗೆಯ ಶಿಖ ಜ್ವಾಲೆ. ನೋಡುಗರ ಮನದಲ್ಲಿ ಕಿಚ್ಚು ಎಬ್ಬಿಸುವ ರತಿಯ ರೂಪ ಅವಳದ್ದು.ಎಲ್ಲೆಡೆ ಬಡವನ ಮನೆಯ ಮಾಣಿಕ್ಯ ಎಂದೇ ಹೆಸರು. ಅದರೆ ಬಡವನ ಮನೆಯ ಮಾಣಿಕ್ಯ ಮನೆ ಬೆಳಗಲಿಲ್ಲ ಎನ್ನುದು ಈ ಪುಸ್ತಕದ ಬೆನ್ನುಡಿಯಲ್ಲಿ ಪ್ರಕಾಶಕರ ನುಡಿ.
ಲೇಖಕ ಸುದರ್ಶನ ದೇಸಾಯಿ ಅವರು ಮೂಲತಃ ಧಾರವಾಡದವರು. ತಂದೆ- ಕೃಷ್ಣರಾವ ರಾಮಾರಾವ ದೇಸಾಯಿ. ತಾಯಿ- ರಾಧಾಬಾಯಿ. ವಿದ್ಯಾಭ್ಯಾಸವನ್ನು ಧಾರವಾಡದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆ, ಮಾಳಮಡ್ಡಿಯ ಕೆ.ಇ.ಬೋರ್ಡ್ ಹೈಸ್ಕೂಲಿನಲ್ಲಿ ಪೂರ್ಣಗೊಳಿಸಿದರು. ಬಾಸೆಲ್ ಮಿಷನ್ ಟ್ರೈನಿಂಗ್ ಕಾಲೇಜಿನಿಂದ ಟಿ.ಸಿ.ಎಚ್. ತರಬೇತಿ ಪಡೆದು ಧಾರವಾಡದ ಗುಲಗುಂಜಿ ಕೊಪ್ಪದ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ದುಡಿದರು.1977ರಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡರು. ಪ್ರಜಾಮತ ವಾರಪತ್ರಿಕೆಯ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ತಮ್ಮ ಸಪ್ತಪದಿ ಕತೆಗೆ ಮೂರನೆ ಬಹುಮಾನ ಪಡೆದರು. ಆನಂತರದಲ್ಲಿ ಸುಮಾರು 60ಕ್ಕೂ ಹೆಚ್ಚು ಸಣ್ಣಕತೆಗಳನ್ನು ರಚಿಸಿದರು. ಅವರ ಕಥೆಗಳಾದ ಅಪರಿಚಿತ, ಕರಿನಾಯಿ, ನೆಲುವಿಗೆ ಹಾರದ ಬೆಕ್ಕು ಹಾಗೂ ...
READ MORE