ಲೇಖಕಿ ವಸುಮತಿ ಉಡುಪ ಅವರ ಕಾದಂಬರಿ ವಿವೇಚನೆ. ಕಾದಂಬರಿ ಪ್ರಕಾರಗಳಲ್ಲಿ ಇದು ಒಂದು ವಿಭಿನ್ನ ಪ್ರಯೋಗ... ವ್ಯಕ್ತಿಚಿತ್ರ, ಪ್ರಬಂಧ, ಕಥೆ ಹಾಗೂ ಪ್ರವಾಸ ಕಥನ ಮೇಳಾಯ್ಸಿರುವ ಕಥೆ. ಕಥಾ ನಾಯಕಿ ಅಪ್ಪ ಅಮ್ಮನ ಮೂರನೆಯ ಹೆಣ್ಣುಮಗಳು... ಅಮ್ಮ,ಗಂಡು ಮಗು ಹುಟ್ಟುವುದೆಂದು ಹಪಹಪಿಸಿ ಹರಕೆ ಹೊತ್ತು ಕಾದಾಗ ಹೆಣ್ಣು ಮಗು ಹುಟ್ಟಿದ್ದಕ್ಕಾಗಿ ನಿರಾಸೆಯಿಂದ ಅಷ್ಟಕಷ್ಟೆ ಮಾಡ್ತಿದ್ದಳಂತೆ..ಅದನ್ನು ಸಹಿಸದೆ ಕಥಾ ನಾಯಕಿಯ ವಿಧವೆ ಸೋದರತ್ತೆ *ಗೋದತ್ತೆ *ಆರೈಕೆಮಾಡಿದರು....ತಮ್ಮ ಹುಟ್ಟಿದ ಮೇಲೆ ಅಮ್ಮನ ಸಸಾರ ಕಮ್ಮಿ ಆದರೂ ಕಥಾ ನಾಯಕಿ ಅಷ್ಟರಲ್ಲಾಗಲೇ ಅತ್ತೆಗೆ ಅಂಟಿ ಕೊಂಡಾಗಿತ್ತು... ಹಾಗಾಗಿ ಗೋದತ್ತೆ ಅಂದರೆಕಥಾ ನಾಯಕಿಯ ಮನಸ್ಸಿನಲ್ಲಿ ಮೃದು ಭಾವವೊಂದು ಜಾಗ್ರತವಾಗಿ ಪ್ರೀತಿಯ ಸೆಲೆ ಉಕ್ಕಿ ಗೋದತ್ತೆಯ ಮಡಿಲಲ್ಲಿ ಎಳೇ ಮಗುವಿನಂತಾಡುತ್ತಾ ಬೆಳೆದಳು. ಗೋದತ್ತೆ ಗೂ ಸೋದರ ಸೊಸೆ ಅಂದರೆ ಪ್ರಾಣ. ಸೋದರ ಸೊಸೆ ಮಾಡುವ ಎಡವಟ್ಟು ಕೆಲಸ ಗಳಿಂದ ಪಾರು ಮಾಡುತ್ತಾ, ಎಲ್ಲಾ ಮಾತುಗಳಿಗೂ ಕಿವಿಯಾಗುತ್ತಾ ಕಷ್ಟ ಸುಖದ ಲ್ಲಿ ಪಾಲ್ಗೊಳ್ಳುತ್ತಾ ರಕ್ಷಿಸುತ್ತಿದ್ದರು. ಅಮ್ಮನ ವಿರೋಧವಿದ್ದರೂ,ಸೋದರತ್ತೆಯ ಪ್ರೋತ್ಸಾಹದಿಂದ ಅಪ್ಪನೊಡನೆ ಹಠಮಾಡಿ ಕಲಿತು ಎಂ. ಎಸ್. ಸಿ ಪೂರೈಸಿದಾಗ ಯೋಗ್ಯ ಸಂಬಂಧ ಬಂದು ಮದುವೆ ಆಗಿ ಬೆಂಗಳೂರಿ ನಲ್ಲಿ ನೆಲೆಸಿ ಆಯ್ತು.... ಪತಿಯ ಉದ್ಯೋಗದ ಕಾರಣಕ್ಕೆ, ಕಥಾನಾಯಕಿ ಒಂಟಿತನಕ್ಕೆ ಬೇಸರಿಸಿ ಒಂದು ಕಾಲೇಜ್ ನಲ್ಲಿ ಪ್ರಾಧ್ಯಾಪಕಿ ಯಾಗಿ ಸೇರಿ ಆಯ್ತು. ಮುಂದೆ ಗರ್ಭಿಣಿಯಾಗಿ ಹೆರಿಗೆಗೆ ತವರಿಗೆ ಕಥಾ ನಾಯಕಿಯ ಪತಿ ಕಳುಹಿಸದಿದ್ದಕ್ಕಾಗಿ, ಅಮ್ಮ ನಿಗೆ ಜೊತೆ ಬಂದಿರಲು ಸಾಧ್ಯವಿಲ್ಲದ್ದಕ್ಕಾಗಿ ಗೋದತ್ತೆ ಬಂದು ಜೊತೆಗೂಡುತ್ತಾರೆ.... ಆದ್ರೇ ಕಥಾನಾಯಕಿಯ ಪತಿಗೆ ತನ್ನ ಪತ್ನಿ ಬಗ್ಗೆ ಇದ್ದ ಪೊಸೆಸಿವ್ ನೆಸ್ ನಿಂದಾಗಿ ಗೋದತ್ತೆ ಬಗ್ಗೆ ಸಿಡಿಮಿಡಿ ಗೊಳ್ಳುತ್ತಾನೆ. ಸೊಸೆ ವಿರೋಧಿಸಿದರೂ ಗೋದತ್ತೆ ಸೊಸೆಯನ್ನು ಸಮಾಧಾನಗೊಳಿಸುತ್ತಾರೆ.... ತನ್ನ ಸುತ್ತಮುತ್ತ ಇದ್ದವರೊಂದಿಗೆ ತನ್ನ ಸಹಜ ನಡವಳಿಕೆಯಿಂದ ಸ್ನೇಹ ಸಂಪಾದಿಸುತ್ತಾರೆ. ಸೊಸೆಗೆ ಉದ್ಯೋಗ ಮಾಡಲು, ಸಹಾಯಕಳಾಗಿ ಯಾರಿಲ್ಲದ ಅತ್ತೆ ಒಂದೆರಡು ವರ್ಷ ಜೊತೆ ಇರಲು ತಯಾರಿದ್ದರೂ, ಪತಿಯ ಬಿರುಮಾತಿಗೆ ಸ್ವಾಭಿಮಾನಿಯಾದ ಕಥಾ ನಾಯಕಿ ತನ್ನತ್ತೆಯನ್ನು ಮರಳಿ ಹಳ್ಳಿಗೆ ಕರೆದುಕೊಂಡು ಬಂದು ಬಿಡ್ತಾಳೆ. ಮಗು ಸ್ವಲ್ಪ ದೊಡ್ಡದಾದಾಗ ಮಗುವನ್ನು ಅಜ್ಜ ಅಜ್ಜಿ ಜೊತೆ ಬಿಟ್ಟು, ಬದರಿ, ಕೇದಾರ, ಹೃಷಿಕೇಶಮುಂತಾದ ಕಡೆಗಳಿಗೆ ಪ್ರವಾಸ ಹೋಗುವ ವಿಷಯ ವರಿತು ಗೋದತ್ತೆ ತಾನೂ ಜೊತೆಗೂಡುವೆನೆಂದು ಆಸೆ ಪಡುತ್ತಾರೆ. ಎಲ್ಲರ ವಿರೋಧವನ್ನು ಗೆದ್ದು ಕಥಾ ನಾಯಕಿ ಅತ್ತೆಯನ್ನು ಜೊತೆಗೆ ಕರೆದುಕೊಂಡು ಹೋಗಿ ಆಸೆ ಪೂರೈಸುತ್ತಾಳೆ. ಆದರೇ ಅನಿರೀಕ್ಷಿತವಾಗಿ ಎರಗಿದ ಅಪತ್ತಿನಲ್ಲಿ ಸೊಸೆಯ ಮಾಂಗಲ್ಯ ಉಳಿಸಲು ಗೋದತ್ತೆ ತೆತ್ತ ಬೆಲೆ ಏನು ಎಂಬುದನ್ನುತಿಳಿಯಲು ಓದಿ.
ಲೇಖಕಿ ವಸುಮತಿ ಉಡುಪ ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಿರಣಕೆರೆಯಲ್ಲಿ 1948 ಏಪ್ರಿಲ್ 18ರಂದು ಜನಿಸಿದರು. ತಾಯಿ ತ್ರಿಪುರಾಂಬ, ತಂದೆ ರಂಗಾಭಟ್ಟರು. ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಇವರು ಬರೆದ ಕಥೆಗಳು ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವು ಕಥೆಗಳು ವಿವಿಧ ಭಾಷೆಗೆ ಅನುವಾದಗೊಂಡಿವೆ. ಪರಿವರ್ತನೆ, ಸಂಬಂಧಗಳು, ಅನವರತ, ಅವ್ಯಕ್ತ ವಸುಮತಿ ಅವರ ಪ್ರಮುಖ ಕಾದಂಬರಿಗಳು. ಬಂದನಾ ಹುಲಿರಾಯನು, ವಿಕಲ್ಪ, ಶೇಷ ಪ್ರಶ್ನೆ ಅವರ ಕತಾ ಸಂಕಲನ. ‘ಸೀತಾಳದಂಡೆ’ ಮತ್ತೊಂದು ಪ್ರಬಂಧ ಸಂಕಲನ. ಅವರ ಹಲವಾರು ಕತೆಗಳು ಹಿಂದಿ, ತೆಲುಗು ಭಾಷೆಗೆ ಅನುವಾದಗೊಂಡಿದೆ. ಅವರ ಸಾಹಿತ್ಯ ಸೇವೆಗೆ ‘ಅಳಸಿಂಗ ಪ್ರಶಸ್ತಿ, ರಾಮಕ್ಕ ಪದ್ಮಕ್ಕ ...
READ MORE