ಕಾಂಚನಸೀತ

Author : ಕೃಷ್ಣಮೂರ್ತಿ ಚಂದರ್‌

Pages 96

₹ 100.00




Year of Publication: 2021
Address: 101, ಸೃಷ್ಟಿ ಸಾಲಿಗ್ರಾಮ್ ಅಪಾರ್ಟ್ ಮೆಂಟ್ ಜಯಲಕ್ಷ್ಮಿ ರೋಡ್, ಚಾರಮಜಪುರಂ, ಮೈಸೂರು- 570 005
Phone: 9880105526

Synopsys

ಕೃಷ್ಣಮೂರ್ತಿ ಚಂದರ್ ಅವರ ಸಾಮಾಜಿಕ ಕಾದಂಬರಿ ‘ಕಾಂಚನಸೀತ’. ಎಸ್ ದಿವಾಕರ್‍ ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ. ’ಕೃಷ್ಣಮೂರ್ತಿ ಚಂದರ್, ಸುಪ್ತಪ್ರಜ್ಞೆಯ ವಾಸ್ತವಕ್ಕೂ ಬಹಿರಂಗದ ವಾಸ್ತವಕ್ಕೂ ನಡುವಣ ವ್ಯತ್ಯಾಸವನ್ನೇ ಅಳಿಸಿಬಿಟ್ಟಂತಿರುವ ಈ ಕಿರುಕಾದಂಬರಿ ಯಲ್ಲಿ ವಯಸ್ಸಾದ ಪಾತ್ರವೊಂದನ್ನು ಗತಕಾಲದ ದುರ್ಗಮ ದಾರಿಗಳಲ್ಲಿ ಸುತ್ತಾಡಿಸಿದ್ದಾರೆ. ಟೊರಾಂಟೊದ ಒಂದು ಹೋಟೆಲಿನಿಂದ ಭಾರತಕ್ಕೆ, ಅದರಲ್ಲೂ ಬಿಳಿಗಿರಿರಂಗನ ಬೆಟ್ಟಕ್ಕೆ ಸಾಗುವ, ನಿಜಕ್ಕೂ ದಣಿವುಂಟುಮಾಡುವ ಈ ಪ್ರಯಾಣದಲ್ಲಿ ಗತವನ್ನು ಕುರಿತ ಒಳಗಿನವನೊಬ್ಬನ ಜೀವನದೃಷ್ಟಿ ಅನಾವರಣಗೊಳ್ಳುತ್ತದೆ. ಏನನ್ನೂ ನೇರವಾಗಿ, ಸ್ಪಷ್ಟವಾಗಿ ಹೇಳದ, ಆದರೆ ಸೂಚ್ಯವಾಗಿ ತೋರಿಸುವ ಈ ಕೃತಿ ಏಕಕಾಲಕ್ಕೆ ಒಂದು ಸಸ್ಪೆನ್ಸ್‌ಕತೆಯೂ ಒಂದು ಪ್ರವಾಸಕಥನವೂ ಒಂದು ಕದ ಯಾತ್ರೆಯೂ ಆಗಿಬಿಟ್ಟಿದೆ. ಇಲ್ಲಿ ಹಲವು ಪಾತ್ರಗಳ, ದೃಶ್ಯಗಳ ಶಾಬ್ರಿಕ ಛಾಯಾಚಿತ್ರಿಕೆಗಳಿರುವಂತೆ ತೀರ ವೈಯಕ್ತಿಕ ಎನ್ನಬಹುದಾದ ನಿರೂಪಣೆಯೂ, ಆಂತರಂಗಿಕವಾದ ಸ್ವಗತವೂ, ಸಾಂಸ್ಕೃತಿಕ ವಿವರವೂ ಇವೆ. ಹಾಗೆ ನೋಡಿದರೆ ಇದು ಸ್ವಪ್ನವೊಂದರಲ್ಲಿ ತಪ್ಪಿಸಿಕೊಳ್ಳಬಯಸುವ, ನೆನಪುಗಳನ್ನು ಮತ್ತು ಚರಿತ್ರೆಯನ್ನು ವಂಚಿಸಬಯಸುವ ನಿಫಲ ಪ್ರಯತ್ನ ಹೇಗೋ ಅಂತೂ ಇಲ್ಲಿ ಕೆಲವು ಘಟನೆಗಳು ಜರುಗುತ್ತವೆ. ಆದರೆ, ಅವು ಏಕೆ ಮತ್ತು ಯಾಕಿ ಜರುಗಿದುವು ಎಂಬುದನ್ನು ಮಾತ್ರ ಓದುಗರು ಊಹಿಸಿಕೊಳ್ಳಬೇಕು. ಕೃಷ್ಣಮೂರ್ತಿ ಚಂದರ್ ಕಾದಂಬರಿಯುದ್ದಕ್ಕೂ ಭೌತಿಕ ಸಾಕ್ಷ್ಯಗಳನ್ನು ಒದಗಿಸುವುದರಿಂದ ಇಡೀ ಕತೆ ಕೇವಲ ಸ್ವಪ್ನವಲ್ಲ ಎಂದು ಅನ್ನಿಸುವಂತಿದೆ. ಕಾಂಚನಾಳಂಥ ಪಾತ್ರ ನಿಜವೋ, ಮರೀಚಿಕೆಯೋ ಸ್ಪಷ್ಟವಾಗಿ ಹೇಳಲಾಗದು. ಹಾಗೆ ನೋಡಿದರೆ ಓದುಗರಿಗೆ ಇಲ್ಲಿ ಉತ್ತರಗಳಿಗಿಂತ ಮಿಗಿಲಾದ ಪ್ರಶ್ನೆಗಳಿವೆ ಎನ್ನಬೇಕು. ಭಾರತದಲ್ಲೇ ತಮ್ಮ ಬೇರುಗಳನ್ನುಳಿಸಿ ಅಮೆರಿಕ, ಕೆನಡಾಗಳಂಥ ದೇಶಗಳಲ್ಲಿ ಬದುಕುತ್ತಿರುವ ಇಳಿವಯಸ್ಸಿನವರ ಮನತಿಯನ್ನು ಹೇಗೋ ಹಾಗೆ ಅವರ ಅನಾಥಸ್ಥಿತಿಯನ್ನು ಕೂಡ ತುಂಬ ಸೂಕ್ಷ್ಮವಾಗಿ ಪರಿಶೀಲಿಬವ ಈ ಕೃತಿ ವಾಸ್ತವವನ್ನೇ ಪುನರ್‌ವ್ಯಾಖ್ಯಾನಕ್ಕೆ ಒಳಪಡಿಸುವಂತಿದ್ದು ಕಾದಂಬರಿ ಪ್ರಕಾರದ ಹೊಸ ಸಾಧ್ಯತೆಯೊಂದನ್ನು ಮುನ್ಸೂಚಿಸುವಂತಿದೆ’ ಎಂದು ದಿವಾಕರ್ ಹೇಳಿದ್ದಾರೆ.

About the Author

ಕೃಷ್ಣಮೂರ್ತಿ ಚಂದರ್‌

ಕೃಷ್ಣಮೂರ್ತಿ ಚಂದರ್  ಹುಟ್ಟಿದ್ದು 1954ರಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಇಡಿ, ಎಂ.ಎ, ಪಿ.ಎಚ್ ಡಿ ಪಡೆದು ಆನಂತರ ಕೆನಡಾದ ಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ಮಾಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಮತ್ತು ವಿಭಾಗೀಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಹಾಗೂ ಇಂಗ್ಲಿಷಿನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books