ಲೇಖಕ ಎಂ.ಆರ್. ಶ್ರೀನಿವಾಸಮೂರ್ತಿ ಅವರು ಮಧ್ಯಮ ವರ್ಗದ ಸಾಮಾಜಿಕ ಜೀವನ ಕುರಿತು ಬರೆದ ಕಾದಂಬರಿ-ಮಹಾತ್ಯಾಗ. ಕವಿ ಹಾಗೂ ಚಿಂತಕ ಡಿ.ವಿ.ಜಿ ಅವರು ಬರೆದ ಮುನ್ನುಡಿಯಲ್ಲಿ ‘ಎಂ.ಆರ್. ಶ್ರೀನಿವಾಸ ಮೂರ್ತಿ ಅವರ ಸಾಹಿತ್ಯದ ಗುಣ-ವಾಸ್ತವಿಕತೆ; ಆದರೆ ಅದು ಉದಾತ್ತ ದೃಷ್ಟಿಯ ವಾಸ್ತವಿಕತೆ. ಸಂಭಾಷಣೆಯಲ್ಲಿ ಮೂರ್ತಿ ಸ್ವಾರಸ್ಯಗಾರರು. ಕಥೆ ಹೇಳುವುದರಲ್ಲಿಯೂ ಹೀಗೆಯೇ. ಅಚ್ಚುಕಟ್ಟಾದ ವಾಕ್ಯ ರಚನೆ, ವಸ್ತುವನ್ನು ಕಣ್ಣೆದುರಿಗೆ ತರಲು ಸಮರ್ಥವಾದ ಪದಗಳು, ತಿಳಿಯಾಗಿ ಹರಿದು ಗದ್ದಲವೆಬ್ಬಿಸದ ಪರಿಹಾಸ, ಮನಸ್ಸಿನಲ್ಲಿ ಸುಳಿದು, ಕಿವಿಗೆ ಕೇಳಿಸಿ, ಕೇಳಿಸದಂತಹ ಶೃಂಗಾರ ವಿಲಾಸ-ಇವೆಲ್ಲ ಮೂರ್ತಿಯ ಕಥನ ಕೌಶಲಗಳು’ ಎಂದು ಪ್ರಶಂಸಿಸಿದ್ದಾರೆ ಸಾಧಾರಣ ಮನುಷ್ಯನ ತ್ಯಾಗದ ಅನಾವರಣವೇ - ಮಹಾತ್ಯಾಗ ಕಾದಂಬರಿ.
ವಿದ್ವಾಂಸರು, ಸಾಹಿತಿಗಳು, ಆಧುನಿಕ ಕನ್ನಡದ ನಿರ್ಮಾತೃಗಳಲ್ಲಿ ಒಬ್ಬರಾದ ಎಂ. ಆರ್. ಶ್ರೀನಿವಾಸಮೂರ್ತಿ ಅವರು ಹುಟ್ಟಿದ್ದು ಮೈಸೂರಿನಲ್ಲಿ. ಉಪಾಧ್ಯಾಯರಾಗಿ, ಮುಖ್ಯೋಪಾಧ್ಯಾಯರಾಗಿ, ರೇಂಜ್ ಇನ್‌ಸ್ಪೆಕ್ಟರ್ ರಾಗಿ ಜಿಲ್ಲಾ ವಿದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ 1947ರಲ್ಲಿ ನಿವೃತ್ತಿ ಪಡೆಯುತ್ತಾರೆ. ಪ್ರಚಂಡ ವಾಗ್ಮಿ, ಉತ್ತಮ ಶಿಕ್ಷಕರು, ಸಮರ್ಥ ಅಧಿಕಾರಿಯಾದ ಅವರು ಸಂಸ್ಕೃತ, ಹಳಗನ್ನಡಗಳ ಅಭ್ಯಾಸದ ಅನುಭವದಿಂದ ರಚಿಸಿದ ಕೃತಿಗಳು.. ವಿದ್ಯಾರ್ಥಿ ದೆಸೆಯಲ್ಲಿಯೇ ರಚಿಸಿದ ಕಾದಂಬರಿ ‘ಸಾವಿತ್ರಿ.’ ಸ್ಕೌಟ್ ಬಾಲಕರ ಅಭಿನಯಕ್ಕೆಂದು ರಚಿಸಿದ ನಾಟಕ ‘ಕಂಠೀರವ ವಿಜಯ.’ ’ಧರ್ಮದುರಂತ, ನಾಗರಿಕ’ ಎಂಬ ನಾಟಕಗಳನ್ನು ರಚಿಸಿದ್ದಾರೆ. ಮಹಾತ್ಯಾಗ ಮತ್ತೊಂದು ಕಾದಂಬರಿ. ’ರಂಗಣ್ಣನ ಕನಸಿನ ದಿನಗಳು’ ಮತ್ತೊಂದು ಕೃತಿ. ಕನ್ನಡ ...
READ MORE