ಹೊಕ್ಕುಳು

Author : ಮೊಗಳ್ಳಿ ಗಣೇಶ್

Pages 354

₹ 400.00




Year of Publication: 2023
Published by: ದೇಸಿ ಪ್ರಕಾಶನ
Address: #4067/37 ’ಬಿ’ ಬ್ಲಾಕ್, 3 ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, 2 ನೇ ಅಂತ ರಾಜಾಜಿನಗರ, ಬೆಂಗಳೂರು-560010

Synopsys

‘ಹೊಕ್ಕುಳು’ ಡಾ.ಮೊಗಳ್ಳಿ ಗಣೇಶ್ ಅವರ ಕಾದಂಬರಿ. ಈ ಕೃತಿಗೆ ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಮುನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ 'ಹೊಕ್ಕುಳು' ಜೀವ ಚೈತನ್ಯವನ್ನು, ಕರುಳುಬಳ್ಳಿ ಸಂಬಂಧಗಳ ನಾನಾ ಸ್ವರೂಪಗಳನ್ನು ಸೂಚಿಸುವ ಸಾಂಕೇತಿಕ ಶಬ್ದ. ಗಂಡಿರಲಿ ಹೆಣ್ಣಿರಲಿ ಭ್ರೂಣಾವಸ್ಥೆಯೆಂಬ ಪ್ರಥಮ ಕ್ಷಣದಿಂದ ಸಾವಿನ ಅಂತ್ಯಕಾಲದವರೆಗಿನ ಬದುಕಿನ ವಿವಿಧ ಅವಸ್ಥಾಂತರಗಳ ವಿರಾಟ್ ದರ್ಶನವನ್ನು ಸೂಚಿಸುವ ಶಬ್ದ, 'ಹೊಕ್ಕುಳು' ಎಂಬುದು ಒಮ್ಮೊಮ್ಮೆ 'ತೊಟ್ಟಿಲು' ಎಂಬಂತೆಯೂ ಕೇಳಿಸುತ್ತದೆ.

ಕಳ್ಳುಬಳ್ಳಿ ಹರಕೊಂಡ ಕೂಡಲೆ ಬೀಳುವುದು ತೊಟ್ಟಿಲಿಗೆ ತಾನೆ? ತೊಟ್ಟಲೆಂಬುದು ಒಂದು ಸಮುದಾಯವನ್ನೂ, ನಾಗಲೀಕತೆಯನ್ನೂ ಸೂಚಿಸುತ್ತದೆ! ಈ ಕಾದಂಬರಿಯ ವಸ್ತು ಮತ್ತು ರಚನೆಯನ್ನು ಅತ್ಯಂತ ಸಮರ್ಥವಾಗಿ ಹಿಡಿದಿಟ್ಟಿರುವ ಶೀರ್ಷಿಕೆ ಇದು ಎಂದು ನಗನಿಸುತ್ತದೆ ಎಂದಿದ್ದಾರೆ.

ಇದನ್ನು ಇನ್ನೂ ಹೆಚ್ಚಿನ ಸಾಂಕೇತಿಕ ಅಥವಾ ರೂಪಕವನ್ನಾಗಿ ಪ್ರವೇಶಿಸಲು ನಮ್ಮ ಸ್ಥಾಪಿತ ಪುರಾಣಗಳಲ್ಲಿನ ವಿಷ್ಣುವಿನ ನಾಭಿಯಿಂದ ಹುಟ್ಟುವ ಬಳುಕುವ ಸುಂದರ ಕಮಲದ ನಡುವಿನ ವಿರಾಜಮಾನ ಮಹಾನುಭಾವ ಬ್ರಹ್ಮನ ಬಗ್ಗೆ ಯೋಚಿಸಿ ಸೃಷ್ಟಿ ಪುರಾಣವನ್ನು ಚಿಂತಪಲು ಇಲ್ಲ. ಇಲ್ಲಿರುವುದೇ ಬೇರೆ ಜಗತ್ತು. ಅಭಿವೃದ್ಧಿ ಕುರಿತಂತೆ ಆಧುನಿಕ ರಾಜಕೀಯ ಪರಿಭಾಷೆಯಲ್ಲಿ ಹೇಳಲಾಗುವ ತೀರಾ ಹಿಂದುಳಿದ ಜಗತ್ತು. ಕಾದಂಬರಿಕಾರರು ಇದನ್ನು ಕತ್ತಲ ರಾಜ್ಯವೆಂದೇ ಕರೆಯುತ್ತಾರೆ ಮತ್ತು ಆಗಾಗ ಈ ಜಗತ್ತನ್ನು ವಿವರಿಸುತ್ತಾರೆ. ಎಂದಿದ್ದಾರೆ ಅಗ್ರಹಾರ ಕೃಷ್ಣಮೂರ್ತಿ

About the Author

ಮೊಗಳ್ಳಿ ಗಣೇಶ್
(01 July 1962)

ಕತೆಗಾರ ಮೊಗಳ್ಳಿ ಗಣೇಶ್ ಅವರು ಹುಟ್ಟಿದ್ದು ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನಹಳ್ಳಿ. ಬಾಲ್ಯದ ದಿನಗಳನ್ನು ಹಳ್ಳಿಯಲ್ಲಿ ಕಳೆದ ಮೊಗಳ್ಳಿ ಅವರು ತಮ್ಮ ಅನುಭವವನ್ನು ವಿಶಿಷ್ಟ, ವಿನ್ಯಾಸದಲ್ಲಿ ಸೊಗಸಾದ ಕಥೆಗಳನ್ನಾಗಿ ಕಟ್ಟಿಕೊಡಬಲ್ಲರು.  ಕನ್ನಡ ಕಥನ ಪರಂಪರೆಗೆ ಹೊಸತನ ನೀಡಿದ ಅವರು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು.  ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ (ಕಥಾ ಸಂಕಲನಗಳು), ಮೊಗಳ್ಳಿ ಕಥೆಗಳು (ಆವರೆಗಿನ ಬಹುಪಾಲು ಕಥೆಗಳ ಸಂಕಲನ), ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕು ಬಾರಿ ಬಹುಮಾನ ಪಡೆದಿವೆ- ಒಂದು ಹಳೆಯ ಚಡ್ಡಿ (1989), ಬುಗುರಿ (1990), ಬತ್ತ (1991), ...

READ MORE

Related Books