ಸಾಹಿತ್ಯದಲ್ಲಿ ಹೊರಗಿನ ಚಟುವಟಿಕೆಗಳಿಗಿಂತ ಹೆಚ್ಚಾಗಿ ಮನುಷ್ಯನೊಳಗಿನ ಚಟುವಟಿಕೆಗಳನ್ನು ವ್ಯಕ್ತವಾಗಿಸುವುದನ್ನು ಪ್ರಧಾನವಾಗಿಸಿದ್ದು ನವ್ಯ ಬರಹಗಳು. ಲಂಕೇಶರ ಬಿರುಕು, ತೇಜಸ್ವಿಯ ಸ್ವರೂಪ, ಅನಂತಮೂರ್ತಿ, ಚಿತ್ತಾಲ, ಶಾಂತಿನಾಥ ಮೊದಲಾದವರ ಕಾದಂಬರಿಗಳು ಪ್ರಮುಖವಾಗಿದೆ.
ಕಾಮವನ್ನು ಕೇಂದ್ರವಾಗಿಟ್ಟುಕೊಂಡೂ ಬಹಳಷ್ಟು ಬರಹಗಳು ಬಂದವು. ಶೂದ್ರ ಅವರ ಹೊಸ ಕಾದಂಬರಿ 'ಆ ದಿನ' ಕುತೂಹಲವನ್ನು ಸೃಷ್ಟಿಸುವುದು ಈ ಕಾರಣಕ್ಕೆ. ಕಾಮ ಮನುಷ್ಯನ ವ್ಯಕ್ತಿತ್ವವನ್ನು ಅರಳಿಸುವಲ್ಲಿ, ರೂಪಿಸುವಲ್ಲಿ ಹಾಗೆಯೇ ಕೆಲವೊಮ್ಮೆ ಛೇದಿಸುವಲ್ಲೂ ಬಹಳಷ್ಟು ಪರಿಣಾಮಗಳನ್ನು ಬೀರುತ್ತದೆ.
ಕಾಮ ಒಬ್ಬ ಹೆಣ್ಣಿನ ಬದುಕನ್ನು ಕೊನೆಯವರೆಗೂ ನಿಯಂತ್ರಿಸುವುದಕ್ಕೆ ಹವಣಿಸುತ್ತದೆ ಮತ್ತು ಆಕೆ ಅದರಿಂದ ಪಾರಾಗಲು ಹವಣಿಸುತ್ತಾ ತನ್ನನ್ನು ತಾನು ಉಳಿಸಿಕೊಳ್ಳಲು ಹೇಗೆ ಪ್ರಯತ್ನಿಸುತ್ತಾಳೆ ಎನ್ನುವುದನ್ನು ಕಾದಂಬರಿ ವಿವರಿಸುತ್ತದೆ.
ಸೂಕ್ಷ್ಮ ಸಂವೇದನೆಯ ಕವಿ ಶೂದ್ರ ಶ್ರೀನಿವಾಸ್ ಅವರು ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕು ಮುತ್ತಾನಲ್ಲೂರು ಗ್ರಾಮದಲ್ಲಿ. ಈಗ ಬೆಂಗಳೂರು ವಾಸಿ. 1973ರಲ್ಲಿ ಶೂದ್ರ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿ ಅನೇಕ ವರ್ಷಗಳ ಕಾಲ ನಡೆಸಿದರು. 1996ರಲ್ಲಿ ಸಲ್ಲಾಪ ವಾರಪತ್ರಿಕೆ ಪ್ರಾರಂಭಿಸಿ ಒಂದು ವರ್ಷ ನಡೆಸಿದರು. 2002ರಲ್ಲಿ 'ನೆಲದ ಮಾತು' ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಶೂದ್ರ ಶ್ರೀನಿವಾಸ ಸಮಾಜವಾದಿ ರಾಜಕೀಯ ಚಿಂತನೆಯ ವ್ಯಕ್ತಿ. ಅವರು 1975-76ರಲ್ಲಿ 'ತುರ್ತು ಪರಿಸ್ಥಿತಿ'ಯಲ್ಲಿ ಎರಡು ಬಾರಿ ಬಂಧನ ಮತ್ತು ಸೆರೆಮನೆ ವಾಸ ಕಂಡವರು. 1976ರಲ್ಲಿ ಕೇರಳದ ಕೊಚ್ಚಿನ್‌ನಲ್ಲಿ ನಡೆದ ರಾಷ್ಟ್ರೀಯ ತುರ್ತು ...
READ MORE