ಜಾತಿ ವ್ಯವಸ್ಥೆ, ಧಾರ್ಮಿಕ ಮೂಢನಂಬಿಕೆಗಳು, ಪ್ರೇಮದ ಪದ ಕೇಳಿದಾಗಲೇ ಮೈ ಮೇಲೆ ಕಂಬಳಿ ಹುಳುವನ್ನು ಬಿಟ್ಟುಕೊಂಡಂತೆ ಆಡುವ ಜನರಿಗೆ ತಮ್ಮ ಅಂಬರದಲ್ಲಿ ಅರಳಿದ ಹೂಗಳು’ ಕಾದಂಬರಿಯಲ್ಲಿ ಸೌಮ್ಯವಾಗಿ ಉತ್ತರ ನೀಡಿದ್ದಾರೆ ಸೋನು ಸೌಮ್ಯ. ಸಮಾಜದ ಕಟ್ಟು ಪಾಡುಗಳ ಬಿಗಿ ಮುಷ್ಟಿಯಿಂದ ಪಾರಾಗಿ ಬಂದು ಅನೇಕ ಉತ್ತಮ ಕಾರ್ಯ ಮಾಡುವಲ್ಲಿ ಯಶಸ್ಸು ಕಾಣುವ ಪಾತ್ರದ ಇವರ ಈ ಕಾದಂಬರಿ ಖುಷಿ ನೀಡುತ್ತದೆ. ಭಾವನಾತ್ಮಕ ಸಂಬಂಧಗಳ ಹೆಣೆದು ಲೇಖಕಿ ತಮ್ಮ ನಿರೂಪಣಾ ಶೈಲಿಯಿಂದ ಓದುಗರ ಗಮನ ಸೆಳೆದಿದ್ದಾರೆ.
ಸೌಮ್ಯಾಮೃತ ಕಾವ್ಯನಾಮದಿಂದ ಬರೆಯುವ ಸೌಮ್ಯ (ಸೋನು) ಅವರು ಬೆಂಗಳೂರು ನಿವಾಸಿ. ಎಂ.ಕಾಂ, ಎಂಬಿಎ ಅಧ್ಯಯನ ಮಾಡಿರು ಅವರು ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ. ಬಯಕೆಯ ಆ ದಿನಗಳು (ಕಥಾಸಂಕಲನ), ಪ್ರೀತಿಯ ಪಯಣ (ಕವನಸಂಕಲನ), ನಗುವ ಹೂ ಅತ್ತಾಗ (ಕಾದಂಬರಿ), ನಾವಿಬ್ಬರೇ ಇದ್ದಾಗ (ನನ್ನ ಮತ್ತು ಆತ್ಮದ ನಡುವಿನ ಸಂಭಾಷಣೆ)- ಕಾದಂಬರಿ ಪ್ರಕಟಿತ ಕೃತಿಗಳು. ಸೌಮ್ಯ ಅವರಿಗೆ ಸಾಹಿತ್ಯ ಚಿಗುರು, ಯುವ ಚೇತನ, ಕರ್ನಾಟಕ ಯುವರತ್ನ, ಕುವೆಂಪು ಕನ್ನಡರತ್ನ, ಕನ್ನಡ ಸೇವಾರತ್ನ ಪ್ರಶಸ್ತಿಗಳು ಸಂದಿವೆ. ಬೆಳಕು ಸಂಸ್ಥೆಯ ಕಾರ್ಯಕ್ರಮಗಳ ನಿರ್ವಾಹಕ ಅಧ್ಯಕ್ಷೆ ಮತ್ತು ಬೆಳಕು ಪ್ರಕಾಶನದ ಅಧ್ಯಕ್ಷೆಯಾಗಿದ್ದಾರೆ. ಐವತ್ತಕ್ಕೂ ಹೆಚ್ಚು ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕವನವಾಚಿಸಿದ್ದೇನೆ. ಇಲ್ಲಿಯವರೆಗೂ 600ಕ್ಕೂ ...
READ MORE