ಕಪ್ಪು ನಕ್ಷತ್ರ

Author : ಬೇಲೂರು ರಾಮಮೂರ್ತಿ

Pages 280

₹ 90.00




Year of Publication: 2000
Published by: ಭಗವತಿ ಪ್ರಕಾಶನ
Address: ಬೆಂಗಳೂರು

Synopsys

`ಕಪ್ಪು ನಕ್ಷತ್ರ’ ಬೇಲೂರು ರಾಮಮೂರ್ತಿಅವರ ಕಾದಂಬರಿಯಾಗಿದೆ. ಮನೋಹರ ಒಬ್ಬ ಒಳ್ಳೆ ಮನೆತನದ ಹುಡುಗ. ಆದರೆ ಯಾವಾಗಲೂ ಇತರರ ಕಷ್ಟಕ್ಕೆ ಮರುಗುವಂತಹ ಜೀವ. ತನ್ನ ಕೈಲಾದಷ್ಟು ಸಹಾಯವನ್ನು ಮಾಡುತ್ತಿರಬೇಕು ಎನ್ನುವ ಸ್ವಭಾವದವನು. ಹೀಗೆ ಸಹಾಯ ಮಾಡಲು ಹೊರಟಾಗ ಅವನಿಗೆ ಒಂದಲ್ಲ ಹಲವಾರು ಸಮಸ್ಯೆಗಳು ಎದುರಾಗಿ ಅವನ ಬದುಕೇ ರಾಡಿಯಾಗುತ್ತದೆ. ಸ್ನೇಹಿತ ಅನಂತಯ್ಯ ತನ್ನ ತಾಯಿಯ ಒಡವೆಗಳನ್ನು ಅಡ ಇಟ್ಟುಹಣ ಪಡೆದಿದ್ದ. ಕೆಲವು ದಿನಗಳಾದ ಮೇಲೆ ಹಣ ಹೊಂದಿಸಿ ಅಂಗಡಿಗೆ ಹೋಗಿ ಒಡವೆ ವಾಪಸ್ ಪಡೆಯಲು ಹೋದರೆ ಅಂಗಡಿಯವನು ಹಣ ಪಡೆದು ಸ್ವಲ್ಪ ಹೊತ್ತು ತಡೆದು ಬಾ ಅಂತಾನೆ. ಆಮೇಲೆ ಹೋದರೆ ಇತ್ತ ಹಣವೂ ಇಲ್ಲ ಅತ್ತ ಒಡವೆಯೂ ಇಲ್ಲ ಅನ್ನುವಂತಾಗುತ್ತದೆ.

ಈ ಜಗಳದಲ್ಲಿ ಮಧ್ಯ ಪ್ರವೇಶಿಸಿದ ಮನೋಹರನ ಮೇಲೆ ಆರೋಪ ಬರುತ್ತದೆ. ಹೀಗೆ ಒಂದಲ್ಲಾ ಒಂದು ಸಮಸ್ಯೆಗಳಿಗೆ ಸಿಕ್ಕಿಕೊಂಡರೂ ಊರಿನಲ್ಲಿ ಒಂದು ಶಾಲೆ ತೆರೆದು ಹುಡುಗರ ಓದಿಗೆ ಕಾರಣನಾಗುತ್ತಾನೆ. ಆದರೂ ಅವನ ಬದುಕು ಸರಿ ಹೊಗಲೇ ಇಲ್ಲ. ಏಕೆ ಎನ್ನುವುದಕ್ಕೆ ಕಪ್ಪು ನಕ್ಷತ್ರ ಕಾದಂಬರಿಯಲ್ಲಿ ಉತ್ತರವಿದೆ.

About the Author

ಬೇಲೂರು ರಾಮಮೂರ್ತಿ
(30 June 1950)

ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು.  ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು.  ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.  ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...

READ MORE

Related Books