’ಕಾದಂಬರಿಗಳ ಲೋ” ವಿಜಯಾ ಸುಬ್ಬರಾಜ್ ಅವರ ಸಮಗ್ರ ಕಾದಂಬರಿಗಳ ಸಂಕಲನವಾಗಿದೆ. ’ಗಂಡು-ಹೆಣ್ಣಿನ ನಡುವಿನ ಘರ್ಷಣೆಗೆ ಅವರಲ್ಲಿಯ ವ್ಯತ್ಯಾಸಗಳೇ ಕಾರಣ. ಆದರೆ, ಈ ಬಗೆಯ ಘರ್ಷಣೆ ಗಂಡು-ಹೆಣ್ಣಿಗಷ್ಟೇ ಸೀಮಿತವಾಗದೆ ಅದರ ಆಚೆಗೂ ವಿಸ್ತರಿಸುತ್ತದೆ. ಮನುಷ್ಯ ಸ್ವಭಾವದಲ್ಲಿನ ಒಳಿತು ಕೆಡುಕುಗಳ ನಡುವಿನ ಘರ್ಷಣೆಯಾಗಿಯೂ ಪರಿಣಮಿಸುತ್ತದೆ. ಗಾಜು ಮತ್ತು ವಕ್ರದ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಆದರೆ ನೋಡುವುದಕ್ಕೆ ಎರಡೂ ಗಾಜಿನ ತುಂಡುಗಳೆಂಬ ಭಾವನೆ ಬರುತ್ತದೆ. ಮನುಷ್ಯನ ಸ್ವಭಾವ ಮತ್ತು ಮನುಷ್ಯ ಪ್ರಮಾಣದಲ್ಲಿ ಪರಸ್ಪರ ಭಿನ್ನತೆಗಳಿರುತ್ತವೆ. ಕೇವಲ ಹೆಣ್ಣು-ಗಂಡುಗಳ ಪ್ರಶ್ನೆಗೆ ಸೀಮಿತವಾದುದಲ್ಲ. ಶೋಷಣೆ, ಅತ್ಯಾಚಾರಗಳು ಜಾತಿ, ವರ್ಗಗಳಲ್ಲಿಯ ವ್ಯತ್ಯಾಸಗಳಲ್ಲೂ ಅಡಕವಾಗಿವೆ. ಹೆಣ್ಣೆ ಹೆಣ್ಣಿನ ಮೇಲೆ ಅತ್ಯಾಚಾರ ನಡೆಸಬಹುದು, ಶೋಷಣೆ ಮಾಡಬಹುದು. ಹಾಗೆಯೇ ಶೋಷಣೆಗೆ ಒಳಗಾಗಲೂಬಹುದು. ಆದರೆ ಇಂತಹ ಸನ್ನಿವೇಶಗಳು ಅಪರೂಪವಾಗಿ ಕಣ್ಣಿಗೆ ಬೀಳುತ್ತವೆ. ಯಾಕೆಂದರೆ, ಅವಳ ಕೈಗೆ ಅಧಿಕಾರ ಬರುವುದೇ ಎಂದೋ ಒಮ್ಮೊಮ್ಮೆ’ ಎನ್ನುವ ವಿಜಯಾ ಸುಬ್ಬರಾಜ್, ತಮ್ಮ ಕಾದಂಬರಿಗಳ ಕಥಾ ವಸ್ತುವಿನ ಮಾಹಿತಿ ನೀಡುತ್ತಾರೆ.
ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...
READ MORE