ಛಿದ್ರ

Author : ಬಿ.ಆರ್‌. ಚಂದ್ರಶೇಖರ ಬೇದೂರು

Pages 160




Published by: ಕೃತಿ ಪ್ರಕಾಶನ
Address: ನಂ.10, ಶ್ರೀ ಮಾತಾ, ಆದಿತ್ಯನಗರ, 5ನೇ ಮುಖ್ಯರಸ್ತೆ, ಅಂಜನಾಪುರ ಪೋಸ್ಟ್, ಜೆ.ಪಿ.ನಗರ, 8ನೇ ಹಂತ, ಬೆಂಗಳೂರು - 560 108

Synopsys

ಲೇಖಕ ಬಿ.ಆರ್‌. ಚಂದ್ರಶೇಖರ ಬೇದೂರು ಅವರ ಕಾದಂಬರಿ ಛಿದ್ರ. ಒಂದು ಹಳ್ಳಿಯ ಎರಡು ಕುಟುಂಬಗಳು ಪರಸ್ಪರ ದ್ವೇಷ ಮತ್ತು ಕುಟಿಲ ತಂತ್ರ ಮಾಡಿ ಹಾಳಾದ ಟ್ರಾಜಿಡಿ ಕಥೆಯೆಂದು ಮುನ್ನುಡಿಯಲ್ಲೇ ಸೂಚಿಸಿದ್ದಾರೆ.ಇಲ್ಲಿ ಲೇಖಕರು ಎರಡು ಮನೆತನಸ್ತ ಬೇರೆ ಬೇರೆ ಜಾತಿಯ ಕುಟುಂಬಗಳ ಹುಟ್ಟು, ಬೆಳವಣಿಗೆ, ವರ್ತನೆ ಮತ್ತು ಅವರ ಜೀವನದಲ್ಲಿ ಬಂದು ಹೋಗುವ ಘಟನಾವಳಿ ಹೇಗೆ ಪರಸ್ಪರ ಪೀಳಿಗೆಯುದ್ದದ ದ್ವೇಷ ಅಸೂಯೆ, ಪಿತೂರಿ- ಕೊನೆಗೆ ಅವರ ಸಂತತಿಯ ವಿನಾಶಕ್ಕೇ ಕಾರಣವಾಯಿತೆಂದು ಚಿತ್ರಿಸಿದ್ದಾರೆ. ಬಹಳ ಸ್ವಾಭಾವಿಕವಾಗಿ - ನಿರೀಕ್ಷಿತ ಜಾಡಿನಲ್ಲೇ ನಡೆಯುವ ಈ ಕಥೆಯ ಓಘದಲ್ಲಿ ಹಲವು ಸ್ಟೀರಿಯೋಟೈಪುಗಳಿವೆ- ಶಾಸ್ತ್ರ ಸ್ತೋತ್ರ ಮಾಡಿಕೊಂಡಿದ್ದ ಧರ್ಮದ ಮೂರ್ತಿ ಆಚಾರವಂತ- ರಾಯರು, ಅನಾಚಾರ, ಕುಟಿಲ ತಂತ್ರ, ಮೋಸ, ಅನೈತಿಕ ವ್ಯವಹಾರವನ್ನೇ ಮಾಡುವ ದುಷ್ಟ- ಗೌಡರು... ಅವರ ಅದೇ ದಾರಿಯಲ್ಲಿ ಮೊದಮೊದಲು ಸಾಗುವ ಮಕ್ಕಳು... ಪಟ್ಟಣಕ್ಕೆ ಬಂದ ಹಳ್ಳಿಗ ಯುವಕರೆಲ್ಲಾ ( ಆಗಿನ ಸಮಾಜದ ಪ್ರಕಾರ) ದುರಭ್ಯಾಸ ಕಲಿತು ಕೆಡುವರೆಂಬ ಪೂರ್ವಗ್ರಹ, ಪಟ್ಟಣದ ಯುವತಿಯರು ಬೆಡಗು- ಬಿನ್ನಾಣಗಿತ್ತಿಯರು ಮುಗ್ಧರನ್ನು ಬಲೆಯಲ್ಲಿ ಹಾಕಿಕೊಳ್ಳುವವರು, ಹಳ್ಳಿಯ ಕೆಲವು ಹೆಂಗಸರ ಶೀಲಗೆಟ್ಟ ಬದುಕು...ಇವೆಲ್ಲಾ ಅಲ್ಲಲ್ಲಿ ಎದ್ದು ಕಾಣುತ್ತವೆ. ಆದರೇಕೆ ಎಲ್ಲಾ ಪಾತ್ರಗಳು ಹೀಗೆ ಪಕ್ಕಾ ಕಪ್ಪು ಅಥವಾ ಬಿಳಿ ಇರಬೇಕು, ಬೂದು ( ಗ್ರೇ) ಇರಬಾರದು ಎಂಬುದು ಗೊತ್ತಾಗುವುದಿಲ್ಲ. ಬಹುಶಃ ಲೇಖಕರು ಆ ವಯಸ್ಸಿನಲ್ಲಿ, ಆ ಕಾಲದಲ್ಲಿ ಕಂಡ ಸ್ವಂತ ಅನುಭವಗಳ ಪ್ರಕಾರ ಇದು ಸಹಜವೇ ಇದ್ದೀತು.

About the Author

ಬಿ.ಆರ್‌. ಚಂದ್ರಶೇಖರ ಬೇದೂರು

ಲೇಖಕ ಬಿ. ಆರ್. ಚಂದ್ರಶೇಖರ ಬೇದೂರು ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೇದೂರು ಗ್ರಾಮದವರು. ಕಾನೂನು ಪದವೀಧರರು. ಸ್ನಾತಕೋತ್ತರ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. 16ನೇ ವಯಸ್ಸಿನಲ್ಲೇ ಛಿದ್ರ ಎಂಬ ಕಾದಂಬರಿ ರಚಿಸಿದ್ದರು. 6 ಕನ್ನಡ ಕಾದಂಬರಿ ಹಾಗೂ ‘A Brilliant shadow’ ಎಂಬ ಇಂಗ್ಲಿಷ್  ಕಾದಂಬರಿ ರಚಿಸಿದ್ದಾರೆ. ವಾಸ್ತವಿಕ ಜಗತ್ತಿನ ಆಗು ಹೋಗುಗಳ ವಿಷಯ ಎತ್ತಿಕೊಂಡು ಆಧ್ಯಾತ್ಮದ ಹಿನ್ನೆಲೆಯಲ್ಲಿ ನೋಡುವುದು ಅವರ ಕಾದಂಬರಿಗಳ ವೈಶಿಷ್ಟ್ಯ. ‘ಯಮಮಾರ್ಗದಲ್ಲಿ ವೈತರಣೀ ನದಿ’, ‘ನೈಮಿಷಾರಣ್ಯ’, ‘ಅಜ್ಞಾತ’ ಅವರ ಪ್ರಮುಖ ಕಾದಂಬರಿಗಳು.  ...

READ MORE

Related Books