‘ಕಲಿಪ್ಲವಂಗಮ’ ಕೃತಿಯು ಹರಿಕೃಷ್ಣ ಭರಣ್ಯ ಅವರ ಪುರಾಣಾಧಾರಿತ ಕಾದಂಬರಿಯಾಗಿದೆ. ಹನುಮಂತನೆಂದರೆ ಮಾರುತಿ; ಕೇಸರಿ ಅಂಜನೆಯರಿಗೆ ಪರಶಿವನ ವರಪ್ರಸಾದದಿಂದ ವಾಯುದೇವನ ಮಧ್ಯಸ್ಥಿಕೆಯಲ್ಲಿ ಜನಿಸಿದ ವೀರ ಪುತ್ರ. ಆತನಿಗಿರುವ ಶಕ್ತಿಗಳಾದರೋ ಅತ್ಯಂತ ವಿರಳ, ನಾನು ರಾಮಾಯಣ ಹಾಗೂ ಮಹಾಭಾರತಗಳನ್ನು ಅವಲೋಕಿಸುತ್ತಾ ಹೋಗುತ್ತಿರುವಾಗ, ಕೆಲವು ಪಾತ್ರಗಳು ನನ್ನನ್ನಾಕರ್ಷಿಸಿದವು. ಅವುಗಳಲ್ಲಿ ಅಭಿಮನ್ಯು, ಪರಶುರಾಮ, ದಶಗ್ರೀವನಾದ ರಾವಣ, ಹನುಮಂತ ಈ ಪಾತ್ರಗಳ ಬಗ್ಗೆ ಮೊದಲು ಅಧ್ಯಯನ ಸುರು ಹಚ್ಚಿದೆ. ಮಾತ್ರವಲ್ಲ ಅವುಗಳ ಬಗ್ಗೆ ಒಂದಷ್ಟು ವಿಷಯಗಳನ್ನು ಸಂಗ್ರಹಿಸಿ ಕಥಾ ರೂಪದಲ್ಲಿ ಬರೆಯತೊಡಗಿದೆ ಎನ್ನುತ್ತಾರೆ ಲೇಖಕ ಹರಿಕೃಷ್ಣ ಭರಣ್ಯ.
ಡಾ. ಹರಿಕೃಷ್ಣ ಭರಣ್ಯರು (ಜನನ 1951) ತಮಿಳುನಾಡಿನ ಮದುರೈ ಕಾಮರಾಜ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಸದ್ಯ ಕುಂಬಳೆಯ ನಾರಾಯಣ ಮಂಗಲದಲ್ಲಿ ನೆಲೆಸಿದ್ದಾರೆ. ಅವರ ಹುಟ್ಟು ದಕ್ಷಿಣ ಕನ್ನಡ ಜಿಲ್ಲೆಯ ಪಾಣಾಜೆಯ ಭರಣ್ಯ. ಹವಿಗನ್ನಡ ಮಾತೃಭಾಷೆಯ ಭರಣ್ಯರು ಕನ್ನಡವಲ್ಲದೆ ಇಂಗ್ಲಿಷ್, ತಮಿಳು, ತುಳು, ಮಲಯಾಳಂ ಮತ್ತು ಹಿಂದಿ ಭಾಷೆಗಳನ್ನು ಬಲ್ಲರು. ಸಂಶೋಧನೆ - ಪ್ರವೇಶ, ಸಂಶೋಧನ ವಿಧಾನ, ಹೊಸಗನ್ನಡ ಸಾಹಿತ್ಯದ ಉಗಮ ಮತ್ತು ವಿಕಾಸ, ಹವ್ಯಕಾಧ್ಯಯನ, ಕಾವೇರಿಕಾನ ಕೃಷ್ಣ ಭಟ್ಟರ ಬದುಕು ಇತ್ಯಾದಿ ಅವರ ಕೃತಿಗಳು. ಭರಣ್ಯರು 'ಮೂಡು ಮಜಲು' ಮತ್ತು ...
READ MORE