‘ಮನ್ವಂತರ’ ಕೃತಿಯು ಮಹಾಲಿಂಗ ಮಂಗಿ ಅವರ ವೈಚಾರಿಕ ಕಾದಂಬರಿಯಾಗಿದೆ. ಇಲ್ಲಿ ಆಳವಾದ ಅಧ್ಯಯನ , ಜೀವಾನುಭವ, ಲೋಕಾನುಭವ, ಅನುಭಾವದ ಸಮೈಕ್ಯತೆಯಿದೆ. ಮನ್ವಂತರ ಯುವಕರಿಗೆ ದಂಪತಿಗಳಿಗೆ ಬರೆಯಲಾದ ಕಾದಂಬರಿ. ಸಂಕೀರ್ಣ ವಿಚಾರಗಳನ್ನಿಟ್ಟುಕೊಂಡೇ ಪಾತ್ರ, ಸನ್ನಿವೇಶ, ಶೃಂಗಾರ ಕಟ್ಟಿಕೊಡುವವ ಪ್ರಯತ್ನ. ಕಾಮಕ್ಕಾಗಿ ಅಲ್ಲ ಜೀವನಕ್ಕಾಗಿ ಪೂರಕವಾಗಿ ಇರಬೇಕು. ದಾಂಪತ್ಯ ಜೀವನದ ಯಶಸ್ಸು-ಜೀವನದ ಶ್ರೇಯಸ್ಸಿಗೆ ಮೂಲ, ಸತಿಪತಿ ಶೃಂಗಾರ ಸಮೈಕ್ಯತೆ ಎಂದಿದ್ದಾರೆ ಇಲ್ಲಿ ಲೇಖಕ ಮಹಾಲಿಂಗ ಮಂಗಿ.
ಮಹಾಲಿಂಗ ಮಂಗಿ ಅವರು ಮೂಲತಃ ಬೆಳಗಾವಿಯವರು. ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ವೃತ್ತಿಯಿಂದ ಗೋಕಾಕ ಜವಳಿಗಿರಣಿ ಕೂಲಿಕಾರ್ಮಿಕ. ಪ್ರವೃತ್ತಿಯಿಂದ ಲೇಖಕ, ಕಲಾವಿದ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ. ಕೃತಿಗಳು: ಮಹೋನ್ನತಿ(ಸಾಮಾಜಿಕ ಕಾದಂಬರಿ), ಮನ್ವಂತರ(ವೈಚಾರಿಕ ಕಾದಂಬರಿ) ...
READ MORE