ಮೂಕಜ್ಜಿಯ ಕನಸುಗಳು

Author : ಶಿವರಾಮ ಕಾರಂತ

Pages 280

₹ 175.00

Buy Now


Year of Publication: 2014
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

ಡಾ. ಕೆ. ಶಿವರಾಮ ಕಾರಂತರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ-ಮೂಕಜ್ಜಿಯ ಕನಸುಗಳು. ವೈಚಾರಿಕತೆ ಮತ್ತು ಮಾನವೀಯತೆಯ ಸಮನ್ವಯವನ್ನು ಕಥಾನಾಯಕಿ ಮೂಕಜ್ಜಿ ಸಾರುತ್ತಾಳೆ. ಭಾರತೀಯ ಧರ್ಮಶಾಸ್ತ್ರದಲ್ಲಿ ಪ್ರಾಚೀನ ಕಾಲದ ಋಷಿಮುನಿಗಳು ಅಂತರ್‌ ದೃಷ್ಟಿಯುಳ್ಳವರಾಗಿದ್ದರು ಎಂಬ ವಿಷಯವನ್ನು ದೇವರು, ಧರ್ಮದಲ್ಲಿ ವಿಶ್ವಾಸ ಇರುವ ಎಲ್ಲರೂ ಇಂದಿಗೂ ನಂಬುತ್ತಾರೆ. ಅದನ್ನೇ ಇಂದಿನ ವಿಜ್ಞಾನ 'ಅತೀಂದ್ರಿಯ ಜ್ಞಾನ' ಎಂಬ ಹೆಸರಿನಿಂದ ಕರೆದು, ಅದರ ಅಸ್ತಿತ್ವದ ಕುರಿತು ಪುರಾವೆಗಳನ್ನು ಕಲೆಹಾಕಲು ಪ್ರಯತ್ನಿಸಿದೆ.

ಹಿಂದೂ ಧರ್ಮದ ಬೆಳವಣಿಗೆಯ ಇತಿಹಾಸವನ್ನು ಬಿಚ್ಚಿತೋರಿಸಿ, ವೈದಿಕ ಯುಗದಿಂದ ತೊಡಗಿ, ಅದರ ನಂತರ ಹಿಂದೂ ಧರ್ಮದಲ್ಲಿ ನಡೆದ ಹಲವಾರು ಪರಿವರ್ತನೆಗಳ ದೆಸೆಯಿಂದ ಹುಟ್ಟಿಕೊಂಡ ವಿವಿಧ ಮತ, ಧರ್ಮ, ಪಂಥ, ದೇವರುಗಳ ಪುರಾಣಗಳನ್ನೆಲ್ಲಾ ಕಾದಂಬರಿಕಾರರು ಮೂಕಜ್ಜಿಯ ಅತೀಂದ್ರಿಯ ಜ್ಞಾನದ ಮೂಲಕ ಬಿತ್ತರಿಸುತ್ತಾರೆ. ಮನುಷ್ಯ ತನ್ನ ಕಲ್ಪನೆಗಳಿಂದ ಸೃಷ್ಟಿಸಿದ ದೇವರು, ಕಾಲ ಕಾಲಕ್ಕೆ ಬದಲಾದ ಇತಿಹಾಸ ಈ ಕಾದಂಬರಿಯಲ್ಲಿ ಬಿಚ್ಚಿಕೊಳ್ಳುತ್ತದೆ. ಕುಲ, ಗೋತ್ರ, ಬಳಿ, ರೀತಿ, ರಿವಾಜು, ಅನಾದಿ ಕಾಲದ ಜನರ ಮುಗ್ದ ಲೈಂಗಿಕ ಕ್ರಿಯೆ, ತನ್ಮೂಲಕ ಲಿಂಗ-ಯೋಜನಿಗಳ ಸಂಕೇತ ಎನಿಸಿದ ಶಿವ-ಮಾತೃದೇವತೆಯ ಆರಾಧನೆ ಹುಟ್ಟಿಕೊಂಡ ಹಿನ್ನೆಲೆಗಳನ್ನೆಲ್ಲ ಮೂಕಜ್ಜಿಯು ತನ್ನ ಪ್ರಖರವಾದ ವೈಚಾರಿಕ ತರ್ಕ ಸರಣಿಗಳ ಮೂಲಕ ವಿವರಿಸುತ್ತಾಳೆ.  ಒಂದು ಕಾಲದಲ್ಲಿ ವಿಶೇಷ ಪೂಜೆ, ಆರಾಧನೆಗಳಿಗೆ ಒಳಗಾಗಿದ್ದ ದೇವರುಗಳು ಕಾಲಕ್ರಮೇಣ ಭಕ್ತರ ಮರವೆಯ ಉಗ್ರಾಣದ ಮೂಲೆ ಹಿಡಿದು, ಅವರ ಸ್ಥಾನದಲ್ಲಿ ಹೊಸ ಹೊಸ ದೇವರುಗಳು ಸೃಷ್ಟಿಗೊಂಡ ಕತೆಯನ್ನು ಮೂಕಜ್ಜಿ ಯಾವ ಮುಲಾಜೂ ಇಲ್ಲದೆ ಬಯಲಿಗೆಳೆಯುತ್ತಾಳೆ. ನಾಲೈದು ಸಾವಿರ ವರ್ಷಗಳಿಂದ ನಡೆದು ಬಂದ ಹಿಂದೂ ಧರ್ಮ, ಸಂಸ್ಕೃತಿ ಹಾಗೂ ಅದರಿಂದಾಗಿ ಹುಟ್ಟಿಕೊಂಡ ಸಮಸ್ಯೆಗಳ ಮಂಥನವನ್ನು ಮೂಕಜ್ಜಿ ತನ್ನ ಕನಸುಗಳೆಂಬ ಅತೀಂದ್ರಿಯ ಜ್ಞಾನದ ಮೂಲಕ ತೆರೆದಿಡುತ್ತಾಳೆ. ಮನುಷ್ಯರು ಸೃಷ್ಟಿಸಿದ ದೇವರುಗಳಿಗೇ ತಂತಮ್ಮ ಹೆಂಡಂದಿರಿಂದ ಮುಕ್ತಿ ಇಲ್ಲದಿರುವಾಗ ಸಂಸಾರದಿಂದ ವಿಮುಖನಾಗಬಯಸುವುದು ಹಾಸ್ಯಾಸ್ಪದ. ಅವಳ ಪ್ರಕಾರ, ಗಂಡು-ಹೆಣ್ಣಗಳ ಮೋಹ ಅವರರವರು ಮಾಡಿಕೊಂಡಿದ್ದಕ್ಕಿಂತಲೂ ಹೆಚ್ಚಾಗಿ ಸೃಷ್ಟಿಯೇ ಜೀವಿಗಳೊಳಗೆ ತುಂಬಿಸಿಟ್ಟ ಪ್ರೇರಣೆ ಎಂಬಂತಹ ವಿಚಾರಗಳನ್ನು ಹೇಳಿ ಮೂಕಜ್ಜಿ ಕೇಳುಗರಲ್ಲಿ ಅಚ್ಚರಿ ಮೂಡಿಸುತ್ತಾಳೆ. ಇದೇ ಈ ಕಾದಂಬರಿಯ ಕುತೂಹಲವೂ, ವೈಜ್ಞಾನಿಕವಾಗಿ ಸವಾಲು ಆಗುತ್ತದೆ.  ವೈಚಾರಿಕತೆ ಹಾಗೂ ಮಾನವೀಯತೆಯ ಸಮನ್ವಯದ ಕಥೆ ಇದು. 

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1968ರಲ್ಲಿ (ಪುಟ: 290) ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು. 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Awards & Recognitions

Related Books