‘ಓಡಿ ಹೋದಾಕಿ’ ಕೃತಿಯು ಬಿ.ಜೆ ಪಾರ್ವತಿ ಸೊನಾರೆ ಅವರ ಕಾದಂಬರಿಯಾಗಿದೆ. ಉತ್ತರ ಕರ್ನಾಟಕದ ಭಾಷಾ ಶೈಲಿಯಲ್ಲಿ ಬರೆದಿರುವ ಈ ಕಾದಂಬರಿಯು ಹಳ್ಳಿಯ ಕಷ್ಟಕಾರ್ಪಣ್ಯಗಳು ಅದಕ್ಕಿಂತಲೂ ಒಂದು ಹೆಣ್ಣಿನ ಕಷ್ಟಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿರುವ ಲೇಖಕಿಯ ಭಾಷಾಶೈಲಿ ಮತ್ತು ಆಕರ್ಷಕ ಪ್ರಸ್ತುತಿಯಿಂದ ಕೃತಿ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಈ ಕೃತಿಯ ಶೀರ್ಷಿಕೆ 'ಓಡಿ ಹೋದಾಕಿ' ಎಂದಿರದೇ, 'ಭವದ ಬವಣೆ' ಎಂದಿರಬೇಕಿತ್ತು ಎಂದು ಮುನ್ನುಡಿ ಬರೆದ ಡಾ. ಬಾಳಾಸಾಹೇಬ ಲೋಕಾಪುರ ಹೇಳುತ್ತಾರೆ. ಊರಿನ ತಳವಾರ ಚಂದ್ರಾಮನ ಹೆಂಡತಿ ನರಸವ್ವ ಅಪರೂಪದ ಸುಂದರಿ. ಆ ಚೆಲುವಿಗೆ ಮನಸೋತು ಊರಿನ ಎಷ್ಟೋ ಜನ ಆಕೆಯನ್ನು ಇಷ್ಟ ಪಡುತ್ತಿದ್ದರು. ಆ ನರಸವ್ವನ ಬದುಕಿನ ಬವಣೆಯೇ ಇಲ್ಲಿನ ಕಥಾವಸ್ತು. ಈ ಕೃತಿಯಲ್ಲಿ ಲೇಖಕಿ ಉತ್ತರ ಕರ್ನಾಟಕದ ಬೆಡಗಿನ ನುಡಿಗಟ್ಟುಗಳು, ಗಾದೆ, ಎಲ್ಲವನ್ನೂ ಸಶಕ್ತವಾಗಿ ಬಳಸಿಕೊಂಡಿದ್ದಾರೆ. ಹಳ್ಳಿಯಲ್ಲಿ ಹರಿಯುವ ನದಿಯನ್ನು ಹಳ್ಳಿಯ ಬದುಕಿಗೆ ಸಾಕ್ಷಿಯಾಗಿ ಒಂದು ರೂಪಕವಾಗಿ ಬಳಸಿಕೊಂಡಿದ್ದಾರೆ.
ಬಿ.ಜೆ. ಪಾರ್ವತಿ. ವಿ. ಸೋನಾರೆ ಅವರು ಮೂಲತಃ ಇವರು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣದ ಹತ್ತಿರವಿರುವ ಕೊಂಕಣಗಾಂವ ಎಂಬ ಗ್ರಾಮದವರು . ತಂದೆ ಜಟಿಂಗರಾಯ ಡಫಳಾಪೂರ ತಾಯಿ ಭೀಮಬಾಯಿ ಡಫಳಾಪೂರ. ವಿಜಯ ಕುಮಾರ ಸೋನಾರೆಯವರ ಕೈಹಿಡಿದು ಬೀದರಿನ ವಿಜಯಕಾಲೋನಿಯ ನೆಲೆಸಿದ್ದಾರೆ. ಇವರು ಅನೇಕ ನಾಟಕ, ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂದ ಪ್ರಶಸ್ತಿ ಪುರಸ್ಕಾರ ,ಸನ್ಮಾನಗಳು ಅನೇಕ. 2011 ರಲ್ಲಿ “ ದ ಬ್ಲೆಂಡ್ ಫೇತ್” ಕಿರುಚಿತ್ರದ ನಟನೆಗಾಗಿ "excellent actor" ಎಂಬ ಪ್ರಶಸ್ತಿ ದೊರೆತಿದೆ. 2016 ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಕಲಬುರ್ಗಿ ವಿ.ವಿ. "ದಿ.ಜಯತೀರ್ಥ ರಾಜಪುರೋಹಿತ ಸ್ಮಾರಕ ...
READ MORE(ಕೃಪೆ: ಕನ್ನಡ ಪ್ರಭ, ದಿನಾಂಕ:ಅ.06, 2024)
ಸೌಂದರ್ಯ ವತಿಯೊಬ್ಬಳ ಬದುಕಿನ ಪುಟಗಳು
ಉತ್ತರ ಕರ್ನಾಟಕದ ಭಾಷಾ ಶೈಲಿಯಲ್ಲಿ ಬರೆದಿರುವ ಕಾದಂಬರಿ. ಹಳ್ಳಿಯ ಕಷ್ಟಕಾರ್ಪಣ್ಯಗಳು ಅದಕ್ಕಿಂತಲೂ ಒಂದು ಹೆಣ್ಣಿನ ಕಷ್ಟಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿರುವ ಲೇಖಕಿಯ ಭಾಷಾಶೈಲಿ ಮತ್ತು ಆಕರ್ಷಕ ಪ್ರಸ್ತುತಿಯಿಂದ ಕೃತಿ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಈ ಕೃತಿಯ ಶೀರ್ಷಿಕೆ 'ಓಡಿ ಹೋದಾಕಿ' ಎಂದಿರದೇ, 'ಭವದ ಬವಣೆ' ಎಂದಿರಬೇಕಿತ್ತು ಎಂದು ಮುನ್ನುಡಿ ಬರೆದ ಡಾ. ಬಾಳಾಸಾಹೇಬ ಲೋಕಾಪುರ ಹೇಳುತ್ತಾರೆ. ಊರಿನ ತಳವಾರ ಚಂದ್ರಾಮನ ಹೆಂಡತಿ ನರಸವ್ವ ಅಪರೂಪದ ಸುಂದರಿ. ಆ ಚೆಲುವಿಗೆ ಮನಸೋತು ಊರಿನ ಎಷ್ಟೋ ಜನ ಆಕೆಯನ್ನು ಇಷ್ಟ ಪಡುತ್ತಿದ್ದರು. ಆ ನರಸವ್ವನ ಬದುಕಿನ ಬವಣೆಯೇ ಇಲ್ಲಿನ ಕಥಾವಸ್ತು. ಈ ಕೃತಿಯಲ್ಲಿ ಲೇಖಕಿ ಉತ್ತರ ಕರ್ನಾಟಕದ ಬೆಡಗಿನ ನುಡಿಗಟ್ಟುಗಳು, ಗಾದೆ, ಎಲ್ಲವನ್ನೂ ಸಶಕ್ತವಾಗಿ ಬಳಸಿಕೊಂಡಿದ್ದಾರೆ. ಹಳ್ಳಿಯಲ್ಲಿ ಹರಿಯುವ ನದಿಯನ್ನು ಹಳ್ಳಿಯ ಬದುಕಿಗೆ ಸಾಕ್ಷಿಯಾಗಿ ಒಂದು ರೂಪಕವಾಗಿ ಬಳಸಿಕೊಂಡಿದ್ದಾರೆ.